ಕರೊನಾ ಸೋಂಕಿಗೆ ಆಯುರ್ವೇದ ಔಷಧ ಪಡೆದ ಸಿ.ಟಿ.ರವಿ ಗುಣಮುಖ

CT ravi 22 Feb 20
Published on

ಬೆಂಗಳೂರು: ಕರೊನಾ ಸೋಂಕು ತಗುಲಿ ಹೋಂ ಕ್ವಾರಂಟೈನ್​ನಲ್ಲಿದ್ದ ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಸದ್ಯ ಗುಣಮುಖರಾಗಿದ್ದು, ನಾಲ್ಕನೇ ಬಾರಿ ಮಾಡಿಸಿಕೊಂಡ ಕೋವಿಡ್​ ಪರೀಕ್ಷೆಯ ವರದಿ ನೆಗೆಟಿವ್​ ಬಂದಿದೆ.

ಡಾ. ಗಿರಿಧರ್ ಕಜೆ ಅವರು ಕೊಟ್ಟಿದ್ದ ಆಯುರ್ವೇದ ಔಷಧವನ್ನಷ್ಟೇ ಸೇವಿಸುತ್ತಿದ್ದ ಸಿ.ಟಿ. ರವಿ, ಕರೊನಾ ಸೋಂಕಿನಿಂದ ಗುಣವಾಗಿದ್ದಾರೆ.

ಹನ್ನೆರಡು ದಿನಗಳ ಹಿಂದೆ ಒಂದೇ ವಾರದಲ್ಲಿ ಎರಡು ಬಾರಿ ಕರೊನಾ ಪರೀಕ್ಷೆಗೆ ಒಳಗಾಗಿದ್ದ ಸಿ.ಟಿ. ರವಿ ಅವರಿಗೆ ಒಮ್ಮೆ ನೆಗೆಟಿವ್, ಒಮ್ಮೆ ಪಾಸಿಟಿವ್ ಬಂದಿತ್ತು. ಹಾಗಾಗಿ ಜು.11ರಂದು 3ನೇ ಟೆಸ್ಟ್ ಮಾಡಿಸಿದ್ದರು. 12ರ ಸಂಜೆ ಬಂದ ವರದಿಯಲ್ಲಿ ಸಿ.ಟಿ. ರವಿ ಅವರ ಪತ್ನಿ ಪಲ್ಲವಿ, ಗನ್ ಮ್ಯಾನ್ ಮತ್ತು ಕಾರಿನ ಚಾಲಕ ಸೇರಿ ಕಚೇರಿ ಸಿಬ್ಬಂದಿಗೆ ನೆಗೆಟಿವ್ ಬಂದಿತ್ತು. ಆದರೆ, ಸಿ.ಟಿ.ರವಿಗೆ ಕರೊನಾ ಪಾಸಿಟಿವ್ ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net