More

    ಬೌನ್ಸರ್​ ಎದುರಿಸುತ್ತೇನೆ, ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತೇನೆ: ತೆಲಂಗಾಣ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸದಲ್ಲಿ ಮೊಹಮ್ಮದ್ ಅಜರುದ್ದೀನ್​

    ನವದೆಹಲಿ: ಅಸಾದುದ್ದೀನ್ ಓವೈಸಿ ನೇತೃತ್ವದ ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನನ್ನ ಹೋಮ್​ ಟರ್ಫ್​ನಲ್ಲಿ ನನ್ನ ಮೇಲೆ ಬೌನ್ಸರ್‌ಗಳನ್ನು ಬೌಲ್ ಮಾಡಲು ಸಾಧ್ಯವಾಗುವುದಿಲ್ಲ. ಬೌನ್ಸರ್‌ಗಳನ್ನು ಬೌಲಿಂಗ್ ಮಾಡಲು ಎಐಎಂಐಎಂ ಸಮರ್ಥವಾಗಿಲ್ಲ. ಅವರು ಕ್ರಿಕೆಟಿಗರಾಗಲು ಸಾಧ್ಯವಿಲ್ಲ; ನಾನು ಕ್ರಿಕೆಟಿಗ ಮತ್ತು ರಾಜಕಾರಣಿ, ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್​ ಮತಗಳನ್ನು ಕಡಿತಗೊಳಿಸಲು ಬಿಜೆಪಿ ಮತ್ತು ಬಿಆರ್‌ಎಸ್‌ನ ಬಿ-ಟೀಮ್‌ನ ಪಾತ್ರವನ್ನು ಎಐಎಂಐಎಂ ನಿರ್ವಹಿಸುತ್ತಿದೆ. ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ನನಗೆ ಗೆಲುವು ಖಚಿತ.

    ಕ್ರಿಕೆಟ್​ನಲ್ಲಿ ತಮ್ಮ ಸ್ಟೈಲಿಶ್ ಫ್ಲಿಕ್‌ಗಳು ಮತ್ತು ಮೈದಾನದಲ್ಲಿ ತೀಕ್ಷ್ಣ ಕ್ಯಾಚಿಂಗ್‌ಗೆ ಹೆಸರುವಾಸಿಯಾಗಿದ್ದ ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಹೀಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
    ಜುಬಿಲಿ ಹಿಲ್ಸ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಪ್ರವೇಶಿಸಿರುವ ಅಜರ್, ಈ ಹೊಸ ಪಿಚ್‌ನಲ್ಲಿ ಗೆಲ್ಲಲು ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಸರಿಯಾಗಿ ಫೀಲ್ಡಿಂಗ್ ಮಾಡುವುದಾಗಿಯೂ ಹೇಳಿದ್ದಾರೆ.

    ಮೂರು ಬ್ಯಾಕ್-ಟು-ಬ್ಯಾಕ್ ಶತಕಗಳೊಂದಿಗೆ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಸ್ಫೋಟಕವಾಗಿಯೇ ಅಜರ್ ಆರಂಭಿಸಿದ್ದರು. ಅದರಂತೆಯೇ ಅವರು 2009ರಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್ ಲೋಕಸಭೆ ಕ್ಷೇತ್ರದಿಂದ ಗೆಲುವಿನೊಂದಿಗೆ ತಮ್ಮ ರಾಜಕೀಯ ಇನ್ನಿಂಗ್ಸ್ ಪ್ರಾರಂಭಿಸಿದ್ದರು.

    2014ರ ಲೋಕಸಭೆ ಚುನಾವಣೆಯಲ್ಲಿ ರಾಜಸ್ಥಾನದ ಟೊಂಕ್-ಸವಾಯಿ ಮಾಧೋಪುರ್‌ ಕ್ಷೇತ್ರದಲ್ಲಿ ಸೋಲನಭುವಿಸಿದರು. ಈಗ ತಾಳ್ಮೆಯಿಂದ ಕಾದ ನಂತರ, ಅವರು ಈಗ ಮೊದಲ ಬಾರಿಗೆ ರಾಜ್ಯ ಚುನಾವಣೆ ಕಣಕ್ಕೆ ಪ್ರವೇಶಿಸಿದ್ದಾರೆ, ಸಿಕಂದರಾಬಾದ್ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಜುಬಿಲಿ ಹಿಲ್ಸ್ ಕ್ಷೇತ್ರವನ್ನು ಆಡಳಿತ ಪಕ್ಷ ಭಾರತ್ ರಾಷ್ಟ್ರ ಸಮಿತಿ (BRS)ಯಿಂದ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದಾರೆ.

    ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅಜರ್, ತಮ್ಮ ಅಭಿಯಾನವು ಚೆನ್ನಾಗಿ ಸಾಗುತ್ತಿದ್ದು, ಜನರಿಂದ ಉತ್ತಮ ಪ್ರತಿಕ್ರಿ ವ್ಯಕ್ತವಾಗಿದ ಎಂದು ಹೇಳಿದ್ದಾರೆ. ತಾವು ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಒಳಚರಂಡಿ ಸಮಸ್ಯೆಗಳು, ನೀರು ಸರಬರಾಜು ಮತ್ತು ಬೆಳೆಯುತ್ತಿರುವ “ರೌಡಿಸಂ” ನಿಭಾಯಿಸಬೇಕಾದ ಪ್ರಮುಖ ಸಮಸ್ಯೆಗಳಾಗಿವೆ. ಈ ವಿಷಯಗಳ ಮೇಲೆ ಗಮನ ನೀಡುತ್ತೇನೆ ಎಂದಿದ್ದಾರೆ.

    ಲಕ್ಷಕ್ಕೂ ಅಧಿಕ ಮುಸ್ಲಿಂ ಮತದಾರರು:

    ಆಡಳಿತಾರೂಢ ಬಿಆರ್‌ಎಸ್‌ನ ಹಾಲಿ ಶಾಸಕ ಮಾಗಂಟಿ ಗೋಪಿನಾಥ್‌ ಅವರನ್ನು ಎದುರಿಸುವ ಕಠಿಣ ಸವಾಲನ್ನು ಹೊಂದಿರುವ ಅಜರ್ ಅವರು, ಎಐಎಂಐಎಂ ಅಭ್ಯರ್ಥಿಯಿಂದಲೂ ತೀವ್ರ ಪ್ರತಿರೋಧ ಎದುರಿಸುತ್ತಿದ್ದಾರೆ. ಹೀಗಾಗಿ ಇಲ್ಲಿ ತ್ರಿಕೋನ ಸ್ಪರ್ಧೆಯಲ್ಲಿ ಏರ್ಪಟ್ಟಿದೆ. ಸಿಕಂದರಾಬಾದ್ ಲೋಕಸಭೆ ಭಾಗದಲ್ಲಿ ಬರುವ ಜುಬಿಲಿ ಹಿಲ್ಸ್ ಕ್ಷೇತ್ರವು ಒಂದು ಲಕ್ಷಕ್ಕೂ ಹೆಚ್ಚು ಮುಸ್ಲಿಂ ಮತದಾರರನ್ನು ಹೊಂದಿದೆ.
    ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಅಜರ್ ಮೇಲೆ ವಾಗ್ದಾಳಿ ನಡೆಸುತ್ತಿದ್ದು, ಅವರೊಬ್ಬ ವಿಫಲ ರಾಜಕಾರಣಿ ಎಂದು ಟೀಕಿಸಿದ್ದಾರೆ.

    ಎಐಎಂಐಎಂ ತನ್ನ ಅಭ್ಯರ್ಥಿಯನ್ನು ಜುಬಿಲಿ ಹಿಲ್ಸ್‌ನಿಂದ ಕಣಕ್ಕಿಳಿಸುವ ಕುರಿತು ಕೇಳಲಾದ ಪ್ರಶ್ನೆಗೆ, ಅಜರ್ , “ಅವರು ಇಷ್ಟು ವರ್ಷಗಳಿಂದ ಮಾಡುತ್ತಿರುವುದನ್ನೇ ಮಾಡುತ್ತಿದ್ದಾರೆ. ಇದರಲ್ಲಿ ಹೊಸದೇನೂ ಇಲ್ಲ. ಅವರ ಏಕೈಕ ಕೆಲಸವೆಂದರೆ ಮತಗಳನ್ನು ಕಡಿತಗೊಳಿಸುವುದು. ಇದರಲ್ಲಿ ಅವರು ಸಂತೋಷ, ತೃಪ್ತಿ ಪಡೆಯುತ್ತಾರೆ ಎಂದಿದ್ದಾರೆ. ಬಿಜೆಪಿ ಮತ್ತು ಬಿಆರ್‌ಎಸ್‌ನ ಬಿ-ಟೀಮ್‌ನ ಪಾತ್ರವನ್ನು ಎಐಎಂಐಎಂ ನಿರ್ವಹಿಸುತ್ತಿದೆ ಎಂಬ ಕಾಂಗ್ರೆಸ್‌ನ ವಾದಕ್ಕೆ “ಖಂಡಿತವಾಗಿ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

    ತೆಲಂಗಾಣದ 119 ವಿಧಾನಸಭೆ ಸ್ಥಾನಗಳಿಗೆ ನವೆಂಬರ್ 30ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ.

    ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಧಾವಿಸಿದ ಸೇನೆ/ ಕ್ರಿಸ್‌ಮಸ್ ವೇಳೆಗೆ ಶುಭಸುದ್ದಿ ನಿರೀಕ್ಷೆ

    ಪೊಲೀಸರಿಂದ ಕಿರುಕುಳಕ್ಕೊಳಗಾಗುವ ಬಿಜೆಪಿ ಕಾರ್ಯಕರ್ತರಿಗೆ ಕಾನೂನು ನೆರವು; ಪ್ರತಿ ಜಿಲ್ಲೆಯಲ್ಲಿ ಕಂಟ್ರೋಲ್​ ರೂಂ ತೆರೆಯುವುದಾಗಿ ವಿಜಯೇಂದ್ರ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts