ಸೋಂಕು ಹರಡುವಿಕೆ ಕೇಂದ್ರ ಬಿಂದುಗಳಲ್ಲಿ ಸಾಮೂಹಿಕ ರಕ್ತಪರೀಕ್ಷೆ ನಡೆಸಿ: ಐಸಿಎಂಆರ್​ ಸಲಹೆ

icmr covid
Published on

ನವದೆಹಲಿ: ಸೋಂಕು ಹರಡುವಿಕೆಯ ಕೇಂದ್ರಬಿಂದುಗಳು ಎಂದು ಗುರುತಿಸಿರುವ ಪ್ರದೇಶದ ವ್ಯಾಪ್ತಿಯಲ್ಲಿ ಪ್ರತಿಯೊಬ್ಬರ ರಕ್ತಪರೀಕ್ಷೆ (ಆ್ಯಂಟಿಬಾಡಿ ಟೆಸ್ಟ್ಸ್​) ಮಾಡಿದರೆ ಸಾಮುದಾಯಿಕ ಹಬ್ಬುವಿಕೆಯನ್ನು ತಡೆಗಟ್ಟಲು ಅನುಕೂಲವಾಗುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ಸರ್ಕಾರಕ್ಕೆ ಸಲಹೆ ನೀಡಿದೆ.

ಹೀಗೆ ಮಾಡುವುದರಿಂದ, ಕರೊನಾ ವೈರಸ್​ ಸೋಂಕು ತಗುಲಿದ್ದು, ಆರಂಭಿಕ ಹಂತದಲ್ಲಿದ್ದು, ಲಕ್ಷಣಗಳು ಗೋಚರಿಸದೇ ಇರುವವರಿಗೆ ತಕ್ಷಣವೇ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ಐಸಿಎಂಆರ್​ ಅಭಿಪ್ರಾಯಪಟ್ಟಿದೆ.

ಸದ್ಯ ಕೋವಿಡ್​ 19 ಸೋಂಕು ಪತ್ತೆಗೆ ಪಾಲಿಮರೇಸ್​ ಚೈನ್​ ರಿಯಾಕ್ಷನ್​ (ಪಿಸಿಆರ್​) ಪರೀಕ್ಷೆ ಮಾಡಲಾಗುತ್ತದೆ. ಈ ಪರೀಕ್ಷೆಗೆ ಕನಿಷ್ಠ 4ರಿಂದ 5 ತಾಸು ಬೇಕಾಗುತ್ತದೆ. ಅದೇ ರಕ್ತಪರೀಕ್ಷೆ ಮಾಡಿದರೆ 15ರಿಂದ 30 ನಿಮಿಷಗಳಲ್ಲಿ ದೇಹದಲ್ಲಿ ರೋಗನಿರೋಧಕಗಳು ಕ್ಷೀಣಿಸುತ್ತಿರುವ ಬಗ್ಗೆ ತಿಳಿಯುತ್ತದೆ ಎಂದು ವಿವರಿಸಿದೆ.

ರಕ್ತಪರೀಕ್ಷೆಯಲ್ಲಿ ರೋಗನಿರೋಧಕಗಳು ಕ್ಷೀಣಿಸುತ್ತಿರುವ ಸುಳಿವು ಸಿಕ್ಕಲ್ಲಿ, ಆ ವ್ಯಕ್ತಿಯ ಗಂಟಲ ದ್ರವವನ್ನು ಪಾಲಿಮೆರೇಸ್​ ಚೈನ್​ ರಿಯಾಕ್ಷನ್​ (ಪಿಸಿಆರ್​) ಪರೀಕ್ಷೆ ಮಾಡಿ, ಸೋಂಕು ತಗುಲಿರುವುದನ್ನು ಖಚಿತಪಡಿಸಿಕೊಳ್ಳಬಹುದು. ತನ್ಮೂಲಕ ಅವರಿಗೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ ಎಂದು ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net