ಬುಲ್ಧಾನ ಬಸ್​ ದುರಂತ; ನಾವು ಏನೂ ಮಾಡದ ಪರಿಸ್ಥಿತಿಯಲ್ಲಿದ್ದೆವು ಎಂದ ಪ್ರತ್ಯಕ್ಷದರ್ಶಿ

MH eye Witness
Published on

ಮುಂಬೈ: ಟೈರ್​ ಸ್ಪೋಟಗೊಂಡು ಖಾಸಗಿ ಬಸ್​ ಒಂದು ಬೆಂಕಿಗಾಹುತಿಯಾಗಿ 25ಕ್ಕೂ ಹೆಚ್ಚು ಮಂದಿ ಸಜೀವ ದಹನ ಆಗಿರುವ ಘಟನೆ ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಸಮೃದ್ದಿ ಎಕ್ಸ್​ಪ್ರೆಸ್​ವೇನಲ್ಲಿ ನಡೆದಿದೆ.

ಘಠನೆಯೂ ರಾತ್ರಿ 1:30ರ ಸುಮಾರಿಗೆ ನಡೆದಿದ್ದು, ನಾಗ್ಪುರದಿಂದ ಪುಣೆಯತ್ತ ತೆರಳುವಾಗ ಬುಲ್ಧಾನ ಜಿಲ್ಲೆಯ ಸಿಂದ್​ಖೇಡಾರಾಜಾ ಸಮೀಪ ಟೈರ್​ ಸ್ಪೋಟಗೊಂಡಿದ್ದು ಚಾಲಕನ ನಿಯಂತ್ರಣ ತಪ್ಪಿ ಬಸ್​ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಇದಿರಿಂದಾಗಿ ಬಸ್​ ಹೊತ್ತಿಕೊಂಡು ಉರಿದಿದೆ.

ಬಸ್​ನಲ್ಲಿ ಒಟ್ಟು 33 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ. ಕ್ಷಣಾರ್ಧದಲ್ಲೇ ಬೆಂಕಿ ಇಡೀ ಬಸ್​ ಆವರಿಸಿದ ಪರಿಣಾಮ 25 ಜನ ಸಜೀವ ದಹನವಾಗಿದ್ಧಾರೆ. ಘಟನೆಯಲ್ಲಿ ಗಾಯಗೊಂಡಿರುವ 8 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಪ್ರತ್ಯಕ್ಷದರ್ಶಿ ರಾಮೇಶ್ವರ್​ ದರಾದೆ ನಾಣು ತಡರಾತ್ರಿ 1:30ರ ಸುಮಾರಿಗೆ ಸ್ಫೋಟದ ಶಬ್ದ ಕೇಳಿಸಿತ್ತು. ಕೂಡಲ್ಲೇ ನಾನು ಹಾಗೂ ಇನ್ನಿಬ್ಬರು ಸ್ಥಳಕ್ಕೆ ತೆರಳಿದಾಗ ಕ್ಷಣಾರ್ಧದಲ್ಲೇ ಬಸ್​ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಜನ ಸಹಾಯಕ್ಕಾಗಿ ಅಂಗಲಾಚುತ್ತಿದ್ದರು ಆದರೆ, ನಾವು ಏನೂ ಮಾಡದ ಪರಿಸ್ಥಿತಿಯಲ್ಲಿದ್ದೆವು ಎಂದು ತಿಳಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net