More

  ಉತ್ತರಕಾಶಿ ಸುರಂಗ ರಕ್ಷಣಾ ಕಾರ್ಯಾಚರಣೆ: ಅಮೆರಿಕಾ ಆಗರ್​ ಯಂತ್ರ ಮುರಿದ ಬಳಿಕ ಭಾರತೀಯ ಸೇನೆ ಎಂಟ್ರಿ…

  ವಾರಣಾಸಿ: ಉತ್ತರ ಕಾಶಿಯ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಹೊರತರುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅಮೆರಿಕದ ದೈತ್ಯ ಆಗರ್​ ಯಂತ್ರ ಕಬ್ಬಿಣದ ಸರಳುಗಳಿಗೆ ಸಿಲುಕಿ ಮುರಿದ ನಂತರ ಯಂತ್ರಗಳಬಳಕೆ ನಿಲ್ಲಿಸಿದ್ದು, ಇದೀಗ ರಕ್ಷಣಾ ತಂಡವನ್ನು ಭಾರತೀಯ ಸೇನೆ ಸೇರಿಕೊಂಡಿದೆ. ಸೇನಾ ಸಿಬ್ಬಂದಿ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಕಾರ್ಮಿಕರು ಕೈಯ್ಯಲ್ಲಿ ಡ್ರಿಲ್ಲಿಂಗ್​ ಯಂತ್ರಗಳನ್ನು ಹಿಡಿದು ಮಣ್ಣು, ಕಲ್ಲು ಅವಶೇಷಗಳನ್ನು ತೆರವುಗೊಳಿಸುತ್ತಿದೆ.

  ಇದನ್ನೂ ಓದಿ: ‘ವಿದೇಶಕ್ಕೇ ಹೋಗಿ ಮದುವೆಯಾಗಬೇಕಾ’? ಮನ್ ಕಿ ಬಾತ್‌ನಲ್ಲಿ ‘ದೊಡ್ಡವರಿಗೆ’ ಪ್ರಧಾನಿ ಮೋದಿ ಪ್ರಶ್ನೆ
  ರಸ್ತೆ ನಿರ್ಮಾಣ ಕಾಮಗಾರಿಯ ಭಾಗವಾದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಡಿಆರ್​ಡಿಒ ಸೇರಿದಂತೆ ಹಲವು ಏಜೆನ್ಸಿಗಳು ತೊಡಗಿಸಿಕೊಂಡಿದ್ದು, ಪ್ರಸ್ತುತ ಸುರಂಗಕ್ಕೆ ಲಂಬವಾಗಿ ಅಗೆತ ಮುಂದುವರಿಸಿದ್ದಾರೆ. ಭಾರತೀಯ ಸೇನೆಯ ಕಾರ್ಪ್ಸ್ ಆಫ್ ಇಂಜಿನಿಯರ್ಸ್‌ನ ಇಂಜಿನಿಯರ್ ಗುಂಪಿನ ಮದ್ರಾಸ್ ಸ್ಯಾಪರ್ಸ್‌ನ ಘಟಕವು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಭಾನುವಾರ ಸ್ಥಳಕ್ಕೆ ಆಗಮಿಸಿದೆ.

  ಇನ್ನು ಕಾರ್ಮಿಕರನ್ನು ಹೊರತರಲು ಉಕ್ಕಿನ ಪೈಪ್ ಅಳವಡಿಸುತ್ತಿದ್ದು, ಶೇ.90ರಷ್ಟು ಪೂರ್ಣಗೊಂಡಿದೆ. ಇನ್ನು ಕೇವಲ 10 ಪ್ರತಿಶತದಷ್ಟು ಸುರಂಗ ಕೊರೆಯುವ ಕಾಮಗಾರಿ ಬಾಕಿ ಇದ್ದು, ಈಗಾಗಲೇ ರಸ್ತೆ ಕಾಮಗಾರಿ ಮಾಡಿ ರಾಶಿ ಹಾಕಿರುವ ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ. ಇನ್ನು ಕೇವಲ 10-12 ಮೀಟರ್ ಕೊರೆಯುವ ಕೆಲಸ ಬಾಕಿಯಿರುವುದಾಗಿ ತಜ್ಞರು ಪತ್ತೆಹಚ್ಚಿದ್ದಾರೆ. ಹೀಗಾಗಿ ಕೆಲವೇ ಗಂಟೆಗಳಲ್ಲಿ ಸಿಕ್ಕಿಬಿದ್ದಿರುವ ಕಾರ್ಮಿರು ಹೊರತರುವ ಕೆಲಸವಾಗಲಿದೆ ಎಂದು ಉಸ್ತುವಾರಿ ವಹಿಸಿಕೊಂಡಿರುವ ಅಧಿಕಾರಿಗಳು ತಿಳಿಸಿದ್ದಾರೆ.

  ಕಾರ್ಯಾಚರಣೆ ನಡೆಸುತ್ತಿದ್ದ ಅಮೆರಿಕಾದ ಭಾರಿ ಡ್ರಿಲ್ಲಿಂಗ್​ ಯಂತ್ರದ ಬ್ಲೇಡ್‌ಗಳು ಅವಶೇಷಗಳಲ್ಲಿ ಸಿಲುಕಿಕೊಂಡಿವೆ. ಈಗ ಅವೆಲ್ಲವನ್ನೂ ಹೊರತೆಗೆಯಲಾಗುತ್ತಿದೆ. ಕಾರ್ಮಿಕರನ್ನು ತಲುಪಲು ಕೊನೆಯ 10-15 ಮೀಟರ್‌ ಮಾತ್ರ ಬಾಕಿ ಇರುವುದರಿಂದ ಸುರಕ್ಷತಾ ದೃಷ್ಟಿಯಿಂದ ಕೈಯಲ್ಲಿ ಹಿಡಿಯುವ ಡ್ರಿಲ್ಲಿಂಗ್​ ಮತ್ತಿತರ ಉಪಕರಣಗಳಿಂದ ಸುರಂಗ ಒಡೆಯಬೇಕಾಗುತ್ತದೆ. ಕೆಲಸಗಾರರ ಜತೆ ಸೇನಾ ಸಿಬ್ಬಂದಿ ಸೇರಿಕೊಂಡಿರುವುದರಿಂದ ಕೊರೆಯುವಿಕೆ ಮತ್ತು ಅವಶೇಷಗಳನ್ನು ಹೊರತೆಗೆಯುವ ಚುರುಕುಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  360 ಗಂಟೆಗಳಿಗೂ ಹೆಚ್ಚು ಕಾಲ ಸಿಕ್ಕಿಬಿದ್ದಿರುವ 41 ಕಾರ್ಮಿಕರಿಗೆ ಬೆಳಕು, ಆಮ್ಲಜನಕ, ಆಹಾರ, ನೀರು ಮತ್ತು ಔಷಧಿಗಳನ್ನು ಒದಗಿಸಲಾಗುತ್ತಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

  ನಲವತ್ತೊಂದು ಆಂಬ್ಯುಲೆನ್ಸ್‌ಗಳು ಸುರಂಗದ ಪ್ರವೇಶದ್ವಾರದಲ್ಲಿ ಸ್ಟ್ಯಾಂಡ್‌ಬೈನಲ್ಲಿ ಉಳಿದಿವೆ, ಕೆಲಸಗಾರರನ್ನು ಚಿನ್ಯಾಲಿಸೌರ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಲು ಸಿದ್ಧವಾಗಿವೆ. 41 ಆಮ್ಲಜನಕ-ಸಜ್ಜಿತ ಹಾಸಿಗೆಗಳೊಂದಿಗೆ ಗೊತ್ತುಪಡಿಸಿದ ವಾರ್ಡ್ ಅನ್ನು ಸಹ ಸ್ಥಾಪಿಸಲಾಗಿದೆ, ಪ್ರತಿ ಕಾರ್ಮಿಕರಿಗೆ ತ್ವರಿತ ವೈದ್ಯಕೀಯ ಆರೈಕೆಯನ್ನು ಒದಗಿಸಲು ಸಿದ್ಧಪಡಿಸಲಾಗಿದೆ.

  ಉತ್ತರಕಾಶಿಯಿಂದ ಸುಮಾರು 30 ಕಿಮೀ ಮತ್ತು ಡೆಹ್ರಾಡೂನ್‌ನಿಂದ ಏಳು ಗಂಟೆಗಳ ಪ್ರಯಾಣದ ದೂರದಲ್ಲಿರುವ ಸಿಲ್ಕ್ಯಾರಾ ಸುರಂಗವು ಕೇಂದ್ರ ಸರ್ಕಾರದ ಚಾರ್ ಧಾಮ್ ಸರ್ವಋತು ರಸ್ತೆ ಯೋಜನೆಯ ಭಾಗವಾಗಿದೆ.

  ಬೌನ್ಸರ್​ ಎದುರಿಸುತ್ತೇನೆ, ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತೇನೆ: ತೆಲಂಗಾಣ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸದಲ್ಲಿ ಮೊಹಮ್ಮದ್ ಅಜರುದ್ದೀನ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts