

ಗ್ರಾಮ ಲೆಕ್ಕಿಗನಾದ ನಾನು, 2020ರ ದ್ವಿತೀಯ ಅಧಿವೇಶನದಲ್ಲಿ ಅಕೌಂಟ್ಸ್ ಹೈಯರ್ ಮತ್ತು ರೆವಿನ್ಯೂ ಹೈಯರ್ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿರುತ್ತೇನೆ. ಆದರೆ ನಮ್ಮ ಮೇಲಧಿಕಾರಿಗಳು ನಿಮಗೆ ನಿಗದಿ ಪಡಿಸಿರುವ ರೆವಿನ್ಯೂ ಲೋಯರ್ ಮತ್ತು ಅಕೌಂಟ್ಸ್ ಲೋಯರ್ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕು ಎಂದು ಸೂಚಿಸಿದ್ದಾರೆ. ಆದ ಕಾರಣ ಈ ಪರೀಕ್ಷೆಗಳಲ್ಲಿ ನಾನು ತೇರ್ಗಡೆಯಾಗಲೇಬೇಕೇ?
| ಬಿ. ರಾಮಕೃಷ್ಣ ದಾವಣಗೆರೆ
ದಿನಾಂಕ 1.4.1976ರ ಸರ್ಕಾರಿ ಸುತ್ತೋಲೆ ಸಂಖ್ಯೆ ಜಿಎಡಿ 25, ಎಸ್ಎಸ್ಆರ್ 76ರಂತೆ ಸರ್ಕಾರಿ ನೌಕರನು ರೆವಿನ್ಯೂ ಹೈಯರ್ ಮತ್ತು ಅಕೌಂಟ್ಸ್ ಹೈಯರ್ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದರೆ ಅಂತಹ ನೌಕರನು ಮತ್ತೆ ರೆವಿನ್ಯೂ ಲೋಯರ್ ಮತ್ತು ಅಕೌಂಟ್ಸ್ ಲೋಯರ್ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವುದಕ್ಕೆ ವಿನಾಯಿತಿ ನೀಡಲಾಗಿದೆ. ಆದರ ಕಾರಣ ನೀವು ಮತ್ತೆ ಈ ಪರೀಕ್ಷೆಗಳಿಗೆ ಹಾಜರಾಗುವ ಅವಶ್ಯವಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾಕಾನೂನು ಕೈಪಿಡಿ ಪುಸ್ತಕ’ ನೋಡಬಹುದು.