

ನವದೆಹಲಿ: ಮಕ್ಕಳಿಂದ ಹಿಡಿದು ದೊಡ್ಡವವರೆಗೂ ಪ್ರತಿಯೊಬ್ಬರು ಇಷ್ಟಪಟ್ಟು ತಿನ್ನುವ ಆಹಾರವೆಂದರೆ ಅದು ಪಿಜ್ಜಾ (Pizza) ಎಂದರೆ ತಪ್ಪಾಗಲಾರದು. ಮನುಷ್ಯ ಎಷ್ಟೇ ಕಠಿಣವಾದ ಡಯಟ್ ಪಾಲಿಸುತ್ತಿದ್ದರು ಒಂದೊಮ್ಮೆ ಮನಸ್ಸಿನ ಮಾತನ್ನು ಕೇಳದೆ ತಿಂದು ಬಿಡುತ್ತಾನೆ. ಪಿಜ್ಜಾ ಒಂದು ವಿದೇಶಿ ಖಾದ್ಯವಾದರು ಭಾರತದಲ್ಲಿ ಹೆಚ್ಚು ಖ್ಯಾತಿ ಗಳಿಸಿದೆ. ಅದೇ ರೀತಿ ಪಿಜ್ಜಾವನ್ನು ಸಂಸ್ಕೃತದಲ್ಲಿ ಏನೆಂದು ಕರೆಯುತ್ತಾರೆ ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದು, ಸದ್ಯ ಈ ಸುದ್ದಿ ವೈರಲ್ ಆಗಿದೆ.
ಯಶ್ ಸಾಳುಂಕೆ ಎಂಬುವವರು ಪಿಜ್ಜಾವನ್ನು (Pizza) ಸವಿಯುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರೊಬ್ಬರು ಪಿಜ್ಜಾವನ್ನು ಸಂಸ್ಕೃತ ಭಾಷೆಯಲ್ಲಿ ಏನೆಂದು ಕರೆಯುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ವ್ಯಕ್ತಿಯು ಪಿಜ್ಜಾವನ್ನು ಸಂಸ್ಕೃತದಲ್ಲಿ ಪಿಸ್ತಾಜಮ್ ಎಂದು ಕರೆಯುವುದಾಗಿ ಹೇಳಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಪಿಸ್ತಾಜಮ್ ಎಂಬುದು ಪ್ರಾಚೀನ ಭಾಷೆಯಲ್ಲಿ ನಿಜವಾದ ಪದವೇ ಅಥವಾ ವಿಡಿಯೋದ ಸಲುವಾಗಿ ವಿನೋದ ಮತ್ತು ಹಾಸ್ಯಮಯ ಆವಿಷ್ಕಾರವಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಅದೇನೇ ಇದ್ದರೂ, ವಿಡಿಯೋವನ್ನು ನೋಡಿರುವ ನೆಟ್ಟಿಗರು ತಮ್ಮಷ್ಟಿದ ಕಮೆಂಟ್ ಹಾಕುತ್ತಿದ್ದು, ಅನೇಕರು ವ್ಯಕ್ತಿಯ ಬುದ್ದಿವಂತಿಕೆಯನ್ನು ಹಾಡಿ ಹೊಗಳುತ್ತಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈವರೆಗೂ 110ಕೆ ವೀವ್ಸ್ ಪಡೆದುಕೊಂಡಿದೆ. ಅನೇಕರು ಎಮೋಜಿಗಳ ಮೂಲಕ ವಿಡಿಯೋಗೆ ಕಮೆಂಟ್ ಹಾಕಿದ್ದು, ಸಂಸ್ಕೃತ ಹೊರತುಪಡಿಸಿ ಬೇರೆ ಬೇರೆ ಭಾಷೆಗಳಲ್ಲಿ ಏನೆಂದು ಕರೆಯುತ್ತಾರೆಂಬುದನ್ನು ತಿಳಿಸಿ ಕೊಡುವಂತೆ ಕೇಳಿದ್ದಾರೆ. ಸದ್ಯ ಈ ವಿಡಿಯೋವನ್ನು ವ್ಯಾಪಕವಾಗಿ ಶೇರ್ ಮಾಡಲಾಗುತ್ತಿದೆ.