ರೈತ ಹೋರಾಟಕ್ಕೆ ಮತ್ತೋರ್ವ ರೈತ ಬಲಿ! ಈವರೆಗೆ ಐದು ರೈತರ ಕೊನೆಯುಸಿರು

former
Published on

ನವದೆಹಲಿ: ದೆಹಲಿಯಲ್ಲಿ ರೈತ ಹೋರಾಟದ ಕಿಚ್ಚು ಹೆಚ್ಚಾಗಿದ್ದು, ಇಂದು ನಡೆಯಬೇಕಿದ್ದ ಆರನೇ ಸುತ್ತಿನ ಮಾತುಕತೆಯೂ ರದ್ದಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಚಳಿಯೂ ಹೆಚ್ಚಾಗಿರುವುದರಿಂದಾಗಿ ಇಂದು 32 ವರ್ಷದ ರೈತನೊಬ್ಬ ಕೊನೆಯುಸಿರೆಳೆದಿದ್ದಾನೆ.

ಹರಿಯಾಣ ಮೂಲದ ಅಜಯ್​ ಮೋರ್​ ಮೃತನಾದ ದುರ್ದೈವಿ. ಈತ ಕಳೆದ 10 ದಿನಗಳಿಂದ ಹೋರಾಟದಲ್ಲಿ ಭಾಗವಹಿಸಿದ್ದ. ಚಳಿ ಹೆಚ್ಚಿದ್ದಿದ್ದರಿಂದ ಅದನ್ನು ತಾಳಲಾರರೆ ರೈತ ಮಂಗಳವಾರ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಅಜಯ್​ಗೆ ವಯಸ್ಸಾದ ತಂದೆ ತಾಯಿಯಿದ್ದಾರೆ. ಮೂರು ಚಿಕ್ಕ ಮಕ್ಕಳಿರುವುದಾಗಿ ಎನ್​ಡಿಟಿವಿ ವರದಿ ಮಾಡಿದೆ. ರೈತ ಹೋರಾಟ ಆರಂಭವಾದ 14 ದಿನಗಳಲ್ಲಿ ಐವರು ರೈತರು ಸಾವಿಗೀಡಾಗಿರುವುದಾಗಿ ಹೇಳಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net