ಭಾರತದಲ್ಲಿ ನಿತ್ಯ 31 ಮಕ್ಕಳ ಆತ್ಮಹತ್ಯೆ!

death
ಸಾಂದರ್ಭಿಕ ಚಿತ್ರ
Published on

ನವದೆಹಲಿ: ಭಾರತದಲ್ಲಿ ಕಳೆದ ವರ್ಷ ಪ್ರತಿನಿತ್ಯ ಸರಾಸರಿ 31 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2019ರ ಡೇಟಾಕ್ಕೆ ಹೋಲಿಸಿದರೆ ಆತ್ಮಹತ್ಯೆ ಪ್ರಕರಣ ಶೇಕಡ 18, 2018ಕ್ಕೆ ಹೋಲಿಸಿದರೆ ಶೇಕಡ 21 ಏರಿಕೆಯಾಗಿದೆ.

ನ್ಯಾಷನಲ್​ ಕೆಮ್​ ರೆಕಾರ್ಡ್ಸ್​ ಬ್ಯೂರೊ (ಎನ್​ಸಿಆರ್​ಬಿ) ವರದಿ ತಿಳಿಸಿದೆ. 2020ರಲ್ಲಿ 11,396 ಮಕ್ಕಳು, 2019ರಲ್ಲಿ, 9,613 ಮಕ್ಕಳು, 2018ರಲಿ 9,413 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋವಿಡ್​&19 ಸಂಕಷ್ಟಮಯ ಸನ್ನಿವೇಶವು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಹೀಗಾಗಿಯೇ 2020ರಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿದೆ ಎಂಬುದು ಪರಿಣತರ ಅಭಿಮತ.

ಕುಟುಂಬ ಸಮಸ್ಯೆ ಕಾರಣ 4,006, ಪ್ರೇಮ ವೈಲ್ಯದಿಂದ 1,337, ಕಾಯಿಲೆ ಕಾರಣ 1,327 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮಕ್ಕಳೆಲ್ಲರೂ 18 ವರ್ಷದ ಒಳಗಿನವರು. ಇನ್ನು ಕೆಲವು ನಿರುದ್ಯೋಗ, ಸಾಲ, ಅಸಮರ್ಥತೆ, ಡ್ರಗ್ಸ್​ ಸೇವನೆ ಮುಂತಾದ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್​ಸಿಆರ್​ಬಿ ವಿವರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net