

ಬೆತುಲ್: ಪೂಜೆ ಮಾಡುತ್ತಿರುವಾಗಲೇ ಹೃದಯಾಘಾತಕ್ಕೀಡಾಗಿ ಮಧ್ಯಪ್ರದೇಶದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ನಾಯಕ ವಿನೋದ್ ದಗಾ ಮೃತಪಟ್ಟಿದ್ದಾರೆ. ನವೆಂಬರ್ 12ರಂದು ಘಟನೆ ನಡೆದಿದ್ದು, ಹೃದಯಾಘಾತದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ದಗಾ ಅವರನ್ನು ಇತ್ತೀಚೆಗಷ್ಟೇ ಮೆಘಾನ್ ಉಪಚುನಾವಣೆಯ ಉಸ್ತುವಾರಿಯನ್ನಾಗಿ ಕಾಂಗ್ರೆಸ್ ನೇಮಿಸಿತ್ತು. ಘಟನೆ ನಡೆದ ಹಿಂದಿನ ದಿನ ದಗಾ ಅವರು ಭೋಪಾಲ್ನಲ್ಲಿ ಸಭೆ ಮುಗಿಸಿಕೊಂಡು ಬೆತುಲ್ಗೆ ಮರಳಿದ್ದರು.
ರಾಜ್ಯ ಕಾಂಗ್ರೆಸ್ನಲ್ಲಿ ದಗಾ ಅವರು ಅನೇಕ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ಇವರು ಕೇಂದ್ರ ಸಹಕಾರ ಬ್ಯಾಂಕ್ನ ಅಧ್ಯಕ್ಷರು ಆಗಿದ್ದರು. ಸದಾ ಇನ್ನಬ್ಬರೊಂದಿಗೆ ಬೆರೆಯುವ, ಸರಳ ಮತ್ತು ಹರ್ಷಚಿತ್ತದ ನಾಯಕನಾಗಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದರು. ಇಂತಹ ನಾಯಕನ ಸಾವು ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಕಾಂಗ್ರೆಸ್ ನಾಯಕರು ಸಂತಾಪ ಸೂಚಿಸಿದ್ದಾರೆ. (ಏಜೆನ್ಸೀಸ್)