More

    ಸ್ಯಾಂಡಲ್‌ವುಡ್ ನಟಿಯ ತಂದೆ ಗೂಂಡಾ ಕಾಯ್ದೆಯಡಿ ಬಂಧನ

    ಬೆಂಗಳೂರು: ನಗರದಲ್ಲಿ ಜೂಜು ಅಡ್ಡೆ ನಡೆಸಿ ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿದ್ದ ಆರೋಪದ ಮೇಲೆ ಮುಂಗಾರು ಮಳೆ-2 ಸಿನಿಮಾ ನಾಯಕಿ ನೇಹಾ ಶೆಟ್ಟಿ ಅವರ ತಂದೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇಸ್ಪಿಟ್ ಅಡ್ಡೆ ರುವಾರಿ ಮಂಗಳೂರು ಮೂಲದ ಹರಿರಾಜ್ ಶೆಟ್ಟಿ ಗೂಂಡ ಕಾಯ್ದೆಯಡಿ ದೀರ್ಘಬಂಧನಕ್ಕೆ ಒಳಗಾಗಿರುವ ಆರೋಪಿಯಾಗಿದ್ದಾರೆ.

    ಸಾಮಾನ್ಯವಾಗಿ ರೌಡಿಗಳನ್ನು ಗೂಂಡಾ ಕಾಯ್ದೆಯಡಿ ಬಂಧನ ಮಾಡಲಾಗುತ್ತೆ. ಆದ್ರೆ ಅತಿ ವಿರಳ ಪ್ರಕರಣದಲ್ಲಿ‌ ಗ್ಯಾಂಬ್ಲರ್ ಮೇಲೆ ಗೂಂಡಾ ಆಕ್ಟ್ ಪ್ರಯೋಗ ಮಾಡಿದ ಉದಾಹರಣೆ ಇದಾಗಿದೆ. ಈ ಹಿಂದೆ ಹಲವು ಬಾರಿ ಇಸ್ಪಿಟ್ ರೇಡ್ ವೇಳೆ ಬಂಧನವಾಗಿದ್ದ ಹರಿರಾಜ್ ಶೆಟ್ಟಿ, ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಜೂಜು ಅಡ್ಡೆಗಳನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಗೂಂಡಾ ಕಾಯ್ದೆಯಡಿ ಬಂಧಿಸಿ ಒಂದು ವರ್ಷ ಜೈಲಿನಲ್ಲೇ ಇರುವಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

    ಇದನ್ನೂ ಓದಿ: ಮಳೆ ನಿಂತ ಬೆನ್ನಲ್ಲೇ ಭೂಕಂಪನ! ಭಯ ಬಿದ್ದು ಮನೆಯಿಂದ ಹೊರಗೆ ಓಡಿಬಂದ ಗ್ರಾಮಸ್ಥರು

    ಹರಿರಾಜ್ ಶೆಟ್ಟಿ ವಿರುದ್ಧ ಕೋರಮಂಗಲ, ಕಬ್ಬನ್‌ಪಾರ್ಕ್, ಅಶೋಕ್ ನಗರ, ಬಸವೇಶ್ವರ ನಗರ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ 13ಕ್ಕೂ ಅಧಿಕ ಕೇಸುಗಳು ದಾಖಲಾಗಿದ್ದವು. ನಗರದಲ್ಲಿ ಪೂಲ್ ಇನ್ ರಿಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಹಲವೆಡೆ ಜೂಜು ಅಡ್ಡೆ ಹಾಗೂ ಬ್ಯಾನ್ ಆಗಿರುವ ಸಿಲ್ಕ್ ಗೇಮ್, ವಿಡಿಯೋ ಗೇಮ್ ಪಾರ್ಲರ್ ನಡೆಸುತ್ತಿದ್ದರು. ಸಿಸಿಬಿ ಪೊಲೀಸರು ದಾಳಿ ನಡೆಸಿ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಮತ್ತೆ ಹಳೇ ಚಾಳಿ ಮುಂದುವರೆಸಿದ್ದರು. 2014 ರಿಂದಲೂ ಇವರು ಅಕ್ರಮ ದಂಧೆ ನಡೆಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.

    ಈ ಕಾರಣಕ್ಕಾಗಿ ಸಿಸಿಬಿ ಪೊಲೀಸರು ಹರಿರಾಜ್‌ರನ್ನು ಈ ಹಿಂದೆಯೇ ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದ್ದರು. ಆದರೆ ಹರಿರಾಜ್ ಕೋರ್ಟ್ ಮೊರೆ ಹೋಗಿ, ‘ಪೊಲೀಸರು ನನ್ನ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ’ ಎಂದು ಆರೋಪಿಸಿದ್ದರು. ಆಗ ಹೈಕೋರ್ಟ್‌ನಲ್ಲಿ ಸ್ಟೇ ಪಡೆದು ಜೈಲಿನಿಂದ ಹೊರಬಂದಿದ್ದರು. ಈ ನಡುವೆ ಗೂಂಡಾ ಕಾಯ್ದೆ ತಡೆ ತೆರವು ಮಾಡುವಂತೆ ಸಿಸಿಬಿ ಪೊಲೀಸರು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಸಿಸಿಬಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿ, ಗೂಂಡಾ ಕಾಯ್ದೆಯಡಿ ಬಂಧಿಸಿ ವಿಚಾರಣೆ ನಡೆಸಲು ಅನುಮತಿ ನೀಡಿದ ಬೆನ್ನಲ್ಲೇ ಸಿಸಿಬಿ ಪೊಲೀಸರು ಹರಿರಾಜ್ ಶೆಟ್ಟಿ ಅವರನ್ನು ಈಗ ಮತ್ತೆ ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

    ಇದನ್ನೂ ಓದಿ: ಆಪರೇಷನ್​ ಮಾಡಿ ಮಗು ತೆಗೆಯುವ ವೇಳೆ ಹತ್ತಿಯನ್ನು ಹೊಟ್ಟೆಯಲ್ಲೇ ಬಿಟ್ಟ ವೈದ್ಯರು! ಮೇಲೆ ಏಳಲೇ ಇಲ್ಲ ತಾಯಿ

    ದಿನವೊಂದಕ್ಕೆ ಲಕ್ಷ-ಲಕ್ಷ ಸಂಪಾದನೆ: ಹರಿರಾಜ್ ಶೆಟ್ಟಿ ಪೊಲೀಸರ ವಿರುದ್ಧ ಸುಖಾಸುಮ್ಮನೆ ಎಸಿಬಿ, ಲೋಕಾಯುಕ್ತ ಹಾಗೂ ಹಿರಿಯ ಅಧಿಕಾರಿಗಳಿಗೆ ದೂರು ಕೊಡುತ್ತಿದ್ದ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದರು. ಹರಿರಾಜ್ ನಡೆಸುತ್ತಿದ್ದ ಜೂಜೂಟದಲ್ಲಿ ಆಂಧ್ರ ಮೂಲದವರೇ ಅಧಿಕವಾಗಿದ್ದು, ದಿನವೊಂದಕ್ಕೆ ಲಕ್ಷ-ಲಕ್ಷ ರೂ. ಅಕ್ರಮವಾಗಿ ಸಂಪಾದಿಸುತ್ತಿದ್ದರು. ಇದನ್ನು ಅರಿತ ಸಿಸಿಬಿ ಡಿಸಿಪಿ ರವಿಕುಮಾರ್ ನೇತೃತ್ವದ ತಂಡ ಈತ ನಡೆಸುತ್ತಿದ್ದ ಜೂಜಾಟ ಅಡ್ಡೆ ಮೇಲೆ ದಾಳಿ ನಡೆಸಿ ಅದನ್ನು ವಿಡಿಯೋದಲ್ಲಿ ಸೆರೆ ಹಿಡಿದು ಸಾಕ್ಷ್ಯ ಸಂಗ್ರಹಿಸಿ ಕ್ರಮ ಕೈಗೊಂಡಿತ್ತು.

    ಸಂಸದರು ‘ಕಾಣೆಯಾಗಿದ್ದಾರೆ’ ಎಂದು ಪೋಸ್ಟರ್​ ಹಿಡಿದ ಕ್ಷೇತ್ರದ ಜನ!

    ‘ಜಾಹಿರಾತು ನೋಡಿ ಹಣ ಬರುತ್ತೆ’ ಎಂದು ವಂಚನೆ… 4 ಲಕ್ಷ ಜನರಿಗೆ ಟೋಪಿ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts