

Maharaja Express : ಸಾಮಾನ್ಯವಾಗಿ ರೈಲು ಪ್ರಯಾಣ ಎಂದರೆ ನಮಗೆ ತಕ್ಷಣ ನೆನಪಿಗೆ ಬರುವುದು ಜನ ಸಂದಣಿಯ ಮಧ್ಯೆ ಒಂದು ಕಿಟಕಿಯ ಪಕದಲ್ಲಿ ಕುಳಿತು ಆ ಕಿಟಕಿಯಿಂದ ಬರುವ ತಂಪಾದ ತಂಗಾಳಿಯ ಜತೆಗೆ ಹಸಿರು ಹೊಲಗಳ ನೋಟವನ್ನು ಕಣ್ತುಂಬಿಕೊಳ್ಳುತ್ತಾ, ಹಳೆಯ ಹಾಡುಗಳ ಜತೆ ಪ್ರಯಾಣ ಮಾಡುವುದು. ಆದರೆ, ಅದೇ ರೈಲು ಪ್ರಯಾಣದಲ್ಲಿ ರಾಜ ಮನೆತನ ಕಾಲದ ಅರಮನೆಯಂತಹ ಐಷಾರಾಮಿ ಅನುಭವ ಪಡೆದರೆ ಹೇಗಿರುತ್ತದೆ ಅಲ್ವಾ? ಇದೊಂದು ಕಲ್ಪನೆ ಅಂತ ಭಾವಿಸಬೇಡಿ. ಇಂತಹ ಅದ್ಭುತ ಅನುಭವ ನೀಡುವ ರೈಲು ಪ್ರಯಾಣ ಒಂದಿದೆ. ಅದುವೇ ಮಹಾರಾಜ ಎಕ್ಸ್ಪ್ರೆಸ್.
ಹೌದು, ಇದು ಕೇವಲ ರೈಲು ಅಲ್ಲ, ರಾಷ್ಟ್ರ ರಾಜಧಾನಿ ನವದೆಹಲಿಯ ಸಫ್ದರ್ ಜಂಗ್ ನಿಲ್ದಾಣದಿಂದ ಹೊರಡುವ ಐಷಾರಾಮಿ ರೈಲು. ಇದರಲ್ಲಿ ಮಧುರವಾದ ಸಂಗೀತ, ನವೀನ ರೀತಿಯ ಅತಿಥಿ ಸ್ವಾಗತ ವ್ಯವಸ್ಥೆಯನ್ನು ಹೊಂದಿದೆ. ರಾಯಲ್ ಟ್ರೀಟ್ಮೆಂಟ್ನೊಂದಿಗೆ ಶುಭಾರಂಭವಾಗುವ ಈ ಪ್ರಯಾಣದಲ್ಲಿ ಪ್ರತಿ ಅತಿಥಿಗಳಿಗೆ ಹಸ್ತಮುದ್ರೆಯ ಜತೆಗೆ ಆರತಿ ಬೆಳಗಿ, ಪುಷ್ಪಮಾಲೆಯೊಂದಿಗೆ ಸನ್ಮಾನ ಮಾಡುವ ಮೂಲಕ ರಾಜ ಅಥವಾ ರಾಣಿಯಂತಹ ಅನುಭವ ನೀಡಲಿದ್ದಾರೆ.
ಇತ್ತೀಚಿಗಷ್ಟೇ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಮಹಾರಾಜ ಎಕ್ಸ್ಪ್ರೆಸ್ನಲ್ಲಿ ಪ್ರಯಾಣ ಆರಂಭಿಸಿದ್ದು, ಇದು ವಿಶಿಷ್ಟವಾಗಿ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ಹಾಗಾದರೆ, ಅದ್ಭುತ ಅರಮನೆಯಂತಿರುವ ಈ ರೈಲಿನಲ್ಲಿ ಏನೆಲ್ಲ ವಿಶೇಷತೆಗಳು ಇವೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಯಲ್ ಪ್ಯಾಲೆಸ್ನಂತಿರುವ ಈ ರೈಲು ಅದ್ಭುತವಾದ ಇಂಟೀರಿಯರ್ ಡಿಸೈನ್ ಹೊಂದಿದೆ. ರೈಲಿನೊಳಗೆ ಕಾಲಿಟ್ಟ ತಕ್ಷಣವೇ ಅರಮನೆಯೊಳಗೆ ಕಾಲಿಟ್ಟ ಭಾವನೆ ಮೂಡುತ್ತದೆ. ವೈಭವದಿಂದ ಕೂಡಿದ ಹೋಟೆಲ್, ಡಿಲಕ್ಸ್ ಕ್ಯಾಬಿನ್ಗಳು, ಮಾಲೀಷ್ ಲೌಂಜ್ಗಳು, ಉತ್ತಮ ಊಟದ ರೆಸ್ಟೋರೆಟ್ಗಳನ್ನು ಹೊಂದಿದೆ. ಇದರ ಜತೆಗೆ ಎರಡು ಎಸಿ ಕೋಚ್ಗಳು ಸಹ ಇವೆ. ಹಾಗೆಯೇ ಯಾವುದೇ ಅಡಚಣೆಗಳನ್ನು ತಪ್ಪಿಸಲು ಎರಡು ಲೋಕೋಮೋಟಿವ್ಗಳನ್ನು ನಿಯೋಜಿಸಲಾಗಿದೆ. ಇವುಗಳನ್ನು ತಾಂತ್ರಿಕ ಸಮಸ್ಯೆಗಳ ಸಂದರ್ಭದಲ್ಲಿ ಬಳಸಲಾಗುತ್ತದೆ. ಈ ಎಲ್ಲ ತರಹದ ವಿಶೇಷತೆಯನ್ನು ಹೊಂದಿರುವ ಈ ರೈಲು ಒಂದು ಐಷಾರಾಮಿ ಹೋಟೆಲ್ಗೆ ಕಿಂಚಿತು ಕಡಿಮೆ ಇಲ್ಲ ಎಂದು ಹೇಳಬಹುದು.
ವಿಶ್ವದಲ್ಲಿ ಇಂತಹ ಕೆಲವು ಐಷಾರಾಮಿ ಮತ್ತು ದುಬಾರಿ ರೈಲು ಸವಾರಿಗಳ ಬೆಲೆ ಮತ್ತು ವಿಶೇಷತೆಗಳನ್ನು ನಾವೀಗ ತಿಳಿದುಕೊಳ್ಳೋಣ.
* ಟಿಕೆಟ್ ಬೆಲೆ: ಪ್ರತಿ ವ್ಯಕ್ತಿಗೆ 6.92 ಲಕ್ಷದಿಂದ 22.2 ಲಕ್ಷ ರೂಪಾಯಿವರೆಗೆ
* ವಿಶೇಷತೆ: ರಾಜಮನೆತನ ಶೈಲಿಯ ಸೂಟ್ಗಳು, ಹೈ-ಕ್ಲಾಸ್ ಡೈನಿಂಗ್, ಪ್ಯಾಲೇಸ್ನಂತಹ ಅನುಭವ ಹಾಗೂ ವೈಯಕ್ತಿಕ ಸೇವೆ ನೀಡಲಾಗುತ್ತದೆ.
* ಟಿಕೆಟ್ ಬೆಲೆ: 16.8 ಲಕ್ಷದಿಂದ 19.5 ಲಕ್ಷ ರೂಪಾಯಿವರೆಗೆ (4 ದಿನಗಳ ಸೇವೆ)
* ವಿಶೇಷತೆ: ಜಪಾನಿ ಶೈಲಿಯ ಒಳಾಂಗಣ, ವಿಶಿಷ್ಟ ಅಡುಗೆ, ವೀಕ್ಷಣಾ ಕಾರುಗಳು ಹಾಗೂ ಪ್ರವಾಸದ ವೈಯಕ್ತಿಕ ಅನುಭವ ಪಡೆಯಬಹುದು.
* ಟಿಕೆಟ್ ಬೆಲೆ: 3.9 ಲಕ್ಷದಿಂದ 73 ಲಕ್ಷ ರೂ.ವರಗೆ
* ವಿಶೇಷತೆ: ಐತಿಹಾಸಿಕ ಇಂಟೀರಿಯರ್, ಪ್ಯಾರಿಸ್-ವೆನಿಸ್ ಮಾರ್ಗದ ಅನುಭವದ ಜತೆಗೆ ರೋಮ್ಯಾಂಟಿಕ್ ಯುರೋಪಿಯನ್ ವಾತಾವರಣ ಸವಿಯಬಹುದು.
* ಟಿಕೆಟ್ ಬೆಲೆ: 8.86 ಲಕ್ಷ ರೂಪಾಯಿ
* ವಿಶೇಷತೆ: ರೈಲು ಸವಾರಿ, ವಿಂಟೇಜ್ ಕೋಚ್ಗಳು, ಆಟವಾಡಲು ಅವಕಾಶ ಹಾಗೂ ಆಫ್ರಿಕಾದ ರೋಚಕ ಭೂದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.
* ಟಿಕೆಟ್ ಬೆಲೆ: 7.4 ಲಕ್ಷದಿಂದ 17.8 ಲಕ್ಷ ರೂ.ವರೆಗೆ
* ವಿಶೇಷತೆ: ಯುನೆಸ್ಕೋ ತಾಣಗಳ ಭೇಟಿ, ಎಲ್ಲವನ್ನು ಒಳಗೊಂಡ ಸೇವೆ ಪಡೆಯಬಹುದು.
ಒಟ್ಟಿನಲ್ಲಿ ಈ ಐಷಾರಾಮಿ ರೈಲುಗಳು ಕೇವಲ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗುವ ದುಬಾರಿ ವಾಹನಗಳಲ್ಲ. ನಿಮಗೆ ಜೀವನ ಪರ್ಯಂತ ಹಸಿರಾಗಿ ಉಳಿಯುವ ಅದ್ಭುತ ಪಯಣದ ಅನುಭವವನ್ನು ನೀಡುತ್ತವೆ. ಅಂತಹ ಅನುಭವವನ್ನು ನೀವು ಪಡೆಯಬೇಕಾದರೆ ಇಂತಹ ರೈಲುಗಳಲ್ಲಿ ಒಮ್ಮೆಯಾದರು ಪ್ರಯಾಣ ಮಾಡಿ. ಇದರಿಂದ ನಿಮ್ಮ ಬಾಳಿಗೊಂದು ಅದ್ಧೂರಿ ಅಧ್ಯಾಯ ಸೇರುವುದು ಗ್ಯಾರಂಟಿ. (ಏಜೆನ್ಸೀಸ್)