

ಗಾಜಾ/ಜೆರುಸಲೇಂ: ಇಸ್ರೇಲ್ ಕಾರಾಗೃಹಗಳಿಂದ ಬಿಡುಗಡೆಯಾದ 39 ಪ್ಯಾಲೆಸ್ತೇನ್ ಮಹಿಳೆಯರು ಮತ್ತು ಯುವಕರಿಗೆ ಪ್ರತಿಯಾಗಿ ಹಮಾಸ್‌ನಿಂದ ಮಕ್ಕಳು ಮತ್ತು ವೃದ್ಧರು ಸೇರಿದಂತೆ 13 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಯಿತು.
ಹಮಾಸ್ ಸೆರೆಯಿಂದ ಬಿಡುಗಡೆಯಾದವರಲ್ಲಿ ನಾಲ್ವರು ಥಾಯ್ ಪ್ರಜೆಗಳು ಸೇರಿ 13 ಇಸ್ರೇಲಿಗರು ಭಾನುವಾರ ಇಸ್ರೇಲ್‌ಗೆ ಆಗಮಿಸಿದರು. ಒಪ್ಪಂದದ ಭಾಗವಾಗಿ 33 ಅಪ್ರಾಪ್ತ ವಯಸ್ಕರು ಸೇರಿದಂತೆ 39 ಪ್ಯಾಲೇಸ್ಟಿನಿಯನ್ ನಾಗರಿಕರನ್ನು ಇಸ್ರೇಲ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ಎಲ್ಲರೂ ಅವರ ಕುಟುಂಬಗಳೊಂದಿಗೆ ಮತ್ತೆ ಸೇರಲು ಸಿದ್ಧರಾಗಿದ್ದಾರೆ.
ಕತಾರ್ ಮತ್ತು ಈಜಿಪ್ಟ್‌ನ ಮಧ್ಯಸ್ಥಿಕೆಯಿಂದ ಒಟ್ಟು 50 ಇಸ್ರೇಲ್ ಒತ್ತೆಯಾಳುಗಳು ಮತ್ತು 150 ಪ್ಯಾಲೇಸ್ತೇನ್ ಬಂಧಿತರನ್ನು ಬಿಡುಗಡೆಗೊಳಿಸಲಾಗಿದೆ.
ಶನಿವಾರ ತಡರಾತ್ರಿ ಹಮಾಸ್ ಬಂಧಿತರನ್ನು ಇಂಟರ್ನ್ಯಾಷನಲ್ ಕಮಿಟಿ ಆಫ್ ರೆಡ್‌ಕ್ರಾಸ್‌ಗೆ (ಐಸಿಆರ್ಸಿ) ಇಸ್ರೇಲ್ನಿಂದ ಹಸ್ತಾಂತರಿಸಲಾಯಿತು. ನಂತರ ಈಜಿಪ್ಟ್ ಭಾಗದ ರಫಾ ಗಡಿಯಲ್ಲಿ ಒತ್ತೆಯಾಳುಗಳನ್ನು ಮಾಧ್ಯಮಗಳಿಗೆ ತೋರಿಸಲಾಯಿತು. ಇಸ್ರೇಲ್ ಆಕ್ರಮಿತ ವೆಸ್ಟ್ ಬ್ಯಾಂಕ್‌ನಲ್ಲಿರುವ ಬೈಟುನಿಯಾ ಪಟ್ಟಣಕ್ಕೆ ಹೋಗುವ ದಾರಿಯಲ್ಲಿರುವ ಇಸ್ರೇಲ್ ಜೈಲಿನಿಂದ ಬಿಡುಗಡೆಯಾದ ಪ್ಯಾಲೇಸ್ಟಿನಿಯನ್ ಕೈದಿಗಳನ್ನು ಹರ್ಷೋದ್ಗಾರದ ನಡುವೆ ರೆಡ್ ಕ್ರಾಸ್ ಬಸ್ ನಲ್ಲಿ ಕರೆದೊಯ್ಯಲಾಯಿತು.
ಬಿಡುಗಡೆಯಾದ 13 ಇಸ್ರೇಲಿಗಳಲ್ಲಿ ಆರು ಮಹಿಳೆಯರು, ಏಳು ಮಕ್ಕಳು ಮತ್ತು ಹದಿಹರೆಯದವರು ಸೇರಿದ್ದಾರೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಮೂಲಗಳು ತಿಳಿಸಿದೆ. ಇವರು ಇಸ್ರೇಲ್‌ನ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದು, ಬಳಿಕ ಅವರ ಕುಟುಂಬಗಳೊಂದಿಗೆ ಸೇರಿಕೊಳ್ಳುತ್ತಾರೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ತಿಳಿಸಿದೆ.
ರಾಜತಾಂತ್ರಿಕ ಮಾತುಕತೆಗಳ ಫಲವಾಗಿ ಹಮಾಸ್ ಮತ್ತು ಇಸ್ರೇಲ್ ಒಪ್ಪಿಕೊಂಡಿರುವ ನಾಲ್ಕು ದಿನಗಳ ಕದನ ವಿರಾಮ ಮುಂದುವರೆದಿದೆ. ಹಮಾಸ್ ಉಗ್ರರು ಅ.7 ರಂದು ದಕ್ಷಿಣ ಇಸ್ರೇಲ್‌ನಲ್ಲಿ 1,200 ಜನರ ಹತ್ಯೆ ಮಾಡಿ 240 ಮಂದಿಯನ್ನು ಒತ್ತೆಯಾಳುಗಳನ್ನಾಗಿಸಿದ ನಂತರ ಇಸ್ರೇಲ್ ಯುದ್ಧ ಘೋಷಿಸಿತ್ತು. ಇಲ್ಲಿ ತನಕ 14,800 ಜನ, ಮೃತಪಟ್ಟಿದ್ದಾರೆ.