ಮೋಟಾರ್​​ ಸೈಕಲ್ ಹಿಡಿದು ಹೊಲ ಉಳುಮೆ ಮಾಡಿದ ಅಜ್ಜ, ಮೊಮ್ಮಗ; ಯಾವ ಇಂಜಿನಿಯರ್​ಗೂ ಕಡಿಮೆಯಿಲ್ಲ ಈ ರೈತ...

farmer
Published on

ಹೈದರಾಬಾದ್​​: ಕೃಷಿ ಮಾಡುತ್ತಿರುವ ರೈತರೊಬ್ಬರು ತಾನು ಯಾವುದೇ ಇಂಜಿನಿಯರ್ ಗಿಂತ ಕಡಿಮೆಯಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಮೋಟಾರ್​​ ಬೈಕಿನಲ್ಲಿ ಮೊಮ್ಮಗನ ಸಹಾಯದಿಂದ ಹೊಲ ಉಳುಮೆ ಮಾಡಿದ್ದಾರೆ.

ರೈತನ ಸೂಪರ್ ಐಡಿಯಾ: ಕೃಷಿಯಲ್ಲಿಯೂ ಯಾಂತ್ರೀಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಣ್ಣ ಪ್ರಮಾಣದ ರೈತರು ಲಭ್ಯವಿರುವ ಯಂತ್ರೋಪಕರಣಗಳನ್ನು ಬಳಸಿ ಕೃಷಿ ಕೆಲಸ ಮಾಡುತ್ತಿದ್ದಾರೆ. ಆದರೆ ಛಲವಿದ್ದರೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ಅಜ್ಜ, ಮೊಮ್ಮಕ್ಕಳು ಸಾಬೀತು ಮಾಡಿದ್ದಾರೆ.

ತೆಲಂಗಾಣದ ನಿರ್ಮಲ್ ಜಿಲ್ಲೆಯ ಮಂಡಲ ಕೇಂದ್ರವಾದ ಮುಧೋಳದ ರೈತ ಸೋಂಕಂಬಳಿ ಬಾಬು, ತಮ್ಮ ಜಮೀನಿನಲ್ಲಿ ಹತ್ತಿ ಬಿತ್ತಲು ಟ್ರ್ಯಾಕ್ಟರ್ ಬಳಸುವ ಬದಲು ವಿನೂತನವಾಗಿ ಯೋಚಿಸಿದರು. ತಮ್ಮ ಲೂನಾದಿಂದ ಗದ್ದೆಯಲ್ಲಿ ಕೃಷಿ ಕೆಲಸ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರೈತನ ವಿಚಾರವನ್ನು ಎಲ್ಲರೂ ಶ್ಲಾಘಿಸಿದರು.

'ಹೊಲ ಉಳಲು ನೇಗಿಲು ಇಲ್ಲದಿದ್ದರೂ ತನ್ನ ಲೂನಾದಿಂದ ಕೃಷಿ ಕೆಲಸ ಮುಗಿಸಿದೆ. ಒಂದು ಎಕರೆ ಜಮೀನಿನಲ್ಲಿ ಹತ್ತಿ ಒಕ್ಕಲು ಉಪಕರಣಗಳಿಲ್ಲದ ಕಾರಣ ಲೂನಾ ಜತೆ ಕೆಲಸ ಮಾಡಬೇಕಾಗಿದೆ. ಟ್ರ್ಯಾಕ್ಟರ್ ಮೂಲಕ ಕೆಲಸ ಮಾಡುವುದರಿಂದ ಆರ್ಥಿಕ ಹೊರೆಯಾಗುತ್ತದೆ' ಎಂದು ರೈತ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net