More

    ವಿಶ್ವಕಪ್​ ಫಿನಾಲೆ: ರೋಹಿತ್​​ಗೆ ಕಾಡುತ್ತಿದೆ ಈ ಚಿಂತೆ, ಆದ್ರೂ ಆಸಿಸ್​ ಬಗ್ಗೆ ಸ್ಪಷ್ಟ ಅರಿವಿದೆ ಎಂದ ನಾಯಕ

    ನವದೆಹಲಿ: ಪ್ರಸಕ್ತ ವಿಶ್ವಕಪ್ ಟೂರ್ನಿ​ಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಹೀನಾಯ ಸೋಲನ್ನು ಅನುಭವಿಸಿ, ಉಳಿದ 8 ಪಂದ್ಯಗಳಲ್ಲಿ ಅದ್ಭುತ ಗೆಲುವಿನೊಂದಿಗೆ ಪುಟಿದೆದ್ದಿರುವ ಆಸ್ಟ್ರೇಲಿಯಾ ಟೂರ್ನಿಯಲ್ಲಿ ಮೇಲುಗೈ ಸಾಧಿಸಿದೆ ಎಂದು ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ ಅಭಿಪ್ರಾಯಪಟ್ಟಿದ್ದಾರೆ.

    ನಾಳೆ (ನ.19) ವಿಶ್ವಕಪ್​ ಟೂರ್ನಿಯ ಹೈವೋಲ್ಟೇಜ್​ ಪಂದ್ಯಕ್ಕೂ ಮುನ್ನ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ರೋಹಿತ್​, ನಿರ್ಣಾಯಕ ಹಂತದಲ್ಲಿ ಅಥವಾ ದೊಡ್ಡ ವೇದಿಕೆಯಲ್ಲಿ ಆಸಿಸ್​ ಪಡೆ ಏನು ಮಾಡಬಹುದು ಎಂಬುದರ ಬಗ್ಗೆ ನನಗೆ ಸ್ಪಷ್ಟ ಅರಿವಿದೆ ಎಂದು ರೋಹಿತ್ ಹೇಳಿದರು. ಅಲ್ಲದೆ, ಮಹತ್ವದ ಪಂದ್ಯದಲ್ಲಿ ಆಸಿಸ್​ ಪ್ರಾಬಲ್ಯದ ಬಗ್ಗೆ ಎಚ್ಚರಿಕೆಯಿಂದ ಇರುವುದಾಗಿಯೂ ತಿಳಿಸಿದ್ದಾರೆ.

    ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಐದು ಬಾರಿ ಚಾಂಪಿಯನ್ಸ್​ ಆಗಿರುವ ಆಸಿಸ್​, ನ.16ರಂದು ನಡೆದ ಎರಡನೇ ಸೆಮಿಫೈನಲ್​ನಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಮಣಿಸಿ ಫೈನಲ್​ ಸುತ್ತಿಗೇರಿದೆ. ಟೂರ್ನಿಯ ಪ್ರಮುಖ ಪಂದ್ಯಗಳಲ್ಲಿ ಅತ್ಯುತ್ತಮ ಆಟವಾಡಿ ಫೈನಲ್​ಗೆ ಬಂದು ತಲುಪಿರುವುದು ಭಾರತ ತಂಡಕ್ಕೆ ಬಹು ದೊಡ್ಡ ಸವಾಲು ಎಂಬುದನ್ನು ನಾವು ತಳ್ಳಿಹಾಕುವಂತಿಲ್ಲ.​

    ಆಸಿಸ್​ ಬಗ್ಗೆ ಮಾತನಾಡಿದ ರೋಹಿತ್​, ಅವರು ಪ್ರಾಬಲ್ಯ ಹೊಂದಿಲ್ಲ ಎಂಬುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಕಳೆದ 8 ಪಂದ್ಯಗಳನ್ನು ಅವರು ಜಯಿಸಿದ್ದಾರೆ ಮತ್ತು ಎಲ್ಲರು ಅತ್ಯುತ್ತಮವಾಗಿ ಆಟವಾಡಿದ್ದಾರೆ. ಹೀಗಾಗಿ ನಾಳಿನ ಫೈನಲ್​ ಪಂದ್ಯ ಒಳ್ಳೆಯ ಸ್ಪರ್ಧೆಯಾಗಿರಲಿದೆ. ಎರಡೂ ತಂಡಗಳು ಈ ಹಂತದಲ್ಲಿರಲು ಅರ್ಹವಾಗಿವೆ ಮತ್ತು ಫೈನಲ್‌ನಲ್ಲಿ ಆಡುತ್ತವೆ. ಆಸ್ಟ್ರೇಲಿಯಾ ಏನು ಮಾಡಬಹುದು ಎಂಬುದರ ಮಹತ್ವವನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಎಂದು ರೋಹಿತ್​ ಹೇಳಿದರು.

    ಎದುರಾಳಿಯ ಬಗ್ಗೆ ಭಾರತ ಹೆಚ್ಚು ಚಿಂತಿಸಲು ಬಯಸುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳಿದ ರೋಹಿತ್​, ನಮ್ಮ ತಂಡವು ನಮ್ಮದೇಯಾದ ಯೋಜನೆಗಳ ಮೇಲೆ ಗಮನ ಹರಿಸಿ, ಆಟವನ್ನು ಗೆಲ್ಲುವುದರ ಕಡೆಗೆ ಚಿಂತಿಸುತ್ತೇವೆ ಎಂದರು. ಆಸಿಸ್​ ಒಂದು ಪೂರ್ಣ ಭಾಗವಾಗಿದೆ. ನಾವು ಒಂದು ತಂಡವಾಗಿ ಏನು ಮಾಡಬೇಕೆಂದು ಬಯಸುತ್ತೇವೆ ಎಂಬುದು ತುಂಬಾ ಮುಖ್ಯ. ಈ ಪಂದ್ಯಾವಳಿಯಲ್ಲಿ ನಾನು ಈ ಹಿಂದೆಯೇ ಅನೇಕ ಬಾರಿ ಹೇಳಿದ್ದೇನೆ ಮತ್ತು ಈಗ ಮತ್ತೊಮ್ಮೆ ಅದೇ ವಿಷಯ ಹೇಳುತ್ತೇನೆ. ನಾವು ಎದುರಾಳಿಯ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಹೇಳಿದರು.

    ಅಂದಹಾಗೆ ಭಾರತ ವಿಶ್ವಕಪ್​ ಟೂರ್ನಿಯಲ್ಲಿ ಲೀಗ್​ ಹಂತದಲ್ಲಿ 9 ಮತ್ತು ಒಂದು ಸೆಮಿಫೈನಲ್​ ಸೇರಿ ಆಡಿದ 10 ಪಂದ್ಯಗಳಲ್ಲೂ ಜಯ ಸಾಧಿಸಿದೆ. ಪ್ರತಿಯಾಗಿ ಆಸ್ಟ್ರೇಲಿಯಾ ತಂಡ 10 ಪಂದ್ಯಗಳಲ್ಲಿ ಎರಡರಲ್ಲಿ ಸೋತು ಉಳಿದ ಎಂಟು ಪಂದ್ಯಗಳಲ್ಲಿ ಜಯಸಿದೆ. ಅ.8ರಂದು ಚೆನ್ನೈ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಲೀಗ್​ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತು. ಇದೀಗ ಫೈನಲ್​ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದು, ಟ್ರೋಫಿ ಯಾರಾ ಪಾಲಾಗುತ್ತದೆ ಎಂಬುದು ನಾಳೆ ರಾತ್ರಿ ಗೊತ್ತಾಗಲಿದೆ. (ಏಜೆನ್ಸೀಸ್​)

    ಫೈನಲ್​ನಲ್ಲಿ ನೋಡಿ! ಡ್ರೆಸ್ ಬಗ್ಗೆ ನಾಲಿಗೆ ಹರಿಬಿಟ್ಟವರಿಗೆ ಮಯಾಂತಿ ಕೊಟ್ಟ ಮಾತಿನ ಪಂಚ್​ ಹೀಗಿತ್ತು…

    ಏಕದಿನ ವಿಶ್ವಕಪ್​ ಫಿನಾಲೆಗೆ ಸಾಕ್ಷಿಯಾಗಲಿದ್ದಾರೆ ಪ್ರಧಾನಿ ಮೋದಿ, ಆಸ್ಟ್ರೇಲಿಯಾದ ಉಪ ಪ್ರಧಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts