ಪೆರ್ರಿ ಪರಿಶ್ರಮ ವ್ಯರ್ಥ, ತವರಿನಲ್ಲಿ ಎಡವಿದ RCB; ಸ್ಮೃತಿ ಪಡೆಗೆ ಹ್ಯಾಟ್ರಿಕ್ ಜಯ ತಪ್ಪಿಸಿದ ಮುಂಬೈ

RCB vs MI
Published on

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್​ನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಮುಂಬೈ ಇಂಡಿಯನ್ಸ್ ಎದುರು ತನ್ನ ಮೊದಲ ಸೋಲನ್ನು ಅನುಭವಿಸಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ತಂಡವು ಎಲ್ಲಿಸ್ ಪೆರ್ರಿ (81 ರನ್, 43 ಎಸೆತ, 11 ಬೌಂಡರಿ, 2 ಸಿಕ್ಸರ್) ಅರ್ಧಶತಕರ ಫಲವಾಗಿ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್​ಗಳಿಸಿತು. 

WPL Points Table

ಆರ್​ಸಿಬಿ ನೀಡಿದ ಗುರಿ ಬೆನ್ನಟ್ಟಿದ ಮುಂಬೈ ತಂಡವು ನ್ಯಾಟ್ ಸಿವರ್-ಬ್ರಂಟ್ (42 ರನ್, 21 ಎಸೆತ, 9 ಬೌಂಡರಿ), ಹರ್ಮನ್‌ಪ್ರೀತ್ ಕೌರ್ (50 ರನ್, 38 ಎಸೆತ, 8 ಬೌಂಡರಿ, 1 ಸಿಕ್ಸರ್), ಅಮನ್‌ಜೋತ್ ಕೌರ್ (34 ರನ್, 27 ಎಸೆತ, 2 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ಆಟದ ಫಲವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮುಂಬೈಗೆ ಗಾರ್ತ್ ಕಡಿವಾಣ

ಯಸ್ತಿಕಾ ಭಾಟಿಯಾ (8) ವಿಕೆಟ್ ಬೇಗನೆ ಕಬಳಿಸಿದ ಕಿಮ್ ಗಾರ್ತ್, ಮುಂಬೈಗೆ ಆರಂಭಿಕ ಆಘಾತ ನೀಡಿದರು. ಆಗ ಹ್ಯಾಲಿ ಮ್ಯಾಡ್ಯೂಸ್ (15), ನಥಾಲಿ ಸೀವರ್ ಬ್ರಂಟ್ (42 ರನ್, 21 ಎಸೆತ, 9 ಬೌಂಡರಿ) 2ನೇ ವಿಕೆಟ್‌ಗೆ 27 ಎಸೆತಗಳಲ್ಲಿ 57 ರನ್ ಕಸಿದು ಚೇತರಿಕೆ ಒದಗಿಸಿದರು. ನಂತರ ಆರ್‌ಸಿಬಿ 16 ರನ್ ಅಂತರದಲ್ಲಿ 3 ವಿಕೆಟ್ ಕಬಳಿಸಿ ಮುಂಬೈಗೆ ಮತ್ತೆ ಶಾಕ್ ನೀಡಿತು. ಆಗ ಹರ್ಮಾನ್‌ ಪ್ರೀತ್ ಮತ್ತು ಅಮನ್‌ಜೋತ್ ಕೌರ್ 5ನೇ ವಿಕೆಟ್‌ಗೆ 49 ರನ್‌ಗಳಲ್ಲಿ 62 ರನ್ ಸೇರಿಸಿ ಮುಂಬೈ ಗೆಲುವಿನಾಸೆಗೆ ಮರುಜೀವ ತುಂಬಿದರು. ಕನಿಕಾ ಎಸೆದ ಇನಿಂಗ್ಸ್ ನ 19ನೇ ಓವರ್‌ನಲ್ಲಿ ಅಮನ್‌ಜೋತ್ 2 ಸಿಕ್ಸರ್ ಸಿಡಿಸಿದ್ದಲ್ಲದೆ, ಪಂದ್ಯದ ಕೊನೇ ಓವರ್‌ನಲ್ಲಿ 6 ರನ್ ಬೇಕಿದ್ದಾಗ 1 ಎಸೆತ ಬಾಕಿ ಇರುವಂತೆಯೇ ಮುಂಬೈ ಗೆಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net