More

    ದೀದಿಗೆ ಸೀರೆ ಬಿಟ್ಟು ಬರ್ಮುಡಾ ಧರಿಸಲು ಹೇಳಿದ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ!

    ಕಲ್ಕತ್ತ: ‘ಸೀರೆ ಬಿಟ್ಟು ಬರ್ಮುಡಾ ಧರಿಸಿ, ಆಗ ನಿಮ್ಮ ನಿಜ ಬಣ್ಣ ಜನಕ್ಕೆ ಗೊತ್ತಾಗಲಿದೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಉದ್ದೇಶಿಸಿ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಇತ್ತೀಚೆಗೆ ನಂದಿಗ್ರಾಮದ ಚುನಾವಣಾ ಪ್ರಚಾರದಲ್ಲಿ ಮಮತಾ ಬ್ಯಾನರ್ಜಿ ಅವರು ಕಾಲಿಗೆ ಗಾಯ ಮಾಡಿಕೊಂಡಿದ್ದರು, ವೈದ್ಯರು ಅವರ ಎಡಗಾಲಿಗೆ ಬ್ಯಾಂಡೇಜ್ ಹಾಕಿದ್ದರು. ಹೀಗಾಗಿ ಮಮತಾ, ವೀಲ್​ ಚೇರ್ ಮೇಲೆಯೇ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ.

    ಈ ಬಗ್ಗೆ ಪುರುಲಿಯಾದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಅನುಮಾನ ವ್ಯಕ್ತಪಡಿಸಿ ಮಾತನಾಡಿರುವ ದಿಲೀಪ್ ಘೋಷ್, ‘ಮಮತಾರ ಒಂದು ಕಾಲಿಗೆ ಬ್ಯಾಂಡೇಜ್ ಹಾಕಲಾಗಿತ್ತು. ಈಗ ಅದನ್ನು ತೆಗೆದು ಹಾಕಲಾಗಿದೆ. ಆದರೂ ಅವರು ಅದನ್ನು ಸೀರೆಯಿಂದ ಮುಚ್ಚಿಕೊಂಡಿರುತ್ತಾರೆ. ಇನ್ನೊಂದು ಕಾಲು ಕಾಣಿಸುತ್ತದೆ. ಈ ಬಗ್ಗೆ ಜನಕ್ಕೆ ಸತ್ಯ ಗೊತ್ತಾಗಬೇಕಾದರೆ ಅವರು ಬರ್ಮುಡಾ ಚಡ್ಡಿಯನ್ನು ಧರಿಸುವುದು ಸೂಕ್ತ’ ಎಂದು ಲೇವಡಿ ಮಾಡಿದ್ದಾರೆ.

    ಇದನ್ನೂ ಓದಿ: ಮಸ್ಕಿ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಪ್ರತಾಪಗೌಡ ಪಾಟೀಲ್, ಕಾಂಗ್ರೆಸ್ ಹುರಿಯಾಳಾಗಿ ಆರ್.ಬಸನಗೌಡ ತುರ್ವಿಹಾಳ ನಾಮಪತ್ರ ಸಲ್ಲಿಕೆ

    ಈ ಬಗ್ಗೆ ತೀವ್ರ ಕಿಡಿ ಕಾರಿರುವ ಟಿಎಂಸಿ ಮಹಿಳಾ ನಾಯಕಿಯರು, ‘ಒಬ್ಬ ಮಹಿಳೆ ಬಗ್ಗೆ ಅಪಮಾನಕಾರವಾಗಿ ಮಾತನಾಡಿರುವ ಈ ವಿಕೃತ ಕೋತಿಗಳು ಬಂಗಾಳವನ್ನು ಗೆಲ್ಲುವ ಕನಸು ಕಾಣುತ್ತಿವೆ’ ಎಂದು ವಕ್ತಾರೆ ಮಹುವಾ ಮೋಯಿತ್ರಾ ಹೇಳಿದ್ದಾರೆ.

    ನಂದಿಗ್ರಾಮ ಚುನಾವಣೆ ಪ್ರಚಾರದಲ್ಲಿ ಮಮತಾ ಕಾಲಿಗೆ ಗಾಯ ಮಾಡಿಕೊಂಡಿದ್ದು ದೊಡ್ಡ ವಿವಾದ ಸೃಷ್ಟಿಸಿತ್ತು. ಚುನಾವಣೆಯಲ್ಲಿ ಅನುಕಂಪ ಪಡೆಯಲು ಮಮತಾ ನಾಟಕ ಮಾಡುತ್ತಿದ್ದಾರೆ ಎಂದೇ ಬಿಜೆಪಿ ಆರೋಪಿಸುತ್ತಾ ಬಂದಿದೆ.

    ಮಮತಾ ಮೇಲೆ ‘ಅಟ್ಯಾಕ್​’ ಆಗಿದೆ ಅನ್ನೋಕೆ ಪುರಾವೆ ಇಲ್ಲ : ಚುನಾವಣಾ ಆಯೋಗ

    ದೀದಿಯ ಭದ್ರತಾ ಅಧಿಕಾರಿಯನ್ನು ಅಮಾನತು ಮಾಡಿದ ಕೇಂದ್ರ ಚುನಾವಣಾ ಆಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts