VIRAL VIDEO | ಬೆಳೆಯನ್ನು ರಕ್ಷಿಸಿಕೊಳ್ಳಲು ರೈತನ ಈ ವಿಭಿನ್ನ ಪ್ರಯತ್ನಕ್ಕೆ ನೆಟ್ಟಿಗರು ಫಿದಾ!

Untitled design (93)
Published on

ಬೆಂಗಳೂರು: ಸಾಮಾನ್ಯವಾಗಿ ನಮಗೆ ನಿಮೆಗೆಲ್ಲಾ ತಿಳಿದಿರುವಂತೆ ಪ್ರತಿಯೊಬ್ಬ ರೈತನು ಕೂಡ ತಾವು ಬೆಳೆದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಾರೆ. ಫಸಲು ಬರುವವರೆಗೂ ಅದನ್ನು ಸುರಕ್ಷಿತವಾಗಿ ನೋಡಿಕೊಳ್ಳಲು ವಿಧವಿಧವಾದ ಪ್ರಯತ್ನಗಳನ್ನು ಪ್ರಯೋಗಿಸುವಲ್ಲಿ ನಿರತರಾಗಿರುತ್ತಾರೆ.

ಪ್ರತಿ ಬೆಳೆಗೂ ಪ್ರಾಣಿ-ಪಕ್ಷಿಗಳ ಹಾವಳಿ ಇದ್ದೇ ಇರುತ್ತದೆ. ಇದನ್ನು ರೈತರೂ ಕೂಡ ತಪ್ಪು ಎನ್ನುವುದಿಲ್ಲ. ಆದ್ರೆ, ಫಸಲು ಉಳಿಸಿಕೊಳ್ಳುವುದು ಮಾತ್ರ ರೈತಾಪಿ ವರ್ಗದ ಮುಖ್ಯ ಉದ್ದೇಶವಾಗಿರುತ್ತದೆ. ಈ ಪೈಕಿ ಇಲ್ಲೊಬ್ಬ ರೈತ ಮಾಡಿರುವ ವಿಭಿನ್ನ ಪ್ರಯತ್ನಕ್ಕೆ ನೆಟ್ಟಿಗರು ಫಿದಾ ಆಗಿದ್ದು, ವ್ಯಾಪಕ ಮೆಚ್ಚುಗೆ ಸೂಚಿಸಿದ್ದಾರೆ.

ವಿವಿಧ ಬಗೆಯ ಬೆಳೆಗಳನ್ನು ಕಾಣುತ್ತಿದ್ದಂತೆ ಪ್ರಾಣಿ-ಪಕ್ಷಿಗಳು ಅದನ್ನು ತಿನ್ನುವ ಮುಖೇನ ಅದರ ಬೆಳವಣಿಗೆಯನ್ನು ಹಾಳು ಮಾಡುತ್ತದೆ. ಸತತ ಏಳು ತಿಂಗಳು, ಒಂದು ವರ್ಷಗಳ ನಿರಂತರ ಶ್ರಮವನ್ನು ವ್ಯರ್ಥ ಮಾಡಿಕೊಳ್ಳಲು ಬಯಸದ ರೈತ, ಬೆಳೆದ ಬೆಳೆಗೆ ಮುಳ್ಳಿನ ಬೇಲಿ, ವಿದ್ಯುತ್​ ತಂತಿ, ಕಲ್ಲು ಕಂಬದ ಜತೆ ಪರದೆ, ಶೀಟ್​, ವಾಸನೆ ಭರಿತ ಔಷಧಿ, ಬೆದರು ಬೊಂಬೆಗಳನ್ನು ಬಳಸುವ ಮೂಲಕ ಪ್ರಾಣಿಗಳ ದಾಳಿಯನ್ನು ತಡೆಯುವ ಪ್ರಯತ್ನ ಮಾಡುತ್ತಾನೆ. ಆದ್ರೂ, ಹಲವೊಮ್ಮೆ ಈ ಪ್ರಯತ್ನಗಳು ವಿಫಲವಾಗುತ್ತದೆ.

ಇದೀಗ ಇಲೊಬ್ಬ ರೈತ ಸೈಕಲ್​ಗೆ ಅಳವಡಿಸುವ ಹ್ಯಾಂಡಲ್​ ಬಾರ್​ ಬಳಸಿಕೊಂಡು ಅದಕ್ಕೆ ಜಪ್ಪಿಂಗ್​ ಸ್ಪ್ರಿಂಗ್​​ ಜೋಡಿಸಿ, ಮೇಲೆ ಮತ್ತು ಕೆಳಗೆ ಕುಣಿಯುವಂತೆ ಮಾಡಿದ್ದಾರೆ. ಮಾನವನಂತೆಯೇ ಇರುವ ಗೊಂಬೆಯೊಂದನ್ನು ನಿರ್ಮಿಸಿ, ಅದರ ತೋಳುಗಳನ್ನು ಹ್ಯಾಂಡಲ್​ನ ಎರಡು ಕೊನೆಗೆ ಕಟ್ಟಿ ಹಾರಡಲು ಬಿಟ್ಟಿದ್ದಾರೆ.

ಇದು ಗಾಳಿಗೆ ತಕ್ಕಂತೆ ಸುತ್ತಮುತ್ತಲೂ ತಿರುಗುವುದರಿಂದ ಯಾರೋ ಒಬ್ಬರು ಓಡಾಡುತ್ತಿದ್ದಾರೆ ಎಂದೇ ಭಾಸವಾಗುತ್ತದೆ. ಈ ರೀತಿ ಪ್ರಾಣಿ-ಪಕ್ಷಿಗಳ ಹಾವಳಿಯಿಂದ ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳುವ ರೈತನ ಈ ಒಂದು ಪ್ರಯತ್ನ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋಗೆ ವ್ಯಾಪಕ ಮೆಚ್ಚುಗೆ ಮತ್ತು ಲೈಕ್​ಗಳು ದೊರೆತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net