More

    ಕೋವಿಡ್​ಗೆ ಎಚ್.ಎಂ. ರೇವಣ್ಣರ ನಾದಿನಿ ಬಲಿ, ಕ್ವಾರಂಟೈನ್​ನಲ್ಲಿ ಮಾಜಿ ಸಚಿವ

    ಬೆಂಗಳೂರು: ಮಾಜಿ ಸಚಿವ ಎಚ್​.ಎಂ. ರೇವಣ್ಣ ಅವರ ಕುಟುಂಬದ ಮೇಲೂ ಕರೊನಾ ಕಾರ್ಮೋಡ ಕವಿದಿದೆ.

    ನಿನ್ನೆ ರಾತ್ರಿ(ಮಂಗಳವಾರ) ಎಚ್​.ಎಂ. ರೇವಣ್ಣ ಅವರ ಪತ್ನಿಯ ಕಿರಿಯ ಸಹೋದರಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದು, ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದೆ. ಅದರ ಜತೆಗೆ ಸೋಂಕಿನ ಭೀತಿಯೂ ಆವರಿಸಿದೆ.

    ಇದನ್ನೂ ಓದಿರಿ ‘ಅಪ್ಪ.. ಯಾವ ಕಾಲೇಜಿಗೆ ಸೇರಿಸುತ್ತಿದ್ದೆ?’ ಎಂದ ಮಗ ಬಾರದ ಲೋಕಕ್ಕೆ ಸೇರಿಯೇಬಿಟ್ಟ!

    ರೇವಣ್ಣ ಅವರ ಪತ್ನಿಯ ಸಹೋದರಿ ಎಂ.ಎಸ್ ರೋಹಿಣಿಗೆ ಇತ್ತೀಚೆಗೆ ಕರೊನಾ ಸೋಂಕು ದೃಢಪಟ್ಟಿತ್ತು. ಕೂಡಲೇ ನಾದಿನಿಯನ್ನು ಸ್ವತಃ ರೇವಣ್ಣ ಅವರೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ 61 ವರ್ಷದ ರೋಹಿಣಿ ಮೃತಪಟ್ಟಿದ್ದಾರೆ.

    ನನ್ನ ಧರ್ಮಪತ್ನಿಯ ಕಿರಿಯ ಸಹೋದರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟು ನಿನ್ನೆ ರಾತ್ರಿ ನಿಧನವಾಗಿರುತ್ತಾರೆ. ಅವರನ್ನು ಸ್ವತಃ ಅಸ್ಪತ್ರೆಗೆ…

    Posted by H M Revanna on Tuesday, July 21, 2020

    ರೋಹಿಣಿ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದರಿಂದ ರೇವಣ್ಣ ಹಾಗೂ ಅವರ ಪುತ್ರ ಕ್ವಾರಂಟೈನ್ ಮನೆಯಲ್ಲೇ ಕ್ವಾರಂಟೈನ್​ಗೆ ಒಳಪಟ್ಟಿದ್ದಾರೆ. ಈ ಬಗ್ಗೆ ರೇವಣ್ಣ ತನ್ನ ಫೇಸ್​ಬುಕ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

    ತೋಟದ ಮನೆಯಲ್ಲಿ ಸೆಕ್ಸ್ ಮಾಡುತ್ತಿರುವಾಗಲೇ ಮಹಿಳೆ ಮತ್ತು ಯುವಕನನ್ನು ಬರ್ಬರವಾಗಿ ಕೊಚ್ಚಿ ಹಾಕಿದ ಅಜ್ಜ-ಮೊಮ್ಮಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts