ಗ್ಯಾನಿ ಜೈಲ್​ ಸಿಂಗ್, ಜೆಆರ್​ಡಿ ಟಾಟಾಗೆ ಚಿಕಿತ್ಸೆ ನೀಡಿದ್ದ ವಿಶ್ವವಿಖ್ಯಾತ ನೇತ್ರತಜ್ಞ ನಿಧನ

Dr Chandrappa
Published on

ಕಲಬುರಗಿ: ವಿಶ್ವ ವಿಖ್ಯಾತ ನೇತ್ರತಜ್ಞ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಪ್ಪ ರೇಷ್ಮೆ ಇಂದು ನಿಧನರಾದರು. ಇವರು ಕಲಬುರಗಿಯ ಜಯನಗರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.

ಇವರು ಕೆಲವು ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ನಾಳೆ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಇವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ. ಇವರು ಅಪಾರ ಬಂಧು-ಬಳಗವನ್ನು ಅಗಲಿದ್ದು, ಅನೇಕ ಗಣ್ಯರು ಇವರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಿದ್ದಾರೆ.

ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್, ಟಾಟಾ ಸಮೂಹ ಸಂಸ್ಥೆಯ ಸಂಸ್ಥಾಪಕ ಜೆ.ಆರ್.ಡಿ. ಟಾಟಾ ಸೇರಿದಂತೆ ಅನೇಕ ಗಣ್ಯರಿಗೆ ಇವರು ನೇತ್ರ ಚಿಕಿತ್ಸೆ ಮಾಡಿದ್ದರು. ಮಾತ್ರವಲ್ಲ, ವಿಶ್ವದ ಮೂರನೇ ಬೆಸ್ಟ್ ಐ ಡಾಕ್ಟರ್ ಎಂದೇ ಪ್ರಖ್ಯಾತರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net