ವಿಧಾನಸಭೆಯಲ್ಲಿ ಹಾಸ್ಯದ ಹೊಳೆ ಹರಿಸಿದ ಸಿದ್ದು ಬಟ್ಟೆ!

Siddaramaiah
Published on

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಇತ್ತೀಚಿಗೆ 90 ಜೊತೆ ಬಟ್ಟೆ ಖರೀದಿಸಿದ್ದರು. ಈ ಕುರಿತು ಇಂದು ವಿಧಾನಸಭೆ ಕಲಾಪದಲ್ಲಿ ಸ್ವಾರಸ್ಯಕರ ಚರ್ಚೆಯಾಗಿದೆ.

ಎಚ್​.ಡಿ.ರೇವಣ್ಣಗೆ ಅವರ ಮನೆಯವರೇ ಬಟ್ಟೆ ತಂದುಕೊಡುತ್ತಾರೆ. ಹಾಗಾಗಿ ಬಟ್ಟೆ ಅಂಗಡಿಗೆ ರೇವಣ್ಣ ಹೋಗಿಲ್ಲ ಎಂದ ಸಿದ್ದರಾಮಯ್ಯ, ನಾನು ಮೊನ್ನೆ ಬಟ್ಟೆ ತರಲು ಹೋಗಿದ್ದೆ. ಅದು ಸುದ್ದಿನೇ ಆಗಿಬಿಟ್ಟಿತು ಎಂದರು. ಆಗ ಎಲ್ಲರೂ ನಗೆಯುಕ್ಕಿತು. ಸ್ಪೀಕರ್​ ಕಾಗೇರಿ ಮಾತನಾಡಿ, ನೀವು ಬಹಳಷ್ಟು ಬಟ್ಟೆ ಕೊಂಡುಕೊಂಡಿದ್ದೀರಿ. ಅದೆಲ್ಲಾ ಯಾರಿಗೆ? ಎಂಬ ಪ್ರಶ್ನೆ ಎದ್ದಿದೆ ಎನ್ನುತ್ತಿದ್ದಂತೆ ಎಲ್ಲರೂ ತುಸು ನಕ್ಕರು.

ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದೆಲ್ಲವೂ ನನ್ನೊಬ್ಬನಿಗೆ ಎಂದರು. ಆಗ ಗೃಹ ಸಚಿವ ಬೊಮ್ಮಾಯಿ, ಒಮ್ಮೆಲೆ 90 ಸೆಟ್​ ತಂಗೊಡಿದ್ದೀರಂತೆ. ಅಷ್ಟೊಂದು ಬಟ್ಟೆಯ ಕಥೆ ಏನು? ಎಂದರು. ಇದನ್ನೂ ಓದಿರಿ ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

ಉತ್ತರಿಸಿದ ಸಿದ್ದರಾಮಯ್ಯ, ನಾನು ಧೋತಿ ತಂದಿದ್ದು ಅಲ್ಲಿ ಹೋಗಿ. ನಾನು ಸ್ವಲ್ಪ ದಪ್ಪ ಆದರೂ ಅದು ಹಾಕಲು ಬರುತ್ತೆ ಎಂದರು. ಮಧ್ಯಪ್ರೇಶಿಸಿದ ಡಿಸಿಎಂ ಕಾರಜೋಳ, ಮುದುಕರಾಗಿದ್ದಾರಲ್ಲ ಚೆಂದವಾಗಿ ಕಾಣಲು ಕಲರ್​ಫುಲ್​ ಬಟ್ಟೆ ತೆಗೆದುಕೊಳ್ಳುತ್ತಿದ್ದಾರೆ ಎಂದರು.

ಆಗ ರಮೇಶ್ ಕುಮಾರ್, ಬಟ್ಟೆಹಾಕುವ ಬಗ್ಗೆ ಓಕೆ ಆದರೆ ಬಟ್ಟೆ ಕಳಚುವ ವಿಚಾರ ಬೇಡ ಎನ್ನುತ್ತಿದ್ದಂತೆ 'ನಿಮಗೆ ಹೇಳುತ್ತಿರುವುದು ನೋಡಿ ಬೊಮ್ಮಾಯಿ ಅವರೇ' ಎಂದ ಸಿದ್ದರಾಮಯ್ಯ ಹೇಳಿದರು. ಬಟ್ಟೆ ಹಾಕಿಕೊಳ್ಳುವುದು ಮಾನ ಮುಚ್ಚಿಕೊಳ್ಳಲು. ಇತ್ತೀಚೆಗೆ ಬಟ್ಟೆ ತೆಗೆಯುವ ನಿದರ್ಶನವಾಗುತ್ತಿದೆ ಎಂದು ಹಾಸ್ಯಭರಿತವಾಗಿಯೇ ಪರೋಕ್ಷವಾಗಿ ಸಿಡಿ ಪ್ರಕರಣವನ್ನ ಸಿದ್ದರಾಮಯ್ಯ ಪ್ರಸ್ತಾಪಿಸಿದರು. ಇದನ್ನೂ ಓದಿರಿ ಕದ್ದ ಕಾರಿನಲ್ಲಿದ್ದ ವಸ್ತು ನೋಡಿ ಬೆಚ್ಚಿದ ಖದೀಮರು, ಕಾರಿನಲ್ಲೇ ಚಿನ್ನಾಭರಣ ಬಿಟ್ಟು ಎಸ್ಕೇಪ್​!

ಹೀಗೆ ಬಟ್ಟೆ ವಿಚಾರವಾಗಿ ಕಲಾಪದಲ್ಲಿ ಥರಾಹವೇರಿ ಚರ್ಚೆ ನಡೆಯಿತ್ತಾದರೂ ಸಿದ್ದರಾಮಯ್ಯ ಮಾತ್ರ ತಾವು ಬಟ್ಟೆ ಖರೀದಿಸಿದ ಆ ಅಂಗಡಿಯ ಗುಟ್ಟು ಬಿಟ್ಟುಕೊಡಲಿಲ್ಲ. ಆದರೆ ಅದರ ಮಾಹಿತಿ ಇಲ್ಲಿದೆ.

ಸಿದ್ದರಾಮಯ್ಯ ಅಲ್ಲೇ ಬಟ್ಟೆ ಕೊಳ್ಳೋದು ಯಾಕೆ?: ಇತ್ತೀಚಿಗೆ ಬಟ್ಟೆ ಅಂಗಡಿಗೆ ಹೋಗಿದ್ದ ಸಿದ್ದರಾಮಯ್ಯ ಸಾಕಷ್ಟು ದೋತಿ ಜತೆಗೆ ಜುಬ್ಬವನ್ನೂ ಖರೀದಿಸಿದ್ದರು. ಇಷ್ಟೆಲ್ಲಾ ಬಟ್ಟೆ ಕೊಂಡದ್ದು ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ. ಈ ಖಾದಿ ಕೇಂದ್ರಕ್ಕೂ ಸಿದ್ದರಾಮಯ್ಯಗೂ ಮೂರು ದಶಕಗಳ ಅವಿನಾಭಾವ ನಂಟಿದೆ.

ಬೆಂಗಳೂರಿನ ಕಾಟನ್ ಪೇಟೆಯಲ್ಲಿರುವ ಖಾದಿ ಬಟ್ಟೆ ಅಂಗಡಿಗೆ ಹೊಸ ಮಾಲು ಬರುತ್ತಿದ್ದಂತೆ ಸಿದ್ದರಾಮಯ್ಯಗೂ ಒಂದು ಫೋನ್ ಕರೆ ಹೋಗುತ್ತದೆ. ಇಲ್ಲದಿದ್ದರೆ, ಅಂಗಡಿ ಮಾಲೀಕರೇ ಸಿದ್ದರಾಮಯ್ಯರ ಮನೆಗೆ ಹೋಗಿ ಆಹ್ವಾನವಿತ್ತು ಬರ್ತಾರೆ. ಬಿಡುವಾದಾಗ ಅಲ್ಲಿಗೆ ತೆರಳುವ ಸಿದ್ದರಾಮಯ್ಯ ತಮ್ಮ ಮನಸಿಗೆ ಸಮಾಧಾನ ಆಗುವಷ್ಟು ಬಟ್ಟೆ ಖರೀದಿ ಮಾಡಿ ಬರ್ತಾರೆ. ವರ್ಷಕ್ಕೆ ಎರಡು ಬಾರಿ ಖುದ್ದು ಸಿದ್ದರಾಮಯ್ಯ ಅವರೇ ಹಾಜರ್​ ಆಗ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net