More

    ಟಿ20 ವಿಶ್ವಕಪ್: ಉಗಾಂಡ ತಂಡದಲ್ಲಿ 43 ವರ್ಷದ ಎಡಗೈ ಸ್ಪಿನ್ನರ್​ಗೆ ಸ್ಥಾನ

    ನ್ಯೂಯಾರ್ಕ್​: ಮುಂಬರುವ ಟಿ20 ವಿಶ್ವಕಪ್​ ಟೂರ್ನಿಗೆ ಉಗಾಂಡ ಕ್ರಿಕೆಟ್​ ತಂಡ ಪ್ರಕಟಗೊಂಡಿದ್ದು, 43 ವರ್ಷದ ಎಡಗೈ ಸ್ಪಿನ್ನರ್​ ಫ್ರಾಂಕ್​ ಎನ್​ಸುಬುಗಾ ಸ್ಥಾನ ಸಂಪಾದಿಸಿದ್ದಾರೆ. ಜೂನ್​ 1ರಿಂದ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್​ನಲ್ಲಿ ಆಡಲಿರುವ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಯೂ ಅವರದಾಗಿದೆ.

    ಯಾವುದೇ ಮಾದರಿಯ ಐಸಿಸಿ ವಿಶ್ವಕಪ್​ಗೆ ಮೊದಲ ಬಾರಿ ಪ್ರವೇಶ ಪಡೆದಿರುವ ಉಗಾಂಡ ತಂಡವನ್ನು ಬ್ರಿಯಾನ್​ ಮಸಾಬಾ ಮುನ್ನಡೆಸಲಿದ್ದಾರೆ. ಪಾಕಿಸ್ತಾನ ಮೂಲದ ರೈಜಾಟ್​ ಅಲಿ ಷಾ ತಂಡದ ಉಪನಾಯಕರಾಗಿ ನೇಮಕಗೊಂಡಿದ್ದಾರೆ. ಓಮನ್​ ತಂಡದಲ್ಲಿ ಮೊಹಮದ್​ ನದೀಂ ಮತ್ತು ನಸೀಮ್​ ಖುಷಿ ಎಂಬ 41 ವರ್ಷದ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದು, ಅವರನ್ನು ಫ್ರಾಂಕ್​ ಎನ್​ಸುಬುಗಾ ಮೀರಿಸಿ ಟೂರ್ನಿಯ ಹಿರಿಯ ಆಟಗಾರ ಎನಿಸಿದ್ದಾರೆ. ಕಳೆದ ವರ್ಷ ಆಫ್ರಿಕನ್​ ಅರ್ಹತಾ ಟೂರ್ನಿಯಲ್ಲಿ ಜಿಂಬಾಬ್ವೆ, ಕೀನ್ಯಾ ತಂಡಗಳನ್ನು ಹಿಮ್ಮೆಟ್ಟಿಸಿ ಫೈನಲ್​ಗೇರುವ ಮೂಲಕ ಉಗಾಂಡ ಟಿ20 ವಿಶ್ವಕಪ್​ಗೆ ಅರ್ಹತೆ ಸಂಪಾದಿಸಿತ್ತು.

    ಭಾರತದ ಮಾಜಿ ಆಟಗಾರ ಅಭಯ್​ ಶರ್ಮ ಟಿ20 ವಿಶ್ವಕಪ್​ನಲ್ಲಿ ಉಗಾಂಡ ತಂಡದ ಮುಖ್ಯ ಕೋಚ್​ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಭಾರತ ಮೂಲದ ಮೂವರು ಆಟಗಾರರಾದ ದಿನೇಶ್​ ನಕ್ರಾನಿ, ರೋನಕ್​ ಪಟೇಲ್​ ಮತ್ತು ಅಲ್ಪೇಶ್​ ರಾಮ್​ಜಾನಿ ಕೂಡ ಉಗಾಂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಟಿ20 ವಿಶ್ವಕಪ್​ನಲ್ಲಿ ಸಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಉಗಾಂಡ ತಂಡ ಜೂನ್​ 4ರಂದು ಗಯಾನಾದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ.

    IPL 2024: ರಾಜಸ್ಥಾನ ರಾಯಲ್ಸ್​​ಗೆ ಡೆಲ್ಲಿ ಕ್ಯಾಪಿಟಲ್ಸ್ ಶಾಕ್​; ಪಂತ್​ ಪಡೆ ಪ್ಲೇಆಫ್​ ಆಸೆಗೆ ಬಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts