ಬಾಲಿವುಡ್​​ ಭಾಯಿಜಾನ್​​ಗೆ ಆ್ಯಕ್ಷನ್-ಕಟ್​​ ಹೇಳಲಿರುವ ಖ್ಯಾತ ನಿರ್ದೇಶಕ ಅಟ್ಲಿ; ಸಿನಿಮಾ ಯಾವುದು.. ಬಜೆಟ್​ ಎಷ್ಟು ಗೊತ್ತಾ? | Director Atlee

dk - 2025-02-12T190644.016
Published on

Director Atlee:ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ, ಬಾಲಿವುಡ್​ ನಟ ಸಲ್ಮಾನ್​ ಖಾನ್​ಗೆ ಆ್ಯಕ್ಷನ್​ ಕಟ್​ ಹೇಳಲಿದ್ದು, ಈ ಇಬ್ಬರ ಕಾಂಬಿನೇಷನ್​ ಸಿನಿಮಾ 500 ಕೋಟಿ ರೂ. ವೆಚ್ಚದಲ್ಲಿ ಸೆಟ್ಟೇರಲಿದೆ ಎಂದು ವರದಿಯಾಗಿದೆ.

ಈ ಚಿತ್ರಕ್ಕಾಗಿ ನಟ ಸಲ್ಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ತಾತ್ಕಾಲಿಕವಾಗಿ ಈ A6 ಎಂದು ಹೆಸರಿಸಲಾಗಿದೆ. ಈ ಸಿನಿಮಾ ಆ್ಯಕ್ಷನ್​ ಮತ್ತು ಡ್ರಾಮದಿಂದ ಕೂಡಿರಲಿದೆ. ಶೀಘ್ರವೇ ಸಿನಿಮಾ ಸೆಟ್ಟೆರಲಿದೆ ಎಂದು ವರದಿ ಉಲ್ಲೇಖಿಸಿವೆ.

ವರದಿ ಪ್ರಕಾರ, ನಿರ್ದೇಶಕ ಅಟ್ಲಿ ಚಿತ್ರಕ್ಕಾಗಿ ಹೊಸ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದು, ಸಿನಿಮಾದಲ್ಲಿ ಸಲ್ಲುಗಾಗಿ ಹೊಸ ಪ್ರಪಂಚವನ್ನೇ ಸೃಷ್ಠಿಸಿಲಿದ್ದಾರೆ. ಇದಕ್ಕಾಗಿ ನಿರ್ಮಾಣ ಸಂಸ್ಥೆ ಹಣದಹೊಳೆ ಹರಿಸಲಿದ್ದಾರೆ. ಇನ್ನು ಈ ಚಿತ್ರವು ಪುನರ್ಜನ್ಮದ ಕಥೆಯನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.

ಸಲ್ಮಾನ್​ಖಾನ್​ ಸದ್ಯಕ್ಕೆ ಸಿಕಿಂದರ್​ ಚಿತ್ರದಲ್ಲಿ ಬ್ಯೂಸಿ ಇದ್ದು, ಜೊತೆಜೊತೆಗೆ ಈ ಹೊಸ ಚಿತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. A6 ಚಿತ್ರಕ್ಕೆ ಸಲ್ಲು ತೂಕ ಇಳಿಸಿಕೊಳ್ಳಬೇಕಿದ್ದು, ಅದನ್ನಜು ಈಗಾಗಲೇ ಆರಂಭಿಸಿದ್ದಾರೆ. ಅಲ್ಲದೆ, ಅಟ್ಲಿ ಕೂಡ ಸಲ್ಲುಗೆ ನಿರ್ದೇಶನ ಮಾಡಲು ತುಂಬಾ ಉತ್ಸುಕರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ಈ ಚಿತ್ರದಲ್ಲಿ ಸೂಪರ್​ಸ್ಟಾರ್​ ರಜನಿಕಾಂತ್​ ನಟನೆ ಮಾಡಲಿದ್ದಾರೆ ಎಂಬ ವದಂತಿ ಇದೆ. ಆದರೆ, ಚಿತ್ರತಂಡ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ ಎಂದು ವರದಿಯಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net