More

    ಏಕದಿನ ವಿಶ್ವಕಪ್​ ಫಿನಾಲೆಗೆ ಸಾಕ್ಷಿಯಾಗಲಿದ್ದಾರೆ ಪ್ರಧಾನಿ ಮೋದಿ, ಆಸ್ಟ್ರೇಲಿಯಾದ ಉಪ ಪ್ರಧಾನಿ

    ಅಹಮದಾಬಾದ್: ಭಾನುವಾರ ಅಹಮದಾಭಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ ಟೂರ್ನಿಯ ಫಿನಾಲೆಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಪ್​ಗಾಗಿ ಸೆಣಸಾಡಲಿದ್ದು, ಈ ಪಂದ್ಯಕ್ಕೆ ಗಣ್ಯರ ದಂಡೇ ಸಾಕ್ಷಿಯಾಗಲಿದೆ.

    ಮುಖ್ಯವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗು ಆಸ್ಟ್ರೇಲಿಆಯದ ಉಪಪ್ರಧಾನಿ ರಿಚರ್ಡ್ ಮಾರ್ಲ್ಸ್ ಉಪಸ್ಥಿತರಿರಲಿದ್ದಾರ ಎಂದು ತಿಳಿದು ಬಂದಿದೆ. ಈ ಕುರಿತು ಗುಜರಾತ್​ ಸರ್ಕಾರ ಅಧಿಕೃತವಾಗಿ ತಿಳಿಸಿದೆ.

    ಈ ಕುರಿತು ಗುಜರಾತ್​ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್​ ಅವರ ಕಚೇರಿಯಿಂದ ಅಧಿಕೃತ ಪ್ರಕಟಣೆ ಒಂದನ್ನು ಹೊರಡಿಸಿದ್ದು, ಭದ್ರತೆ, ಸಂಚಾರ ನಿರ್ವಹಣೆ, ಸ್ವಚ್ಛತೆ ಮತ್ತು ಹೆಚ್ಚಿನ ಅಂಶಗಳ ಸಮಗ್ರ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದೆ. ಯಾವುದೇ ಲೋಪದೋಷ ಬಾರದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

    ಒಂಬತ್ತು ಪಂದ್ಯಗಳಲ್ಲಿ ಒಂಬತ್ತರಲ್ಲಿ ಗೆಲುವು ದಾಖಲಿಸಿ ಭಾರತ ಫೈನಲ್ ಪಂದ್ಯ ತಲಪಿದೆ, . ಹಲವಾರು ಪಂದ್ಯಗಳಲ್ಲಿ ಭಾರತದ ತಂಡವು ನಿರ್ಣಾಯಕ, ಪ್ರಶ್ನಾತೀತ ರೀತಿಯಲ್ಲಿ ಎದುರಾಳಿಗಳ ಮೇಲೆ ಪ್ರಾಬಲ್ಯ ಸಾಧಿಸಿತು. 18 ಅಂಕಗಳೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾನುವಾರ ನಡೆಯುವ ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್‌ನಲ್ಲಿ ಪಂದ್ಯಕ್ಕಾಗಿ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts