ವಿದೇಶಗಳಲ್ಲಿ ಕರೊನಾ ಕನ್ನಡಿಗರ ವರದಿ: ಇಂಗ್ಲೆಂಡ್​ನಲ್ಲಿ ಮಿತಿಮೀರಿದ ರೋಗಿಗಳು

Kannadiga
Published on

ಕರೊನಾದಿಂದಾಗಿ ಇಂಗ್ಲೆಂಡ್ ಪರಿಸ್ಥಿತಿ ಕಳೆದ ಮೂರು ವಾರಗಳಲ್ಲಿ ಭಯಾನಕವಾಗಿದೆ. ಇಲ್ಲಿನ ಆಸ್ಪತ್ರೆಗಳಿಗೆ ಮಿತಿಮೀರಿ ರೋಗಿಗಳು ದಾಖಲಾಗುತ್ತಿದ್ದಾರೆ.

ಮುಂದುವರಿದ ದೇಶಗಳಾದ ಇಂಗ್ಲೆಂಡ್, ಯೂರೋಪ್ ಹಾಗೂ ಅಮೆರಿಕದಲ್ಲೇ ಕರೊನಾ ಹೆಚ್ಚಾಗಿದೆ. ಇದಕ್ಕೆ ಕಾರಣ ಇಲ್ಲಿಯವರ ಅಹಂಕಾರ ಹಾಗೂ ನಿರ್ಲಕ್ಷ್ಯ ಭಾವ ಎಂದರೂ ತಪ್ಪಿಲ್ಲ. ಫೆಬ್ರವರಿ ಕೊನೇ ವಾರದಲ್ಲಿ ನಾನು ಇಂಗ್ಲೆಂಡ್​ಗೆ ಬಂದಾಗ ಇಲ್ಲಿನ ವಿಮಾನ ನಿಲ್ದಾಣಗಳಲ್ಲಿ ಎಲ್ಲೂ ಸ್ಕ್ರೀನಿಂಗ್ ಅಥವಾ ಕರೊನಾ ಪತ್ತೆ ಹಚ್ಚುವ ಕೆಲಸ ಮಾಡಲಿಲ್ಲ. ಸರ್ಕಾರ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಎಲ್ಲೆಡೆ ಇದು ಆವರಿಸಿ ಮೂರನೇ ಹಂತಕ್ಕೆ ತಲುಪಿತು. ಈಗ ಎಲ್ಲರೂ ಪರಿತಪಿಸುವಂತಾಗಿದೆ.

ಭಾರತದಲ್ಲಿ ಈ ರೀತಿ ಹಬ್ಬಿದರೆ ನಿಯಂತ್ರಣ ತುಂಬಾಕಷ್ಟ. ಹೀಗಾಗಿ ಎಲ್ಲರೂ ಲಾಕ್​ಡೌನ್ ಅನುಸರಿಸುವ ಮೂಲಕ ಕರೊನಾ ಹಬ್ಬುವ ಸರಪಳಿಯನ್ನು ನಿಯಂತ್ರಿಸಬೇಕು ಎಂಬುದೇ ನನ್ನ ಮಹದಾಸೆ.

| ಡಾ. ದಾನಯ್ಯ ಮಠಪತಿ ಇಂಗ್ಲೆಂಡ್​ನಿಂದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net