More

    ಜಾಹೀರಾತು ನೋಡಿ ಕಾಲ್​ಗರ್ಲ್​ಗೆ ಕರೆ ಮಾಡಿದ: ಮನೆಗೆ ಬಂದ ಯುವತಿಯಿಂದ ಕಾದಿತ್ತು ಶಾಕ್!​​

    ಬೆಂಗಳೂರು: ಖಾಸಗಿ ಕಂಪನಿ ಉದ್ಯೋಗಿಯೊಬ್ಬ ವೆಬ್​ಸೈಟ್ ಜಾಹೀರಾತು ನೋಡಿ ವೇಶ್ಯೆಯನ್ನು ಮನೆಗೆ ಕರೆಸಿ 97 ಸಾವಿರ ರೂ. ಕಳೆದುಕೊಂಡಿದ್ದಾನೆ.

    ವೈಟ್​ಫೀಲ್ಡ್​ನ ನಿವಾಸಿ ಹಣ ಕಳೆದುಕೊಂಡವರು. ನ.13ರಂದು ವೆಬ್​ಸೈಟ್​ನಲ್ಲಿ ಕಾಲ್​ಗರ್ಲ್ ಎಂದಿದ್ದ ಮೊಬೈಲ್ ನಂಬರ್​ಗೆ ಕರೆ ಮಾಡಿ ವೇಶ್ಯೆಯನ್ನು ಮನೆಗೆ ಕರೆಸಿಕೊಂಡಿದ್ದ. ಮನೆಗೆ ಬಂದ ಮಹಿಳೆ 10 ಸಾವಿರ ರೂ. ಪಡೆದಿದ್ದಳು. ನಂತರ ತನ್ನನ್ನು ಎನ್​ಜಿಒ ಅಧಿಕಾರಿ ಎಂದು ಪರಿಚಯಿಸಿಕೊಂಡ ಆಕೆ, ತಾನು ಕೇಳಿದಷ್ಟು ಹಣ ಕೊಡದಿದ್ದರೆ ಅತ್ಯಾಚಾರ ಮಾಡಿದ್ದಾಗಿ ಪೊಲೀಸರಿಗೆ ದೂರು ಕೊಡುವುದಾಗಿ ಬ್ಲಾ್ಯಕ್​ವೆುೕಲ್ ಮಾಡಿದ್ದಳು.

    ಇದನ್ನೂ ಓದಿ: ಆರು ವರ್ಷದ ಬಾಲಕಿಯ ಭೀಕರ ಕೊಲೆ: ಅಂಗಾಂಗಗಳು ಕಾಣೆ- ನರಬಲಿ ಶಂಕೆ!

    ಯುವಕನೊಬ್ಬನಿಗೆ ಕರೆ ಮಾಡಿದ ಮಹಿಳೆ ಈತನಿಗೆ ಮೊಬೈಲ್ ಕೊಟ್ಟಿದ್ದಳು. ಆತ, ಈಗಲೇ 2 ಲಕ್ಷ ರೂ. ಹಾಕಬೇಕು. ಠಾಣೆ ಮೆಟ್ಟಿಲೇರಿದರೆ 5 ಲಕ್ಷ ರೂ. ಕೊಡಬೇಕಾಗುತ್ತದೆ ಎಂದು ಬೆದರಿಸಿದ್ದ. ನಂತರ ಮಹಿಳೆ ಮೊಬೈಲ್ ತೆಗೆದುಕೊಂಡು ಆನ್​ಲೈನ್ ಮೂಲಕ ತನ್ನ ಖಾತೆಗೆ ಹಂತಹಂತವಾಗಿ 87 ಸಾವಿರ ರೂ. ಹಾಕಿಸಿಕೊಂಡು ಪರಾರಿಯಾಗಿದ್ದಾಳೆ ಎಂದು ದಿನೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾನೆ. ವೈಟ್​ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ರಜೆ ಇಲ್ಲದೆ ಬಸವಳಿದ ಖಾಕಿ: ಪೊಲೀಸರ ತೀವ್ರ ಅಸಮಾಧಾನ, ಅಧಿಕಾರಿಗಳ ಸಮರ್ಥನೆ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts