Fact Check: ಅಮೆಜಾನ್ ತನ್ನ 30ನೇ ವರ್ಷಾಚರಣೆಯ ಪ್ರಯುಕ್ತ ಉಚಿತ ಉಡುಗೊರೆ ನೀಡುತ್ತಿದೆಯೇ?

AMAZON
AMAZON
Published on

ಬೆಂಗಳೂರು: ಇತ್ತೀಚೆಗೆ ಮೊಬೈಲ್​ಗಳಲ್ಲಿ ವಾಟ್ಸ್​ಪ್ ಸಂದೇಶವೊಂದು ಬಹಳ ಸದ್ದು ಮಾಡುತ್ತಿದೆ. ಅದೇನೆಂದರೆ, ಅಮೆಜಾನ್​ ಕಂಪನಿ ಮೂವತ್ತನೇ ವರ್ಷಾಚರಣೆಯ ಪ್ರಯುಕ್ತ ಎಲ್ಲರಿಗೂ ಉಡುಗೊರೆ ದೊರೆಯಲಿದೆ ಎಂಬ ಲಿಂಕ್ ಒಂದು ಹರಿದಾಡುತ್ತಿದೆ.

ಈ ಲಿಂಕ್ ಕ್ಲಿಕ್ ಮಾಡಿದರೆ (https://ccweivip.xyz/amazonhz/tb.php?v=ss1616516)

ಅಮೆಜಾನ್ ಸರ್ವೆಯೊಂದನ್ನು ನಡೆಸುತ್ತಿದೆ ಇದಕ್ಕೆ ಉತ್ತರಿಸಿದರೆ ನಿಮಗೆ ದುಬಾರಿ ಉಡುಗೊರೆ ದೊರೆಯಲಿದೆ ಎಂಬ ಲಿಂಕ್ ಅದು. ಆದರೆ, ನಾವು ಯಾವುದೇ ಉಡುಗೊರೆ ನೀಡುತ್ತಿಲ್ಲ, ಸರ್ವೆಯನ್ನೂ ನಡೆಸುತ್ತಿಲ್ಲ ಎಂದು ಅಮೆಜಾನ್ ಸ್ಪಷ್ಟಪಡಿಸಿದೆ.

ಫೇಕ್ ಯುಆರ್​ಎಲ್ ಲಿಂಕ್ ಕ್ಲಿಕ್ ಮಾಡಿ, ಸರ್ವೆಯಲ್ಲಿ ಭಾಗವಹಿಸಿದರೆ, ಉಡುಗೊರೆಯ ಬಾಕ್ಸ್​ ಒಂದು ಕಾಣುತ್ತದೆ. ನಂತರ ಆ ಸಂದೇಶವನ್ನು 20 ಜನಕ್ಕೆ ಅಥವಾ ಐದು ವಾಟ್ಸಪ್ ಗ್ರುಪ್​ಗಳಲ್ಲಿ ಕಳಿಸಿದರೆ ಉಡುಗೊರೆ ನಿಮ್ಮದಾಗಲಿದೆ ಎಂಬ ಸೂಚನೆ ಇರುತ್ತದೆ.

ಒಂದು ವೇಳೆ ಯಾರಾದರೂ ಸಂದೇಶವನ್ನು ಕಳಿಸಿದರೆ, ಹ್ಯಾಕರ್​ಗಳು ನಿಮ್ಮ ಖಾಸಗಿ ಮಾಹಿತಿಯನ್ನು ನಿಮ್ಮ ಮೊಬೈಲ್​ನಿಂದ ಕದಿಯಬಹುದು ಈ ಕುರಿತು ಎಚ್ಚರವಾಗಿರಿ ಎಂದು ಅಮೆಜಾನ್ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net