ಶಾಸಕರ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಖಾತೆ ! ಸೈಬರ್​ ಪೊಲೀಸರಿಗೆ ದೂರು

appachuranjan
Published on

ಕೊಡಗು : ಹೆಚ್ಚು ಜನರಿಗೆ ಪರಿಚಯವಿರುವವರ ಸಾಮಾಜಿಕ ಜಾಲತಾಣದ ಖಾತೆಗಳನ್ನು ಹ್ಯಾಕ್ ಮಾಡುವುದು, ಫೇಕ್ ಮಾಡುವುದು ಈಗ ಸಾಮಾನ್ಯವಾಗಿಬಿಟ್ಟಿದೆ. ಇಂಥದೇ ಒಂದು ಪ್ರಯತ್ನದಲ್ಲಿ ಕರ್ನಾಟಕದ ಒಬ್ಬ ಶಾಸಕರನ್ನು ಸೈಬರ್​ ಖದೀಮರು ಪೇಚಿಗೆ ಸಿಲುಕಿಸಿದ್ದಾರೆ.

ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರ ಹೆಸರಿನಲ್ಲಿ ನಕಲಿ ಫೇಸ್​​ಬುಕ್ ಖಾತೆ ತೆರೆದು ಸಾರ್ವಜನಿಕರ ಬಳಿ ಹಣಕ್ಕೆ ಬೇಡಿಕೆ ಇಡುತ್ತಿರುವುದು ಇಂದು ಬೆಳಕಿಗೆ ಬಂದಿದೆ. ರಂಜನ್ ಅವರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ, ಚಾಟ್​ನಲ್ಲಿ 3 ಲಕ್ಷ ರೂಪಾಯಿ ಹಣವನ್ನು ಗೂಗಲ್​ ಪೇ ಮೂಲಕ ಮೊಬೈಲ್​ ಸಂಖ್ಯೆಯೊಂದಕ್ಕೆ ಕಳುಹಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎಂದು ಶಾಸಕರ ಆಪ್ತ ಸಹಾಯಕ ಆರ್​.ಡಿ.ರವಿ ಸೈಬರ್​ ಕ್ರೈಂ ವಿಭಾಗದ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಶಾಸಕರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹಣ ಸಂಪಾದಿಸುವ ಪ್ರಯತ್ನದಲ್ಲಿರುವ ಸಮಾಜಘಾತಕರ ವಿರುದ್ಧ ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net