ಮುಕೇಶ್​ ಅಂಬಾನಿ ಮನೆ ಬಳಿ ಸ್ಫೋಟಕ ಸಾಮಾಗ್ರಿ ತುಂಬಿದ ಕಾರು ಪತ್ತೆ!

ಮುಕೆಸಹ
Published on

ಮುಂಬೈ: ದೇಶದ ಪ್ರಸಿದ್ಧ ಉದ್ಯಮಿ ಮುಕೇಶ್​ ಅಂಬಾನಿಯವರ ಮುಂಬೈ ನಿವಾಸದ ಬಳಿ ಸ್ಫೋಟಕ ವಸ್ತುಗಳು ತುಂಬಿರುವ ಕಾರೊಂದು ಕಾಣಿಸಿಕೊಂಡಿದೆ. ಸ್ಥಳಕ್ಕೆ ಬಂದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮುಂಬೈನ ಪೆಡ್ಡಾರ್ ರಸ್ತೆಯಲ್ಲಿರುವ ಆಂಟಿಲಿಯಾ ನಿವಾಸದ ಬಳಿ ಸ್ಕಾರ್ಪಿಯೋ ಗಾಡಿ ಒಂದು ಸಾಕಷ್ಟು ಸಮಯದಿಂದ ನಿಂತಿದ್ದನ್ನು ಅಂಬಾನಿಯವರ ಭದ್ರತಾ ಸಿಬ್ಬಂದಿ ನೋಡಿದ್ದಾರೆ. ತಕ್ಷಣ ಆ ಮಾಹಿತಿಯನ್ನು ಮುಂಬೈ ಪೊಲೀಸರಿಗೆ ಕೊಡಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಬಾಂಬ್​ ನಿಗ್ರಹ ದಳಕ್ಕೂ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಕಾರಿನ ಒಳಗೆ ಪರಿಶೀಲನೆ ನಡೆಸಿದಾಗ ಅದರಲ್ಲಿ 20 20 ಜೆಲಾಟಿನ್ ಸ್ಟಿಕ್‌ಗಳು ಕಾಣಿಸಿವೆ. ಇವುಗಳನ್ನು ಸ್ಫೋಟಕ ತಯಾರು ಮಾಡಲು ಬಳಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಶ್ವಾನಪಡೆಯೂ ಬಂದಿದ್ದು ಪರಿಶೀಲನೆ ನಡೆಸಿದೆ. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net