More

  ಅಲಿಬಾಬಾ ಸಂಸ್ಥಾಪಕ ಜಾಕ್​ ಮಾ ನಾಪತ್ತೆ!; ಚೀನಾದ 3ನೇ ಅತಿದೊಡ್ಡ ಶ್ರೀಮಂತನ ಸುಳಿವಿಲ್ಲ.

  ಬೀಜಿಂಗ್: ಚೀನಾದ ಮೂರನೇ ಅತಿದೊಡ್ಡ ಶ್ರೀಮಂತ, ಅಲಿಬಾಬಾ ಸಮೂಹ ಸಂಸ್ಥೆಗಳ ಸಂಸ್ಥಾಪಕ, ಉದ್ಯಮಿ ಜಾಕ್​ ಮಾ ಸುಳಿವಿಲ್ಲದಂತಾಗಿದ್ದು, ಕಾಣೆಯಾಗಿದ್ದಾರೆ ಎನ್ನಲಾಗುತ್ತಿದೆ. ಚೀನಾ ಸರ್ಕಾರ ಹಾಗೂ ಜಾಕ್​ ಮಾಗೂ ಉಂಟಾಗಿದ್ದ ಸಂಘರ್ಷದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಕುತೂಹಲ ಕೆರಳಿಸಿದ್ದು, ಜಗತ್ತಿನ ಗಮನ ಸೆಳೆಯುವಂತಾಗಿದೆ.

  ಅವರದೇ ಸಂಸ್ಥೆಯೊಂದರಿಂದ ಆಯೋಜಿತ ಟಿವಿ ರಿಯಾಲಿಟಿ ಶೋನಲ್ಲಿ ಗಣ್ಯ ತೀರ್ಪುಗಾರರಾಗಿ ಜಾಕ್​ ಮಾ ಭಾಗವಹಿಸಬೇಕಿತ್ತು. ಇದೀಗ ಹಾಗೆ ಕಾಣಿಸಿಕೊಳ್ಳುವುದರಿಂದ ಜಾಕ್​ ಹಿಂದೆ ಸರಿದಿದ್ದು, ಆ ಕಾರ್ಯಕ್ರಮ ಕೂಡ ಮುಂದೂಡಲಾಗಿದೆ.

  ಜಾಕ್​ ಮಾ ಚೀನಾ ಸರ್ಕಾರ ನಿರ್ಧಾರಗಳನ್ನು ಹಾಗೂ ಅಲ್ಲಿನ ಬ್ಯಾಂಕ್​ಗಳ ಹಿನ್ನಡೆಯನ್ನು ಟೀಕಿಸಿ ಬಹಿರಂಗವಾಗಿ ಮಾತನಾಡಿದ್ದರಿಂದ ಉಂಟಾದ ಸಂಘರ್ಷವೇ ಇದಕ್ಕೆಲ್ಲ ಕಾರಣ ಎನ್ನಲಾಗಿದೆ. ಬಳಿಕ ಅಲ್ಲಿನ ಸರ್ಕಾರ ಜಾಕ್​ ಮಾಗೆ ಸಂಬಂಧಿತ ಆ್ಯಂಡ್ ಫೈನಾನ್ಷಿಯಲ್​ನ ಐಪಿಒ ರದ್ದು ಮಾಡಿಸಿತ್ತು. ಅಲ್ಲದೆ ಅಲಿಬಾಬಾ ಇ-ಕಾಮರ್ಸ್ ವಹಿವಾಟಿನ ಮೇಲೆ ವಿಶ್ವಾಸದ್ರೋಹದ ಆರೋಪ ಹೊರಿಸಿ ತನಿಖೆ ನಡೆಸಿತ್ತು. ಪರಿಣಾಮ ಅಲಿಬಾಬಾ ಷೇರು ಹಾಗೂ ಜಾಕ್​ ಮಾ ವೈಯಕ್ತಿಕ ಶ್ರೀಮಂತಿಕೆ ಕೂಡ ಕುಸಿದಿತ್ತು. ಈ ನಡುವೆ ಜಾಕ್​ ಮಾ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಳ್ಳದಿರುವುದು ಹಲವು ಊಹಾಪೋಹ ಹಾಗೂ ಕುತೂಹಲಗಳಿಗೆ ಕಾರಣವಾಗಿದೆ. (ಏಜೆನ್ಸೀಸ್​)

  ಅವಿವಾಹಿತರೇ… ವಿಚ್ಛೇದಿತರೇ ಎಚ್ಚರ ಎಚ್ಚರ… ಪುಕ್ಕಟೆ ಸಿಕ್ಕಳೆಂದು ಹೋದವರ ಕಥೆ ಏನಾಯ್ತು ನೋಡಿ…

  ಮರ್ಮಾಂಗವನ್ನೇ ಕತ್ತರಿಸಿ ಕೊಂದ ಪಾಪಿಗಳು! ಆಣೆಕಟ್ಟಿನ ಮೇಲಿತ್ತು ಯುವಕನ ಮೃತದೇಹ

  ಲಾಕ್​ಡೌನ್​ನಲ್ಲಿ ಊಟದ ಹೆಸರಲ್ಲೇ ವಂಚಿಸಿದ ಖತರ್ನಾಕ್​ ಮಹಿಳೆ! ಫುಡ್ಡೂ ಹೋಯ್ತು, ದುಡ್ಡೂ ಹೋಯ್ತು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts