ಕಳೆದ 62 ವರ್ಷಗಳಲ್ಲಿ ಒಮ್ಮೆಯೂ ನಿದ್ರಿಸದ ರೈತ: ಆತ ಕೊಟ್ಟ ಕಾರಣ ಕೇಳಿದ್ರೆ ನೀವು ದಂಗಾಗ್ತೀರಾ! Sleep

Sleep
Published on

Sleep : ಒಬ್ಬ ಮನುಷ್ಯ ಆರೋಗ್ಯವಾಗಿರಲು ಪೌಷ್ಟಿಕ ಆಹಾರ ಹಾಗೂ ವ್ಯಾಯಾಮದಷ್ಟೇ ಉತ್ತಮ ನಿದ್ರೆಯೂ ಅತ್ಯಗತ್ಯ. ನಿದ್ರೆ ಇಲ್ಲದೆ ಆರೋಗ್ಯವಾಗಿರಲು ಸಾಧ್ಯವೇ ಇಲ್ಲ. ಅಲ್ಲದೆ, ಮುಖದಲ್ಲಿ ಚೈತನ್ಯವೂ ಇರುವುದಿಲ್ಲ. ಮುಖ ಹೂವಿನಂತೆ ಬಾಡಿ ಹೋಗುತ್ತದೆ. ಅದೇ ರೀತಿ ನಮಗೆ ಸಾಕಷ್ಟು ನಿದ್ರೆ ಬಂದರೆ ದಿನವಿಡೀ ಸಕ್ರಿಯವಾಗಿ ಕೆಲಸ ಮಾಡಬಹುದು. ಮೆದುಳಿನ ಚಟುವಟಿಕೆ ಮತ್ತು ಮಾನಸಿಕ ಸ್ಥಿತಿ ಒಟ್ಟಾರೆ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ಜೀವನದಲ್ಲಿ ನಿದ್ರೆ ಬಹಳ ಮುಖ್ಯ.

ಇನ್ನು ನಿದ್ರೆ ಮಾಡುವಾಗಲೂ ನೆಮ್ಮದಿಯುತ ನಿದ್ರೆ ತುಂಬಾ ಮುಖ್ಯ. ಯಾವುದೇ ಕಾರಣಕ್ಕೂ ನಿದ್ರೆಗೆ ಭಂಗ ಉಂಟಾಗಬಾರದು. ಏಕೆಂದರೆ, ರಾತ್ರಿ ಸಾಕಷ್ಟು ನಿದ್ರೆ ಬರದಿದ್ದರೆ ಮರುದಿನ ಯಾವುದೇ ಕೆಲಸದ ಮೇಲೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಓರ್ವ ವ್ಯಕ್ತಿ 62 ವರ್ಷಗಳಿಂದ ನಿದ್ರೆ ಇಲ್ಲದೆ ಬದುಕುತ್ತಿದ್ದಾರೆ ಎಂದರೆ ನೀವು ನಂಬುತ್ತೀರಾ? ನಂಬಲು ಅಸಾಧ್ಯ ಎನಿಸಿದರೂ ಇದೇ ಸತ್ಯ.

ನಿದ್ರೆ ಇಲ್ಲದೆ ಹೆಚ್ಚು ಕಾಲ ಬದುಕಲು ಸಾಧ್ಯವಿಲ್ಲ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿರುವ ಸತ್ಯ. ಆದರೆ, ವೈದ್ಯಕೀಯ ಲೋಕವನ್ನೇ ಬೆರಗುಗೊಳಿಸಿದ ಈ ವ್ಯಕ್ತಿಯ ಬಗ್ಗೆ ನೀವಿಲ್ಲಿ ಇನ್ನಷ್ಟು ತಿಳಿದುಕೊಳ್ಳಬಹುದು.

ಅಂದಹಾಗೆ, ನಾವು ಇಂದು ಹೇಳ ಹೊರಟಿರುವ ವ್ಯಕ್ತಿಯ ಹೆಸರು ಎನ್​ಗೋಕ್​. ಈತ 81 ವರ್ಷದ ವಿಯೆಟ್ನಾಂ ನಿವಾಸಿ. 1962 ರಲ್ಲಿ ತೀವ್ರ ಜ್ವರದಿಂದ ಬಳಲುತ್ತಿದ್ದರು. ಅಂದಿನಿಂದ ಅವರು ಒಂದು ಸೆಕೆಂಡ್ ಕೂಡ ನಿದ್ದೆ ಮಾಡಿಲ್ಲವಂತೆ. ಈ ವಿಚಾರವನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಎನ್​ಗೊಕ್ ನಿದ್ರೆ ಮಾಡದೇ ಇಷ್ಟು ವರ್ಷ ಬದುಕುಳಿದಿದ್ದು ಮಾತ್ರವಲ್ಲದೆ, ತನ್ನ ಜಮೀನಿನಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದ್ದಾನೆ. ತನ್ನ ದೈನಂದಿನ ಕೆಲಸಗಳ ಜೊತೆಗೆ, ಹೊಲಗಳಲ್ಲಿಯೂ ಕಷ್ಟಪಟ್ಟು ಕೆಲಸ ಮಾಡುತ್ತಾನೆ.

ಜ್ವರ ಬಂದ ನಂತರ ಇಷ್ಟು ವರ್ಷಗಳಲ್ಲಿ ಅವನಿಗೆ ಗಾಢ ನಿದ್ರೆ ಬಂದಿಲ್ಲ. ವಿಜ್ಞಾನಕ್ಕೆ ಸವಾಲೊಡ್ಡುವ ಆತನ ಸಮಸ್ಯೆಯಿಂದ ವೈದ್ಯರು ಕೂಡ ಆಶ್ಚರ್ಯಚಕಿತರಾಗಿದ್ದಾರೆ. ವಿಯೆಟ್ನಾಂನ ಕ್ವಾಂಗ್ ನಾಮ್ ಪ್ರಾಂತ್ಯದ ಒಂದು ಸಣ್ಣ ಹಳ್ಳಿಯಲ್ಲಿ 1942 ರಲ್ಲಿ ಜನಿಸಿದ ಎನ್​ಗೋಕ್​, ವಿಯೆಟ್ನಾಂ ಯುದ್ಧದ ಸಮಯದಲ್ಲಿ ತನ್ನ 20ನೇ ವಯಸ್ಸಿನಲ್ಲಿ ತೀವ್ರ ಜ್ವರದಿಂದ ಬಳಲುತ್ತಿದ್ದರು. ಜ್ವರ ಕಡಿಮೆಯಾದ ನಂತರ, ಆತನ ನಿದ್ರೆ ಎಂದಿಗೂ ಸಾಮಾನ್ಯ ಸ್ಥಿತಿಗೆ ಮರಳಲಿಲ್ಲ. ನಾನು ಅನೇಕ ಔಷಧಿಗಳನ್ನು ತೆಗೆದುಕೊಂಡೆ. ಮನೆಮದ್ದುಗಳನ್ನು ಪ್ರಯತ್ನಿಸಿದೆ. ನಾನು ಮಲಗಲು ಮದ್ಯವನ್ನೂ ಕುಡಿದಿದ್ದೇನೆ ಆದರೆ, ನಿದ್ರೆ ಮಾತ್ರ ಬರುತ್ತಿಲ್ಲ ಎನ್ನುತ್ತಾರೆ.

ಎನ್​ಗೋಕ್​ ಅವರ ಹೆಂಡತಿ, ಮಕ್ಕಳು, ಸ್ನೇಹಿತರು ಮತ್ತು ನೆರೆಹೊರೆಯವರು ಕೂಡ ಆತ ಹೇಳುವುದು ಸತ್ಯ ಎಂದು ದೃಢಪಡಿಸಿದ್ದಾರೆ. ಆತ ಮಲಗಿದ್ದನ್ನು ಯಾರೂ ನೋಡಿಲ್ಲ. ಈ ಪರಿಸ್ಥಿತಿಯಲ್ಲಿ, ಅವರ ಅಸಾಧಾರಣ ಜೀವನ ಕಥೆಯನ್ನು ನೆಕ್ಸೋಲಾಜಿಕಲ್​ ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಪೋಸ್ಟ್​ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಲಕ್ಷಾಂತರ ಮಂದಿ ಎನ್​ಗೋಕ್​ ಅವರ ಕತೆ ಕೇಳಿ ವಿಸ್ಮಯಗೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net