More

    ಗಂಡ ಹೆಂಡತಿ ಇದ್ದರೇ ಕುಟುಂಬ; ಸಲಿಂಗ ವಿವಾಹವನ್ನು ಕಾನೂನಾತ್ಮಕವಾಗಿ ಒಪ್ಪಲು ಅಸಾಧ್ಯವೆಂದ ಕೇಂದ್ರ

    ನವದೆಹಲಿ: ಸಲಿಂಗ ವಿವಾಹವನ್ನು ಕಾನೂನಾತ್ಮಕವಾಗಿ ಒಪ್ಪಲು ಅಸಾಧ್ಯ ಎಂದು ಕೇಂದ್ರ ಸರ್ಕಾರ ದೆಹಲಿ ಹೈ ಕೋರ್ಟ್​ಗೆ ತಿಳಿಸಿದೆ. ಗಂಡ ಹೆಂಡತಿ ಮತ್ತು ಮಕ್ಕಳಿರುವ ಭಾರತೀಯ ಕುಟುಂಬದ ಪರಿಕಲ್ಪನೆಗೆ ಸಲಿಂಗದ ಸಂಬಂಧ ಹೊಂದಿರುವ ಸತಿ ಪತಿಯನ್ನು ಹೋಲಿಸಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ.

    ವಿಶೇಷ ವಿವಾಹ ಕಾಯ್ದೆ ಮತ್ತು ದೇಶದ ಹಿಂದೂ ವಿವಾಹ ಕಾಯ್ದೆ 1956ರಲ್ಲಿ ಸಲಿಂಗ ವಿವಾಹಗಳಿಗೆ ಅನುಮತಿ ನೀಡಬೇಕು ಎಂದು ದೆಹಲಿ ಹೈ ಕೋರ್ಟ್​ಗೆ ಮನವಿ ಸಲ್ಲಿಸಲಾಗಿತ್ತು. ಅದರ ಕುರಿತಾಗಿ ಕೇಂದ್ರ ಸರ್ಕಾರ ವಿರೋ ವ್ಯಕ್ತಪಡಿಸಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಭಾರತೀಯ ಕುಟುಂಬದ ಪ್ರಕಾರ ಮನೆಯಲ್ಲಿ ಗಂಡು ಪತಿಯಾಗಿ ಹಾಗೂ ಹೆಣ್ಣು ಸತಿಯಾಗಿ ಬದುಕುವುದೇ ಕುಟುಂಬ. ಆದರೆ ಸಲಿಂಗ ವಿವಾಹವಾಗಿ ಅವರೇ ಗಂಡ ಹೆಂಡತಿ ಎಂದರೆ ಅದನ್ನು ಒಪ್ಪಲಾಗುವುದಿಲ್ಲ ಎಂದು ಅಫಿಡವಿಟ್​ನಲ್ಲಿ ತಿಳಿಸಲಾಗಿದೆ.

    ದೇಶದಲ್ಲಿನ ವಿವಾಹದ ಕಾನೂನನ್ನು ಸಂಸತ್ತು ರೂಪಿಸಿದೆ. ಧಾರ್ಮಿಕ ಸಮುದಾಯಗಳ ಪದ್ಧತಿಗಳಿಗೆ ಸಂಬಂಧಿಸಿದ ಕಾನೂನುಗಳು ಮತ್ತು ವೈಯಕ್ತಿಕ ಕಾನೂನುಗಳನ್ನು ಕ್ರೋಡೀಕರಿಸಿ ಈ ಕಾನೂನು ನಿಯಂತ್ರಣವಾಗುತ್ತದೆ. ಒಬ್ಬ ಪುರುಷ ಮತ್ತು ಮಹಿಳೆಯನ್ನು ಮಾತ್ರವೇ ಕುಟುಂಬವೆಂದು ಅನುಮತಿಸಲು ಧಾರ್ಮಿಕ ಅನುಮೋದನೆ ಹಾಗೂ ಶಾಸನಬದ್ಧ ಅನುಮತಿ ಸಿಗುತ್ತದೆ. ಇದರೊಂದಿಗೆ ಯಾವುದೇ ಹಸ್ತಕ್ಷೇಪವು ದೇಶದ ವೈಯಕ್ತಿಕ ಕಾನೂನುಗಳ ಸೂಕ್ಷ್ಮ ಸಮತೋಲನದೊಂದಿಗೆ ಸಂಪೂರ್ಣ ಹಾನಿಯನ್ನುಂಟುಮಾಡುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
    ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ರಾಜೀವ್ ಸಹೈ ಎಂಡ್ಲಾ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆಯನ್ನು ಏಪ್ರಿಲ್ 20 ಕ್ಕೆ ಮುಂದೂಡಿದೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಸರ್ಕಾರದ ಹೊಸ ನೀತಿಯಿಂದ ವಾಟ್ಸ್​ಆ್ಯಪ್​ಗೆ ಬ್ರೇಕ್?! ಇನ್ಮೇಲೆ ವಾಟ್ಸ್​ಆ್ಯಪ್​​ ಕಥೆ ಏನು?

    ಶ್ರೀಲಂಕಾಕ್ಕೆ 362 ಕೋಟಿ ರೂಪಾಯಿ ಸಾಲ ಕೊಡಲು ಮುಂದಾದ ಪಾಕಿಸ್ತಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts