ತುಮಕೂರಿನ ಇಸ್ರೋ ಪ್ರಪುಲೆಂಟ್ ಉತ್ಪಾದನಾ ಘಟಕ ಶೀಘ್ರ ಆರಂಭ; ಇಸ್ರೋ ಅಧ್ಯಕ್ಷ ಡಾ.ಸೋಮನಾಥ್ ಭರವಸೆ

403055594_752168516932350_121227860979398564_n
Published on

ತುಮಕೂರು: ನಗರದಲ್ಲಿ ಸ್ಥಾಪಿಸಲಾಗಿರುವ ಇಸ್ರೋ ಘಟಕ 2024ರ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಆರಂಭವಾಗಲಿದೆ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಆಂತರಿಕ್ಷ ಭವನದಲ್ಲಿ ಇಸ್ರೋ ಅಧ್ಯಕ್ಷ ಡಾ.ಸೋಮನಾಥ್ ಭೇಟಿಯಾಗಿ ಅವರನ್ನು ಗೌರವಿಸುವ ಜತೆಗೆ, ತುಮಕೂರಿನ ಪ್ರೊಪುಲೆಂಟ್ ಟ್ಯಾಂಕರ್‌ಗಳ ಉತ್ಪಾದನಾ ಘಟಕ ಶೀಘ್ರ ಕಾರ್ಯಾರಂಭ ಮಾಡುವಂತೆ ಜಿಲ್ಲೆಯ ಜನರ ಪರವಾಗಿ ಮನವಿ ಮಾಡಿದ್ದೇನೆ ಎಂದರು.

ತುಮಕೂರು ಘಟಕದಲ್ಲಿ ಪ್ರುಪುಲೆಂಟ್ ಉದ್ಪಾದನೆ ನಡೆಯಲಿದ್ದು ಇದನ್ನು ಉಪಗ್ರಹಗಳಲ್ಲಿ ಬಳಸಲಾಗುತ್ತಿದೆ. ಇಂತಹ ಮಹತ್ವದ ಸಲಕರಣೆ ತುಮಕೂರು ಘಟಕದಲ್ಲಿ ಉತ್ಪಾದಿಸಲಾಗುವುದು ತುಮಕೂರಿನ ಪ್ರತಿಷ್ಠೆ ಹೆಚ್ಚಿಸಲಿದೆ ಎಂದರು.

ಉಪಗ್ರಹಗಳಿಗೆ ಉಪಯೋಗವಾಗುವ ಟ್ಯಾಂಕರ್‌ಗಳ ನಿರ್ಮಾಣ ಮಾಡುವ ಘಟಕ ತಲೆ ಎತ್ತಿದ್ದು ಆರಂಭವಾದರೆ ತುಮಕೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲಿದೆ ಎಂದರು.

ತುಮಕೂರಿನ ಅಭಿವೃದ್ಧಿ ಇನ್ನು ಮುಂದುವರಿಯಲು ಮತ್ತು ಎಚ್‌ಎಂಟಿ ಮುಚ್ಚಿದ್ದರಿಂದ ಆಗಿರುವ ಉದ್ಯೋಗ ನಷ್ಟ ಹಾಗೂ ಇನ್ನಿತರೆ ಪರಿಣಾಮಗಳನ್ನು ಸರಿದೂಗಿಸಲು ಇಸ್ರೋ ಉತ್ಪಾದನಾ ಘಟಕ ಕಾರ್ಯಾರಂಭ ಮಾಡುವ ಮೂಲಕ ಉದ್ಯೋಗಗಳು ಸೃಷ್ಠಿಯಾಗಿ ಆದಷ್ಟೂ ಸ್ಥಳೀಯರಿಗೂ ಹೆಚ್ಚು ಅವಕಾಶಗಳು ಸಿಗುವಂತೆ ಇಸ್ರೋ ತೀರ್ಮಾನಿಸುವಂತೆ ಅಧ್ಯಕ್ಷರಲ್ಲಿ ಮನವಿ ಮಾಡಿದ್ದೇನೆ ಎಂದರು.

ತುಮಕೂರಿನ ಅಭಿವೃದ್ಧಿ ಇನ್ನೂ ಮುಂದುವರಿಯಲು ಮತ್ತು ಎಚ್‌ಎಂಟಿ ಮುಚ್ಚಿದ್ದರಿಂದ ಆಗಿರುವ ಉದ್ಯೋಗ ನಷ್ಟ ಹಾಗೂ ಇನ್ನಿತರೆ ಪರಿಣಾಮಗಳನ್ನು ಸರಿದೂಗಿಸಲು ಇಸ್ರೋ ಉತ್ಪಾದನಾ ಘಟಕ ಕಾರ್ಯಾರಂಭ ಮಾಡುವ ಮೂಲಕ ಉದ್ಯೋಗಗಳು ಸೃಷ್ಠಿಯಾಗಿ ಆದಷ್ಟೂ ಸ್ಥಳೀಯರಿಗೂ ಹೆಚ್ಚು ಅವಕಾಶಗಳು ಸಿಗುವಂತೆ ಇಸ್ರೋ ತೀರ್ಮಾನಿಸುವಂತೆ ಅಧ್ಯಕ್ಷರಲ್ಲಿ ಮನವಿ ಮಾಡಿದ್ದೇನೆ.
ಎಸ್.ಪಿ.ಮುದ್ದಹನುಮೇಗೌಡ
ಮಾಜಿ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net