ಮರದಿಂದ ಕೆಳಗೆ ಬಿದ್ದು ಮಾಜಿ ಶಾಸಕ ಅಪ್ಪಚ್ಚು ರಂಜನ್ ಗನ್​ಮ್ಯಾನ್​ ದುರಂತ ಸಾವು

Gun Man Lokesh
Published on

ಕೊಡಗು: ಮರದಿಂದ ಕೆಳಗೆ ಬಿದ್ದು ಪೊಲೀಸ್​ ಸಿಬ್ಬಂದಿಯೊಬ್ಬರು ದುರಂತ ಸಾವಿಗೀಡಾಗಿರುವ ಘಟನೆ ಕುಶಾಲನಗರ ತಾಲೂಕಿನ ಕಾನ್​ಬೈಲ್​ ಗ್ರಾಮದಲ್ಲಿ ನಡೆದಿದೆ.

ಲೋಕೇಶ್ (40) ಮೃತ ದುರ್ದೈವಿ. ಮಾವಿನ ಮರ ಕಸಿಮಾಡಲು ಮರ ಏರಿದ್ದ ಸಮಯದಲ್ಲಿ ರಕ್ತದೊತ್ತಡ (ಬಿಪಿ) ಕಡಿಮೆಯಾಗಿ, ತಲೆ ತಿರುಗಿ ಮರದಿಂದ ಕಾಂಕ್ರೀಟ್ ರೋಡ್​ಗೆ ಬಿದ್ದ ಪರಿಣಾಮ ಲೋಕೇಶ್​ ಮೃತಪಟ್ಟಿದ್ದಾರೆ.

ಲೋಕೇಶ್​ ಅವರು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ 10 ವಷ೯ಗಳಿಂದ ಗನ್ ಮ್ಯಾನ್ ಆಗಿದ್ದರು. ಲೋಕೇಶ್ ನಿಧನಕ್ಕೆ ಅಪ್ಪಚ್ಚು ರಂಜನ್ ಕಂಬನಿ ಮಿಡಿದಿದ್ದಾರೆ.

ಮೃತದೇಹವನ್ನು ಮಡಿಕೇರಿ ಜಿಲ್ಲಾ ಸಕಾ೯ರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಅಪ್ಪಚ್ಚು ರಂಜನ್ ಹಾಗೂ ಮಾಜಿ ಸ್ಪೀಕರ್​ ಕೆ.ಜಿ ಬೋಪಯ್ಯ‌ ಅವರು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅಪ್ಪಚ್ಚು ರಂಜನ್​ ಅವರು ಕಣ್ಣೀರು ಹಾಕಿದರು.

ದುಃಖದಿಂದಲೇ ಮಾತನಾಡಿದ ಅಪ್ಪಚ್ಚು ರಂಜನ್​, ಎಲ್ಲ ಕೆಲಸದಲ್ಲೂ ಲೋಕೇಶ್​ ನನ್ನೊಂದಿಗೆ ಇರುತ್ತಿದ್ದ. ಪಕೃತಿ ವಿಕೋಪದ ಸಮಯದಲ್ಲೂ ಧೈರ್ಯದಿಂದ ಮುನ್ನುಗುತ್ತಿದ್ದ. ಸಣ್ಣ ವಯಸಿನಲ್ಲೇ ಹೀಗಾಗಿದ್ದು ಬಹಳ ನೋವು ತಂದಿದೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net