ಆಸ್ತಿ ವಿವಾದ; ಮಹಿಳೆಯನ್ನು ತುಂಡು ತುಂಡಾಗಿ ಕತ್ತರಿಸಿದ ದುರುಳರು

BIhar Murder
Published on

ಪಟ್ನಾ: ಆಘಾತಕಾರಿ ಘಟನೆಯೊಂದರಲ್ಲಿ 45 ವರ್ಷದ ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಆಕೆಯ ಕಣ್ಣು ಕಿತ್ತು ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬಿಹಾರದ ಖಗಾರಿಯಾ ಜಿಲ್ಲೆಯ ಪಸ್ರಾಹ ಗ್ರಾಮದಲ್ಲಿ ನಡೆದಿದೆ.

ಮೃತರನನ್ಉ ಸುಲೇಖಾ ದೇವಿ(45) ಎಂದು ಗುರುತಿಸಲಾಗಿದ್ದು, ದುಷ್ಕರ್ಮಿಗಳು ಆಕೆಯ ಕಣ್ಣನ್ನು ಕಿತ್ತು ಹಾಕಿ, ನಾಲಿಗೆಯನ್ನು ಕತ್ತರಿಸಿ ಖಾಸಗಿ ಅಂಗಗಳನ್ನು ವಿರೂಪಗಳಿಸಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭೂ ವ್ಯಾಜ್ಯ

ಈ ಕುರಿತು ಪ್ರತಿಕ್ರಿಯಿಸಿರುವ SDPO ಮನೋಜ್​ ಕುಮಾರ್,​ ಸುಲೇಖಾ ದೇವಿ ಅವರು ಎಂದಿನಂತೆ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದುಷ್ಕರ್ಮಿಗಳು ಅವರ ಮೇಲೆ ದಾಳಿ ಮಾಡಿದ್ದು, ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

BIhar Murder

ಭೂ ವ್ಯಾಜ್ಯ ಸಂಬಂಧ ಹತ್ಯೆ ನಡೆದಿರಬಹುದು ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. 2014ರಲ್ಲಿ ಆಕೆಯ ಪತಿ ಹಾಗೂ ಬಾಮೈದುನನ್ನು ಇದೇ ರೀತಿ ಹತ್ಯೆ ಮಾಡಲಾಗಿತ್ತು. ಕೊಲೆ ಆರೋಪಿಯೂ ಕಳೆದ ವರ್ಷ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆತನ ಮೇಲು ಸಂಶಯವಿದ್ದು ಈ ಕುರಿತು ವಿಚಾರಿಸಲಾಗುತ್ತಿದೆ.

ವಿಶೇಷ ತಂಡ ರಚನೆ

ಈ ಕುರಿತು ವಿಶೇಷ ತಂಡ ಒಂದನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು SDPO ಮನೋಜ್​ ಕುಮಾರ್​ ತಿಳಿಸಿದ್ದಾರೆ.

ಸುಲೇಖಾ ಹತ್ಯೆಯನ್ನು ಖಂಡಿಸಿ ಪಸ್ರಾಹ ಗ್ರಾಮದ ನಿವಾಸಿಗಳು ಹಾಗೂ ಮೃತ ಮಹಿಳೆಯ ಸಂಬಂಧಿಕರು ಪೊಲೀಸ್​ ಠಾಣೆ ಹಾಗೂ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ದೌಡಾಯಿಸಿದ ಹಿರಿಯ ಪೊಲೀಸ್​ ಅಧಿಕಾರಿಗಳ ತಂಡ ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net