More

    ‘ವಿದೇಶಕ್ಕೇ ಹೋಗಿ ಮದುವೆಯಾಗಬೇಕಾ’? ಮನ್ ಕಿ ಬಾತ್‌ನಲ್ಲಿ ‘ದೊಡ್ಡವರಿಗೆ’ ಪ್ರಧಾನಿ ಮೋದಿ ಪ್ರಶ್ನೆ

    ನವದೆಹಲಿ: ಕೆಲವು ದೊಡ್ಡ ಕುಟುಂಬಗಳು ವಿದೇಶದಲ್ಲಿ ಮದುವೆಗಳನ್ನು ನಡೆಸುವ ಪ್ರವೃತ್ತಿ ಬೆಳೆಸಿಕೊಂಡಿದ್ದು, ಇದರಿಂದ ಭಾರತಕ್ಕೆ ಪ್ರಯೋಜನವೇನೂ ಇಲ್ಲ. ದೇಶದ ಹಣ ಹೊರದೇಶಗಳಿಗೆ ಸೇರದಂತೆ ನಮ್ಮ ನೆಲದಲ್ಲಿಯೇ ಮದುವೆ ಮತ್ತಿತರ ಆಚರಣೆಗಳನ್ನು ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಜನರನ್ನು ಒತ್ತಾಯಿಸಿದ್ದಾರೆ.

    ಇದನ್ನೂ ಓದಿ: ಲಾಂಚ್​ಗೂ ಮುನ್ನವೇ ರೋಲ್​ ರಾಯ್ಸ್​ ಸ್ಪೆಕ್ಟರ್​ ಕಾರು ಖರೀದಿಸಿದ ಬಿಲ್ಡರ್; ಈ ಕಾರಣಕ್ಕೆ ಸ್ವ್ಯಾಗ್​ ಎಂದ ನೆಟ್ಟಿಗರು

    ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಿದೇಶಕ್ಕೆ ಹೋಗಿ ಮದುವೆಯಾಗುವ ಟ್ರೆಂಡ್‌ ಬಗ್ಗೆ ಈ ಬಾರಿಯ ಮನ್‌ ಕಿ ಬಾತ್‌ನಲ್ಲಿ ಪ್ರಸ್ತಾಪಿಸಿದ ಮೋದಿ ಅವರು, ಕೆಲವು ಕುಟುಂಬಗಳು ವಿದೇಶಕ್ಕೆ ಹೋಗಿ ಮದುವೆಯಾಗುವ ಹೊಸ ವಾತಾವರಣ ಸೃಷ್ಟಿಸುತ್ತಿದ್ದಾರೆ. ಇದು ಅಗತ್ಯವೇ? ನಮ್ಮ ನೆಲದಲ್ಲಿ, ನಮ್ಮ ಜನರ ಮಧ್ಯೆ ಮದುವೆಗಳನ್ನು ಆಚರಿಸಿದರೆ ದೇಶದ ಹಣವು ದೇಶದಲ್ಲಿ ಉಳಿಯುತ್ತದೆ. ನಮ್ಮ ಜನರ ಆಶೀರ್ವಾದವೂ ಸಿಗುತ್ತದೆ ಎಂದರು.

    ವೋಕಲ್ ಫಾರ್ ಲೋಕಲ್ ಮಿಷನ್ ಅಭಿಯಾನವು ದೇಶದ ಆರ್ಥಿಕತೆ ಬಲಪಡಿಸುತ್ತದೆ. ಇದನ್ನು ವಿಸ್ತರಿಸಬಹುದೇ? ನಮ್ಮದೇ ದೇಶದಲ್ಲಿ ಇಂತಹ ಸಮಾರಂಭಗಳನ್ನು ಏಕೆ ನಡೆಸಬಾರದು? ನೀವು ಬಯಸುವ ವ್ಯವಸ್ಥೆ ಸದ್ಯಕ್ಕೆ ಇಲ್ಲದಿರಬಹುದು. ಆದರೆ ಇಲ್ಲೇ ಅಂತಹ ಕಾರ್ಯಕ್ರಮಗಳನ್ನು ಆಯೋಜಿಸಿದರೆ ವ್ಯವಸ್ಥೆಯೂ ಅಭಿವೃದ್ಧಿಗೊಳ್ಳುತ್ತದೆ. ಇದು ಬಹಳ ದೊಡ್ಡ ಕುಟುಂಬಗಳಿಗೆ ಸಂಬಂಧಿಸಿದ ವಿಷಯವಾಗಿದೆ. ನನ್ನ ನೋವು ಖಂಡಿತವಾಗಿಯೂ ಆ ದೊಡ್ಡವರಿಗೆ ತಲುಪುತ್ತದೆ ಎಂದು ಭಾವಿಸುತ್ತೇನೆ ಎಂದರು.

    ಇನ್ನು ಮದುವೆಗಳಿಗೆ ಶಾಪಿಂಗ್ ಮಾಡುವಾಗ ಸ್ವದೇಶಿ ಉತ್ಪನ್ನಗಳಿಗೆ ಪ್ರಾಮುಖ್ಯತೆ ನೀಡಬೇಕು. ಈಗ ಮದುವೆ ಸೀಸನ್​ಗಳು ಪ್ರಾರಂಭವಾಗಿದ್ದು, 5 ಲಕ್ಷ ಕೋಟಿ ರೂ. ವ್ಯಾಪಾರ ನಡೆಯಲಿದೆ ಎಂದು ಕೆಲವು ವ್ಯಾಪಾರ ಸಂಸ್ಥೆಗಳು ಅಂದಾಜಿಸುತ್ತವೆ. ಕಳೆದ ತಿಂಗಳು ‘ಮನ್ ಕಿ ಬಾತ್’ ನಲ್ಲಿ ನಾನು ಸ್ಥಳೀಯ ಉತ್ಪನ್ನಗಳ ಖರೀದಿಗೆ ಒತ್ತು ನೀಡಿದ್ದೆ. ಹಬ್ಬದ ಸೀಸನ್​ ಇದಾಗಿದ್ದರಿಂದ 4 ಲಕ್ಷ ಕೋಟಿ ರೂ.ಗೂ ಹೆಚ್ಚು ವ್ಯಾಪಾರ ಮಾಡಲಾಗಿದೆ ಎಂದು ಅವರು ಹೇಳಿದರು.

    ಮೇಡ್ ಇನ್ ಇಂಡಿಯಾ ಬಗ್ಗೆ ಮಾತನಾಡಿದ ಪ್ರಧಾನಿ, ಈಗ ಮನೆಯ ಮಕ್ಕಳು ಕೂಡ ಅಂಗಡಿಯಲ್ಲಿ ಏನನ್ನಾದರೂ ಖರೀದಿಸುವಾಗ ಅದರ ಮೇಲೆ ಮೇಡ್ ಇನ್ ಇಂಡಿಯಾ ಎಂದು ಇದೆಯೇ ಎಂದು ಪರಿಶೀಲಿಸಲು ಪ್ರಾರಂಭಿಸಿದ್ದಾರೆ ಎಂದರು.

    ರಾಷ್ಟ್ರ ನಿರ್ಮಾಣದ ಜವಾಬ್ದಾರಿಯನ್ನು ಜನರು ವಹಿಸಿಕೊಂಡಾಗ ವಿಶ್ವದ ಯಾವುದೇ ಶಕ್ತಿಯು ದೇಶದ ಮುನ್ನಡೆ ತಡೆಯಲು ಸಾಧ್ಯವಿಲ್ಲ. ದೇಶದ 140 ಕೋಟಿ ಜನರ ನೇತೃತ್ವದಲ್ಲಿ ಅನೇಕ ಪರಿವರ್ತನೆಗಳು ನಡೆಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಅವರು ಹೇಳಿದರು.

    ‘ಸ್ವಚ್ಛ ಭಾರತ ಅಭಿಯಾನ’ದ ಯಶಸ್ಸಿಗೆ ಸ್ಪೂರ್ತಿಯಾಗುತ್ತಿರುವಂತೆಯೇ, ‘ಲೋಕಲ್ ಫಾರ್ ವೋಕಲ್’ ಯಶಸ್ಸು ‘ಅಭಿವೃದ್ಧಿ ಹೊಂದಿದ ಭಾರತ – ಸಮೃದ್ಧ ಭಾರತ’ಕ್ಕೆ ಬಾಗಿಲು ತೆರೆಯುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

    ಪ್ರಧಾನಿ ಭದ್ರತಾ ಲೋಪ: ಕರ್ತವ್ಯಲೋಪ ಆರೋಪದಡಿ ಎಸ್ಪಿ ಗುರ್ಬಿಂದರ್ ಸಿಂಗ್ ಅಮಾನತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts