More

    ಲಾಭಕ್ಕಾಗಿ ಕರೊನಾ ಲಸಿಕೆ ಮಾರಿಕೊಂಡ ಸರ್ಕಾರ… ಇದೀಗ ಹೊರಡಿಸಿದೆ ತಿದ್ದುಪಡಿ ಆದೇಶ!

    ಚಂಡೀಗಢ : ಪಂಜಾಬ್​​ ಸರ್ಕಾರವು 18 ರಿಂದ 44 ವರ್ಷದ ಸಾರ್ವಜನಿಕರಿಗೆ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ನೀಡಬೇಕಾದ ಕೋವಾಕ್ಸಿನ್ ಲಸಿಕೆಯ 42,000 ಡೋಸ್​ಗಳನ್ನು, ಲಾಭಕ್ಕಾಗಿ ಖಾಸಗಿ ಆಸ್ಪತ್ರೆಗಳಿಗೆ ಮಾರಿದೆ. ಈ ಬಗ್ಗೆ ವಿರೋಧ ಪಕ್ಷಗಳು ಎತ್ತಾಡಿ ಮುಖಭಂಗವಾದ ಮೇಲೆ ಇದೀಗ ತನ್ನ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನದಲ್ಲಿದ್ದು, ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ಡೋಸ್​ಗಳನ್ನು ವಾಪಸ್​ ಪಡೆಯಲು ಮುಂದಾಗಿದೆ.

    ಮೇ 27 ರಂದು ಭಾರತ್ ಬಯೋಟೆಕ್​ ಕಂಪೆನಿಯಿಂದ 1.14 ಲಕ್ಷ ಕೋವಾಕ್ಸಿನ್​​ ಡೋಸ್​ಗಳನ್ನು ಪ್ರತಿ ಡೋಸ್​ಗೆ 420 ರೂ.ಗಳಂತೆ ಖರೀದಿಸಿದ್ದ ರಾಜ್ಯದ ಕಾಂಗ್ರೆಸ್ ಸರ್ಕಾರ, ಅದರಲ್ಲಿ ನ 42,000 ಡೋಸ್​ಗಳನ್ನು 20 ಖಾಸಗಿ ಆಸ್ಪತ್ರೆಗಳಿಗೆ 1,060 ರೂ. ಬೆಲೆಯಲ್ಲಿ ಮಾರಿತ್ತು. ಹಲವು ರಾಜ್ಯಗಳಲ್ಲಿ ಈ ಲಸಿಕೆಗಳನ್ನು ಜನರಿಗೆ ಉಚಿತವಾಗಿ ನೀಡಲಾಗುತ್ತಿದ್ದರೆ, ಪಂಜಾಬ್​ನ ನಾಗರೀಕರಿಗೆ ಸದರಿ ಖಾಸಗಿ ಆಸ್ಪತ್ರೆಗಳು ಪ್ರತಿ ಡೋಸ್​ಗೆ 1,560 ರೂ.ಗಳನ್ನು ಚಾರ್ಜ್​ ಮಾಡಲು ಆರಂಭಿಸಿದ್ದವು.

    ಇದನ್ನೂ ಓದಿ: ಮನವಿ ಮಾಡಿದ್ರೂ ಜಮೀನಿನಲ್ಲಿ ವಿದ್ಯುತ್ ಕಂಬ ಅಳವಡಿಕೆ: ವಿಷಯ ತಿಳಿದ ರೈತ ಹೃದಯಾಘಾತದಿಂದ ಸಾವು

    ಲಸಿಕೆಗಳನ್ನು 3.20 ಕೋಟಿ ರೂ.ಗಳಿಗೆ ಖರೀದಿಸಿ, 8.48 ಕೋಟಿ ರೂ.ಗಳಿಗೆ ಮರುಮಾರಾಟ ಮಾಡಿ, ಪಂಜಾಬ್​ ಸರ್ಕಾರ 5.28 ಕೋಟಿ ರೂಪಾಯಿ ಲಾಭ ಮಾಡಿಕೊಂಡಿತ್ತು ಎನ್ನಲಾಗಿದೆ. ಒಂದೆಡೆ ಲಸಿಕೆ ಕಂಪೆನಿಗಳಿಗೆ ಮತ್ತೊಂದೆಡೆ ಜನಸಾಮಾನ್ಯರೊಂದಿಗೆ ಮೋಸದಾಟ ಆಡಿದ ಸರ್ಕಾರದ ನಡೆಯ ಬಗ್ಗೆ ಎರಡು ದಿನಗಳಿಂದ ಅಕಾಲಿ ದಳ ಮತ್ತು ಬಿಜೆಪಿ ನಾಯಕರು ಹುಲ್ಲೆಬ್ಬಿಸಿದ್ದರು.

    ಇದೀಗ ಈ ವಿವಾದಕ್ಕೆ ಮುಕ್ತಾಯ ಹಾಡುವ ಪ್ರಯತ್ನದಲ್ಲಿ ರಾಜ್ಯದ ಲಸಿಕಾಕರಣದ ನೋಡಲ್ ಅಧಿಕಾರಿ ವಿಕಾಸ್​ ಗಾರ್ಗ್​ ಅವರು, ಖಾಸಗಿ ಆಸ್ಪತ್ರೆಗಳಿಗೆ ಲಸಿಕೆಯ ಡೋಸ್​ಗಳನ್ನು ಸರ್ಕಾರಕ್ಕೆ ಹಿಂತಿರುಗಿಸುವಂತೆ ಆದೇಶ ಹೊರಡಿಸಿದ್ದಾರೆ. “ಖಾಸಗಿ ಆಸ್ಪತ್ರೆಗಳ ಮೂಲಕ 18-44 ವರ್ಷ ವಯಸ್ಸಿನ ಜನಸಂಖ್ಯೆಗೆ ಒಂದು ಬಾರಿ ಸೀಮಿತ ಲಸಿಕೆ ಡೋಸ್​ಗಳನ್ನು ನೀಡುವ ಆದೇಶವನ್ನು ಸರಿಯಾದ ಮನೋಭಾವದಿಂದ ತೆಗೆದುಕೊಳ್ಳಲಾಗಿಲ್ಲ ಮತ್ತು ಈ ಮೂಲಕ ಹಿಂಪಡೆಯಲಾಗುತ್ತದೆ. ಇದಲ್ಲದೆ, ಖಾಸಗಿ ಆಸ್ಪತ್ರೆಗಳು ತಮ್ಮೊಂದಿಗೆ ಲಭ್ಯವಿರುವ ಎಲ್ಲಾ ಲಸಿಕೆ ಡೋಸ್​​ಗಳನ್ನು ಕೂಡಲೇ ಮರಳಿಸಬೇಕು ಎಂದು ನಿರ್ಧರಿಸಲಾಗಿದೆ… “ಎಂದು ಈ ಹೊಸ ಆದೇಶದಲ್ಲಿ ಹೇಳಲಾಗಿದೆ.

    ಇದನ್ನೂ ಓದಿ: 3 ವರ್ಷದ ಹೆಣ್ಣು ಮಗುವಿನ ಕೊಲೆ ಪ್ರಕರಣ ಬೆನ್ನತ್ತಿ ಹೋದ ಪೊಲೀಸರಿಂದ ಸ್ಫೋಟಕ ರಹಸ್ಯ ಬಯಲು!

    ಪಂಜಾಬ್ ಆರೋಗ್ಯ ಸಚಿವ ಬಲ್ಬೀರ್​ ಸಿಂಗ್ ಸಿಧು ಅವರು, “ಒಮ್ಮೊಮ್ಮೆ ಯಾವುದೇ ತಪ್ಪು ಉದ್ದೇಶವಿಲ್ಲದೆ ತಪ್ಪು ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ. ನಾವು ಈ ಬಗ್ಗೆ ತನಿಖೆ ನಡೆಸುತ್ತೇವೆ” ಎಂದಿದ್ದಾರೆ. ಖಾಸಗಿ ಆಸ್ಪತ್ರೆಗಳು ಲಸಿಕೆಗಾಗಿ ಸರ್ಕಾರಕ್ಕೆ ಜಮಾ ಮಾಡಿದ್ದ ಹಣವನ್ನು ಹಿಂದಿರುಗಿಸಲಾಗುವುದು ಎಂದಿದ್ದಾರೆ. “ಸರ್ಕಾರ ಮಾರಿದ 42,000 ಡೋಸ್​ಗಳಲ್ಲಿ ಆಸ್ಪತ್ರೆಗಳು ಈಗಾಗಲೇ 600 ಡೋಸ್​ಗಳನ್ನು ನೀಡಿಬಿಟ್ಟಿದ್ದು, ಉಳಿದ 41,400 ಡೋಸ್​ಗಳು ಇಂದು ಸಂಜೆ ಮತ್ತು ನಾಳೆ ಬೆಳಿಗ್ಗೆ ವೇಳೆಗೆ ನಮ್ಮನ್ನು ತಲುಪಲಿವೆ” ಎಂದಿರುವ ಸಿಧು, ಈ ಲಸಿಕೆಗಳನ್ನು ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಉಚಿತವಾಗಿ ಜನರಿಗೆ ನೀಡಲಾಗುವುದು ಎಂದಿದ್ದಾರೆ.

    ವಿಪರ್ಯಾಸವೆಂದರೆ ಲಸಿಕೆ ಅಭಾವವಿದೆ ಎಂಬ ಕಾರಣ ಒಡ್ಡಿ, ಪಂಜಾಬ್ ಸರ್ಕಾರವು ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ 18-44 ವರ್ಷ ವಯೋಮಾನದ ಆಯ್ದ ಆದ್ಯತೆಯ ಗುಂಪುಗಳಿಗೆ ಮಾತ್ರ ಲಸಿಕಾ ಸೌಲಭ್ಯವನ್ನು ತೆರೆದಿತ್ತು. ಲಸಿಕೆ ಕೊರತೆಯ ಮಾತಾಡಿ ಪದೇ ಪದೇ ಕೇಂದ್ರ ಸರ್ಕಾರದ ವಿರುದ್ಧ ವಾಕ್​ಸಮರ ನಡೆಸುತ್ತಿರುವ ರಾಜ್ಯಗಳಲ್ಲಿ ಪಂಜಾಬ್​​ನ ಕಾಂಗ್ರೆಸ್ ಸರ್ಕಾರ ಮೇಲ್ಪಂಕ್ತಿಯಲ್ಲಿದೆ. (ಏಜೆನ್ಸೀಸ್)

    ‘ಜಾಹಿರಾತು ನೋಡಿ ಹಣ ಬರುತ್ತೆ’ ಎಂದು ವಂಚನೆ… 4 ಲಕ್ಷ ಜನರಿಗೆ ಟೋಪಿ !

    ಜಿರಳೆಯನ್ನು ಪಶು ಆಸ್ಪತ್ರೆಗೆ ಕರೆದುತಂದ ಮಹಾನುಭಾವ!

    ಮಧ್ಯಪ್ರದೇಶದಲ್ಲಿ 3,000 ಕಿರಿಯ ವೈದ್ಯರ ರಾಜೀನಾಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts