ದುಬಾರಿ ಬಡ್ಡಿ ವಸೂಲಿ; ಅಪ್ಪ-ಮಕ್ಕಳ ಸೆರೆಗೆ ಬಲೆ

ccb (3)
Published on

ಬೆಂಗಳೂರು: ಸಹಕಾರ ಇಲಾಖೆಯಿಂದ ಅನುಮತಿ ಪಡೆಯದೆ ದುಬಾರಿ ಬಡ್ಡಿ ವಸೂಲಿ ಮಾಡುತ್ತಿದ್ದ ಅಪ್ಪ, ಮಕ್ಕಳ ವಿರುದ್ಧ ಎಫ್ಎ್ಐಆರ್ ದಾಖಲಿಸಿ ಸಿಸಿಬಿ ಪೊಲೀಸರು ಬಂಧನಕ್ಕೆ ಬಲೆಬೀಸಿದ್ದಾರೆ.

ಶಾಮಣ್ಣ ಗಾರ್ಡನ್ ನಿವಾಸಿಗಳಾದ ಶ್ರೀರಾಮ್ ಮತ್ತು ಈತನ ಪುತ್ರರಾದ ಕಲ್ಯಾಣ್‌ಕುಮಾರ್, ದಿಲೀಪ್‌ಕುಮಾರ್ ತಲೆಮರೆಸಿಕೊಂಡಿದ್ದಾರೆ. ಕೋರ್ಟ್ ಅನುಮತಿ ಪಡೆದು ಆರೋಪಿ ಮನೆ ಮೇಲೆ ದಾಳಿ ನಡೆಸಿದಾಗ ವಿವಿಧ ಬ್ಯಾಂಕ್‌ಗಳ 100ಕ್ಕೂ ಅಧಿಕ ಚೆಕ್‌ಗಳು, ವಾಹನಗಳ ಆರ್‌ಸಿ ಕಾರ್ಡ್, ಆಸ್ತಿ ಪತ್ರಗಳು ಮತ್ತು ಜನರ ಬಡ್ಡಿ ಹಣದಿಂದ ಖರೀದಿ ಮಾಡಿರುವ ಹಲವು ಆಸ್ತಿಯ ದಾಖಲೆ ಪತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರಿಂದ ಭದ್ರತೆಗಾಗಿ ಚೆಕ್ ಮತ್ತು ಆಸ್ತಿಯ ಪತ್ರಗಳನ್ನು ಅಡಮಾನ ಇಟ್ಟುಕೊಂಡು ಶೇ.10 ಬಡ್ಡಿಗೆ ಸಾಲ ಕೊಟ್ಟು ವಸೂಲಿ ಮಾಡುತ್ತಿದ್ದರು. ಈ ಬಗ್ಗೆ ನೊಂದ ಸಾಲಗಾರರು ಸಹಕಾರ ಇಲಾಖೆಗೆ ದೂರು ಸಲ್ಲಿಸಿದ್ದರು. ಇದರ ಮೇರೆಗೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದುಬಾರಿ ಬಡ್ಡಿ ತಡೆ ಕಾಯ್ದೆಯಡಿ ಎ್ಐಆರ್ ದಾಖಲಾಗಿತ್ತು. ಹೆಚ್ಚಿನ ತನಿಖೆ ಸಲುವಾಗಿ ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಇದರ ಮೇರೆಗೆ ತನಿಖೆ ಕೈಗೊಂಡ ಸಿಸಿಬಿ ಅಧಿಕಾರಿಗಳು, ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಿದ್ದರು.

ವಿಚಾರಣೆಗೆ ಹಾಜರಾಗದೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಆರೋಪಿಗಳ ಮನೆ ಮೇಲೆ ದಾಳಿ ನಡೆಸಲಾಗಿತ್ತು. 100ಕ್ಕೂ ಅಧಿಕ ಜನರಿಗೆ ಲಕ್ಷಾಂತರ ರೂಪಾಯಿ ದುಬಾರಿ ಬಡ್ಡಿಗೆ ಸಾಲ ಕೊಟ್ಟಿದ್ದಾರೆ. ಬಡ್ಡಿ ಕಟ್ಟಲು ಆಗದೆ ಇದ್ದಾಗ ಆರೋಪಿಗಳು ಹೆದರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ವಸೂಲಿ ಮಾಡುತ್ತಿದ್ದರು. ಹಲವು ಬಾರಿ ಸಹಕಾರ ಇಲಾಖೆಯಿಂದ ನೋಟಿಸ್ ಕೊಟ್ಟು ಎಚ್ಚರಿಕೆ ಕೊಟ್ಟರೂ ಚಾಳಿ ಬಿಟ್ಟಿರಲಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net