More

    ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ತಾಯಿ ನಿಧನ

    ಬೊಮ್ಮನಹಳ್ಳಿ: ಇಂದು ಬೆಳಗ್ಗೆ ಶಾಸಕ ಎಂ ಸತೀಶ್ ರೆಡ್ಡಿಗೆ ಮಾತೃ ವಿಯೋಗ ಆದ ದುಃಖಕರ ಘಟನೆ ನಡೆದಿದೆ. ತಾಯಿಯ ನಿಧನದಿಂದ ಎಂ. ಸತೀಶ್ ರೆಡ್ಡಿ ತೀವ್ರವಾಗಿ ದುಃಖಿತರಾಗಿದ್ದಾರೆ.

    ಇಂದು ಬೆಳಗ್ಗೆ ಶಾಸಕರ ನಿವಾಸದಲ್ಲಿ ಅವರ ತಾಯಿ ಪಾಪಮ್ಮ ನಿಧನರಾಗಿದ್ದಾರೆ. ಪಾಪಮ್ಮ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

    ಹೊಂಗಸಂದ್ರದ ಶಾಸಕರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಮಧ್ಯಾಹ್ನ 3 ಗಂಟೆಗೆ ಹೊಂಗಸಂದ್ರದ ರುದ್ರಭೂಮಿಯಲ್ಲಿ ಅಂತಿಮ ವಿಧಿ ವಿಧಾನ ನಡೆಯಲಿದೆ.

    ಶಾಸಕ ಎಂ ಸತೀಶ್ ರೆಡ್ಡಿ, ತಮ್ಮ ತಾಯಿಯ ಮೇಲೆ ಅತೀವ ಪ್ರೀತಿ ಹೊಂದಿದ್ದರು. ಅವರು ಚುನಾವಣೆ ನಾಮಪತ್ರ ಸಲ್ಲಿಸುವ ವೇಳೆ ತಾಯಿ ಕಾಲಿಗೆ ಪೂಜೆ ಸಲ್ಲಿಸಿದ್ದನ್ನು ಈ ಸಂದರ್ಭದಲ್ಲಿ ನೆನೆಸಿಕೊಳ್ಳಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts