ಪಾಕಿಸ್ತಾನದಲ್ಲಿ ಚೀನಾದ ಸಿರಿವಂತ ಉದ್ಯಮಿ ಜಾಕ್​ ಮಾ! ಏನಿದರ ಮರ್ಮ?

jackmaa
Published on

ಇಸ್ಲಾಮಾಬಾದ್​: ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆಯ ಪ್ರಕಾರ ಚೀನಾದ ಬಿಲಿಯನೇರ್ ಮತ್ತು ಅಲಿಬಾಬಾ ಗ್ರೂಪ್‌ನ ಸಹ-ಸಂಸ್ಥಾಪಕ ಜಾಕ್ ಮಾ ಅವರು ಪಾಕಿಸ್ತಾನಕ್ಕೆ ತಮ್ಮ ಅನಿರೀಕ್ಷಿತ ಭೇಟಿಯಿಂದ ಜಗತ್ತಿನ ಆಗು ಹೋಗುಗಳನ್ನು ಗಮನಿಸುತ್ತಿರುವವರಲ್ಲಿ ಸಂಚಲನ ಮೂಡಿಸಿದ್ದಾರೆ.

ಬೋರ್ಡ್ ಆಫ್ ಇನ್ವೆಸ್ಟ್‌ಮೆಂಟ್ (BOI)ನ ಮಾಜಿ ಅಧ್ಯಕ್ಷ ಮುಹಮ್ಮದ್ ಅಜ್ಫರ್ ಅಹ್ಸನ್, ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್‌ಗೆ ಭೇಟಿಯನ್ನು ಖಚಿತಪಡಿಸಿದರು. ಮಾ ಅವರು ಜೂನ್ 29ರಂದು ಲಾಹೋರ್‌ಗೆ ಆಗಮಿಸಿ 23 ಗಂಟೆಗಳ ಕಾಲ ಇದ್ದರು ಎಂದು ಹೇಳಿದ್ದಾರೆ.

ಜಾಕ್ ಮಾ ಭೇಟಿಯ ಸಮಯದಲ್ಲಿ, ಸರ್ಕಾರಿ ಅಧಿಕಾರಿಗಳು ಮತ್ತು ಮಾಧ್ಯಮಗಳೊಂದಿಗೆ ಸಂವಾದವನ್ನೇ ತಪ್ಪಿಸಿದ್ದರು. ಅವರು ಖಾಸಗಿ ಸ್ಥಳದಲ್ಲಿ ವಾಸವಿದ್ದು ಜೆಟ್ ಏವಿಯೇಷನ್ ​​ಮಾಲೀಕತ್ವದ VP-CMA ಹೆಸರಿನಲ್ಲಿ ನೋಂದಾಯಿಸಲಾದ ಖಾಸಗಿ ಜೆಟ್ ಮೂಲಕ ಜೂನ್ 30ರಂದು ಹೊರಟರು.

ಜಾಕ್​ ಮಾ ಭೇಟಿಯ ಉದ್ದೇಶವು ಈ ಹಂತದಲ್ಲಿ ಗೌಪ್ಯವಾಗಿದ್ದರೂ, ಮುಂಬರುವ ದಿನಗಳಲ್ಲಿ ಪಾಕಿಸ್ತಾನಕ್ಕೆ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ ಎಂಬ ಭರವಸೆ ಇದೆ ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

ಐದು ಚೀನೀ ಪ್ರಜೆಗಳು, ಒಬ್ಬ ಡ್ಯಾನಿಶ್ ವ್ಯಕ್ತಿ ಮತ್ತು ಒಬ್ಬ ಯುಎಸ್ ಪ್ರಜೆಯನ್ನು ಒಳಗೊಂಡ ಏಳು ಉದ್ಯಮಿಗಳ ನಿಯೋಗದ ಜತೆ ಜಾಕ್​ ಮಾ ಕಾಣಿಸಿಕೊಂಡರು. ಅವರು ಹಾಂಗ್ ಕಾಂಗ್‌ನ ವ್ಯಾಪಾರ ವಿಮಾನಯಾನ ವಲಯದಿಂದ ಚಾರ್ಟರ್ಡ್ ವಿಮಾನದ ಮೂಲಕ ನೇಪಾಳದಿಂದ ಪಾಕಿಸ್ತಾನಕ್ಕೆ ಬಂದರು.

ಜಾಕ್​ ಮಾ ಮತ್ತು ಅವರ ತಂಡವು ಪಾಕಿಸ್ತಾನದಲ್ಲಿ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸುವುದರ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ಊಹಾಪೋಹಗಳಿವೆ. ವ್ಯಾಪಾರ ಕೇಂದ್ರಗಳಿಗೆ ನೀಡಿದ್ದ ಭೇಟಿಗಳು ಮತ್ತು ವಿವಿಧ ವಾಣಿಜ್ಯ ಮಂಡಳಿಗಳ ಪ್ರಮುಖ ಉದ್ಯಮಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆಗಳನ್ನು ಜಾಕ್​ ಮಾ ನಡೆಸಿದ್ದಾರೆ. ಆದಾಗ್ಯೂ, ಯಾವುದೇ ನಿರ್ದಿಷ್ಟ ವ್ಯಾಪಾರ ವ್ಯವಹಾರಗಳು ಅಥವಾ ಸಭೆಗಳ ಬಗ್ಗೆ ಯಾವುದೇ ದೃಢೀಕರಣ ಆಗಿಲ್ಲ. ಜಾಕ್​ ಮಾ ಭೇಟಿಯು ಕಟ್ಟುನಿಟ್ಟಾಗಿ ವೈಯಕ್ತಿಕ ಉದ್ದೇಶಗಳಿಗಾಗಿ ಎಂದು ಅಹ್ಸಾನ್ ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಕೊಡುಗೆ ಹೈಜಾಕ್ ಮಾಡಿದ್ದೇ ಕೆಎಂಶಿ ಸಾಧನೆ : ಎನ್.ಆರ್.ಸಂತೋಷ್ ಲೇವಡಿ (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net