

ರಾಯಚೂರು: ಕರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಸಂಬಂಧಿಕರೇ ನೆರವೇರಿಸಿದ್ದಾರೆ.
ಲಿಂಗಸುಗೂರಿನ ಆನೆಹೊಸೂರಿನಲ್ಲಿ ವ್ಯಕ್ತಿಯೊಬ್ಬರು ಜು.21ರಂದು ಕರೊನಾ ಸೋಂಕಿಗೆ ಬಲಿಯಾಗಿದ್ದರು. ರಾಯಚೂರಿನ ಕೋವಿಡ್ ಆಸ್ಪತ್ರೆಯಿಂದ ಆಂಬುಲೆನ್ಸ್ ಚಾಲಕ ಶವ ತಂದು ಕೊಟ್ಟು ಹೋದರೂ ಅಂತ್ಯಸಂಸ್ಕಾರಕ್ಕೆ ಸಿಬ್ಬಂದಿ ಬಂದಿರಲಿಲ್ಲ.
ಇದನ್ನೂ ಓದಿರಿ ಕರೊನಾ ಸೋಂಕಿಗೆ ಆಯುರ್ವೇದ ಔಷಧ ಪಡೆದ ಸಿ.ಟಿ.ರವಿ ಗುಣಮುಖ
ಸೋಂಕಿತ ಶವದ ಅಂತ್ಯಸಂಸ್ಕಾರಕ್ಕೆ ಅಧಿಕಾರಿಗಳು ತಡವಾಗಿ ಬಂದ ಹಿನ್ನೆಲೆಯಲ್ಲಿ ಮೃತನ ಕುಟುಂಬಸ್ಥರೇ ಪಿಪಿಇ ಕಿಟ್ ಧರಿಸಿ ಶವ ಸಂಸ್ಕಾರ ನೆರವೇರಿಸಿದರು. ಎಲ್ಲವೂ ಮುಗಿದ ಬಳಿಕ ತಹಸೀಲ್ದಾರ್, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು.
ಕೋವಿಡ್ ಆಸ್ಪತ್ರೆಯಿಂದ ಶವ ಕಳುಹಿಸಿರುವ ಮಾಹಿತಿ ತಡವಾಗಿ ಬಂತು. ನಾವು ಸ್ಥಳಕ್ಕೆ ಹೋಗುವ ವೇಳೆಗಾಗಲೇ ಶವಸಂಸ್ಕಾರ ನಡೆದಿತ್ತು ಎಂದು ಲಿಂಗಸುಗೂರು ತಹಸೀಲ್ದಾರ್ ಚಾಮರಸ ಪಾಟೀಲ್ ಹೇಳಿದರು. ಆದರೆ, ಕೋವಿಡ್ ನಿಯಮಾನುಸಾರ ಅಂತ್ಯಸಂಸ್ಕಾರ ಮಾಡಿಲ್ಲ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.