

ನವದೆಹಲಿ: ಕಾರ್ವಿುಕರನ್ನು ಹೆಚ್ಚುವರಿ ಅವಧಿ ದುಡಿಸಿಕೊಂಡರೆ ಅವರಿಗೆ ಹೆಚ್ಚುವರಿ ವೇತನವನ್ನೂ ಪಾವತಿಸಬೇಕು ಎಂದು ಕೇಂದ್ರ ಕಾರ್ವಿುಕ ಸಚಿವಾಲಯ ಹೇಳಿದೆ.
ಲಾಕ್ಡೌನ್ ನಿರ್ಬಂಧ ಸಡಿಲಿಕೆ ಹಿನ್ನೆಲೆ ಮೇ ತಿಂಗಳಿನಿಂದ ಕೈಗಾರಿಕೆಗಳು ಪುನರಾರಂಭವಾಗಿದ್ದರೂ ಕಾರ್ವಿುಕರ ಕೊರತೆ ಎದುರಾಗಿದೆ. ಹೀಗಾಗಿ ಇರುವ ಕಾರ್ವಿುಕರನ್ನು ಹೆಚ್ಚುವರಿ ಅವಧಿ ದುಡಿಸಿ ಕೊಂಡು ಕೈಗಾರಿಕೆಗಳು ಕಾರ್ಯಾಚರಣೆ ಸಾಮರ್ಥ್ಯವನ್ನು ಸರಿ ದೂಗಿಸುತ್ತಿವೆ. ಈ ಕಾರಣದಿಂದ ಕಾರ್ವಿುಕರ ಕೆಲಸದ ಅವಧಿಯನ್ನು 8 ತಾಸುಗಳಿಂದ 12 ತಾಸುಗಳಿಗೆ ಹೆಚ್ಚಿಸಲಾಗಿದ್ದು, ಹೆಚ್ಚುವರಿ ಅವಧಿಗೆ ದ್ವಿಗುಣ (ಒಟಿ) ವೇತನ ನೀಡಬೇಕು ಎಂದು ಸಚಿವಾಲಯ ತಿಳಿಸಿದೆ.
ಕಾರ್ವಿುಕರು ರಜಾದಿನಗಳಲ್ಲೂ ಕೆಲಸ ಮಾಡಿದ್ದರೆ ಅವರ ಮೂಲ ವೇತನದ ಶೇಕಡ 300 ಪಾವತಿಸಬೇಕಾಗುತ್ತದೆ ಎಂದು ಕಾರ್ವಿುಕ ಸಚಿವಾಲಯದ ಕಾರ್ಯದರ್ಶಿ ಹಿರಾಲಾಲ್ ತಿಳಿಸಿದ್ದಾರೆ. ಕಾರ್ವಿುಕರಿಗೆ ವಿಶೇಷ ಸಾಮಾಜಿಕ ಭದ್ರತಾ ಕಾರ್ಡ್ ಅನ್ನು ಸಚಿವಾಲಯ ಜಾರಿಗೆ ತರಬೇಕು ಎಂದು ಕಾರ್ವಿುಕರ ಕುರಿತ ಸಂಸತ್ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.