

ಹೈದ್ರಾಬಾದ್: ( abhinaya ) ಪುರಿ ಜಗನ್ನಾಥ್ ನಿರ್ದೇಶನದ "ನೆನಿಂತೆ" ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದ ನಟಿ ಅಭಿನಯ. ಈಕೆ ಹುಟ್ಟಿನಿಂದಲೇ ಮಾತು ಬರಲ್ಲ ಮತ್ತು ಕಿವಿ ಕೇಳುವುದಿಲ್ಲ. ಆದರೂ ದೃಢ ಸಂಕಲ್ಪದಿಂದ ನಟಿಯಾಗುವ ಆಸೆಯನ್ನು ಈಡೇರಿಸಿಕೊಂಡಳು. ಅಭಿನಯ ವೈಯಕ್ತಿಕ ಜೀವನದ ಕುರಿತಾಗಿ ಹಬ್ಬಿತ್ತಿರುವ ಸುದ್ದಿ ಕುರಿತಾಗಿ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.
ಚಿತ್ರರಂಗದಲ್ಲಿ ಸಾಕಷ್ಟು ಪ್ರತಿಭಾವಂತ ನಟರಿದ್ದಾರೆ. ಮಾತು ಬರಲ್ಲ ಮತ್ತು ಕಿವಿ ಕೇಳುವುದಿಲ್ಲ..ಈ ನಟಿ ತುಂಬಾ ಸ್ಪೆಷಲ್.. ಕಣ್ಣುಗಳಿಂದಲೇ ಭಾವನೆಗಳನ್ನು ಹೇಳಬಲ್ಲಳು. ಇವರ ಅಭಿನಯಕ್ಕೆ ಎಲ್ಲರೂ ಬೆರಗಾಗಬೇಕು.. ಆಕೆ ಬೇರೆ ಯಾರೂ ಅಲ್ಲ ಅಭಿನಯ. ಅಭಿನಯಾ ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಭಿನಯ ಹಲವು ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸಿ ಪ್ರೇಕ್ಷಕರ ಮನಸೂರೆಗೊಂಡಿದ್ದಾರೆ.
ಸಾಮಾನ್ಯವಾಗಿ ಚಿತ್ರರಂಗದಲ್ಲಿ ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ಗಾಸಿಪ್‌ಗಳು ಹರಿದಾಡುವುದು ಸಹಜ. ಅಭಿನಯಾ ಕೂಡ ಇದಕ್ಕೆ ಹೊರತಾಗಿಲ್ಲ. ಕಳೆದ ವರ್ಷ ವಿಶಾಲ್ ಜೊತೆ ಅಭಿನಯಾ ಹೆಸರು ತಳುಕು ಹಾಕಿಕೊಂಡಿತ್ತು. ಇಬ್ಬರೂ ಮದುವೆಯಾಗಲಿದ್ದಾರೆ ಎಂದು ಸುದ್ದಿಯಾಗಿತ್ತು.
ಈ ನಡುವೆ ಆಕೆ ಸ್ಟಾರ್ ಹೀರೋ ವಿಶಾಲ್ ಜೊತೆ ಲವ್ ಮಾಡುತ್ತಿದ್ದಾಳೆ ಎಂಬ ಸುದ್ದಿ ಹರಿದಾಡಿತ್ತು. ಅದಕ್ಕೆ ಅಭಿನಯ ಕೂಡ ಸ್ಪಷ್ಟನೆ ನೀಡಿದ್ದಾರೆ. ತನಗೆ ವಿಶಾಲ್ ಎಂದರೆ ತುಂಬಾ ಇಷ್ಟ ಮತ್ತು ಅವನು ತನ್ನ ನೆಚ್ಚಿನ ನಟ ಎಂದು ಹೇಳಿದ್ದಾಳೆ. ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಆಕೆ ಸಂದರ್ಶನವೊಂದರಲ್ಲಿ ಮಾತನಾಡಿ, "ಕಳೆದ 15 ವರ್ಷಗಳಿಂದ ನಾನು ಪ್ರೀತಿಯಲ್ಲಿದ್ದೇನೆ. ಅವರು ನನ್ನ ಬಾಲ್ಯದ ಗೆಳೆಯ. ನಮಗೇ ತಿಳಿಯದಂತೆ ನಾವಿಬ್ಬರೂ ಪ್ರೀತಿಸಲು ಶುರುಮಾಡಿದೆವು. ಇನ್ಮೇಲೆ ನನ್ನನ್ನು ಯಾವ ನಟರ ಜೊತೆಯೂ ಹೋಲಿಸಿ ಮಾತನಾಡಬೇಡಿ" ಎಂದಿದ್ದಾರೆ. ಶೀಘ್ರದಲ್ಲೇ ಅಭಿನಯಾ ಮದುವೆ ಸುದ್ದಿ ಹೊರಬೀಳಬಹುದು ಎಂದು ನಿರೀಕ್ಷಿಸಲಾಗಿದೆ. ಆತ ಯಾರೆಂದು ಹೇಳಲಿಲ್ಲ. ಸದ್ಯದಲ್ಲೇ ಸ್ಪಷ್ಟನೆ ಸಿಗುತ್ತದೆಯೇ ನೋಡೋಣ.