ಬೀರೇಗೌಡರಿಗೆ ಬೀಳ್ಕೊಡುಗೆ

ಬೀರೇಗೌಡರಿಗೆ ಬೀಳ್ಕೊಡುಗೆ
Published on

ಹುಣಸೂರು: ತಾಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ(ಎಡಿಎಲ್‌ಆರ್)ಯಲ್ಲಿ 5 ವರ್ಷಗಳಿಂದ ಸರ್ವೇ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸಿ ಇದೀಗ ಮೈಸೂರಿಗೆ ವರ್ಗಾವಣೆಗೊಂಡಿರುವ ಬೀರೇಗೌಡ ಅವರಿಗೆ ಇಲಾಖೆಯಿಂದ ಬೀಳ್ಕೊಡಲಾಯಿತು.

ನಗರದ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಬೀರೇಗೌಡ ಅವರನ್ನು ಸನ್ಮಾನಿಸಿ ಮಾತನಾಡಿದ ಎಡಿಎಲ್‌ಆರ್ ಮಹಮದ್ ಹುಸೇನ್, ರೈತರು ಅತಿಹೆಚ್ಚು ಅವಲಂಬಿತರಾಗಿರುವ ಇಲಾಖೆ ನಮ್ಮದಾಗಿದ್ದು, ರೈತಪರ ಕಟಿಬದ್ಧರಾಗಿ ಕಾರ್ನಿರ್ವಹಿಸುವ ಜವಾಬ್ದಾರಿಯನ್ನು ಹೊತ್ತಿದ್ದೇವೆ. ಸಾಕಷ್ಟು ಅನುಕೂಲಗಳು ಮತ್ತು ಅನಾನುಕೂಲಗಳ ನಡುವೆಯೂ ಜನರಿಗಾಗಿ ಕಳೆದ 5 ವರ್ಷಗಳಿಂದ ತಾಲೂಕು ರೈತರೊಂದಿಗೆ ಒಡನಾಟ ಇಟ್ಟುಕೊಂಡು ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿರುವ ಬೀರೇಗೌಡರು ಇಲಾಖೆಗೆ ಹೊಸದಾಗಿ ಸೇರ್ಪಡೆಗೊಂಡು ಬರುತ್ತಿರುವ ಯುವಸಮೂಹಕ್ಕೆ ಮಾದರಿಯಾಗಿದ್ದಾರೆ. ವೃತ್ತಿಯಲ್ಲಿನ ಅವರ ಭವಿಷ್ಯದ ದಿನಗಳೂ ಉತ್ತಮವಾಗಿರಲಿ ಎಂದು ಆಶಿಸಿದರು.

ಸಮಾರಂಭದಲ್ಲಿ ತಪಾಸಕ ರಂಗಸ್ವಾಮಿ, ತಾಲೂಕು ಭೂಮಾಪಕರ ಸಂಘದ ಅಧ್ಯಕ್ಷ ಸಿ.ಎಸ್.ರವೀಶ್, ಪರವಾನಗಿ ಭೂಮಾಪಕರ ಸಂಘದ ಅಧ್ಯಕ್ಷ ನಾಗೇಂದ್ರ, ನಿತಿನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net