

ಕೊಪ್ಪಳ: ಟೊಮ್ಯಾಟೋ ಬೆಳೆದ ರೈತನಿಗೆ ಜ್ಯಾಕ್ ಪಾಟ್ ಹೊಡೆದಿದ್ದು ಬಂಗಾರದ ಬೆಲೆಯೊಂದಿಗೆ ಮನೆಗೆ ಮರಳಿದ್ದಾರೆ.
ಟೊಮ್ಯಾಟೊ ಪ್ರತಿ ಬಾಕ್ಸ್ಗೆ 2900ರೂ. ಮಾರಾಟವಾಗುತ್ತಿದ್ದು ಕೊಪ್ಪಳದ ಕನಕಗಿರಿ ಸಗಟು ಮಾರುಕಟ್ಟೆಯಲ್ಲಿ ಟೊಮ್ಯಾಟೊಗೆ ಬಂಗಾರದ ಬೆಲೆ ಲಭಿಸುತ್ತಿದೆ.
ಈ ರೈತ ಮಾರುಕಟ್ಟೆಗೆ 20 ಬಾಕ್ಸ್ ಟೊಮ್ಯಾಟೊ ತಂದಿದ್ದು ಪ್ರತಿ ಬಾಕ್ಸ್ 2900 ರೂ.ಗೆ ಮಾರಾಟವಾಗಿದೆ. ಟ್ಯೊಮ್ಯಾಟೋ ಬೆಲೆ ಕೇಳಿ ರೈತ ಫುಲ್ ಖುಶ್ ಆಗಿದ್ದಾರೆ. ರೈತ ಶರಣಪ್ಪ ಕರಡಿ, 20 ಬಾಕ್ಸ್ ಟೊಮ್ಯಾಟೊಗಳನ್ನು ಸುಮಾರು 58 ಸಾವಿರಕ್ಕೆ ಮಾರಾಟ ಮಾಡಿ ಜಾಕ್ಪಾಟ್ ಹೊಡೆದಿದ್ದಾರೆ.