

Rumours: ನಾನು ದೇಶದ್ರೋಹಿ ಅಲ್ಲ.. ನಾನು ಬಿಜೆಪಿಗೆ ಸೇರುತ್ತೇನೆ ಎಂದು ಹೇಳುವರು ನನ್ನ ಕತ್ತು ಸೀಳಿದರೂ, ಕತ್ತರಿಸಿದ ಶ್ವಾಸನಾಳದಿಂದ ''ಮಮತಾ ಬ್ಯಾನರ್ಜಿ ಜಿಂದಾಬಾಂದ್'' ಎಂದು ಘೊಷಣೆ ಕೂಗುತ್ತಲೇ ಇರುತ್ತದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯ, ಬಲಗೈಬಂಟ, ಸಂಸದ ಅಭಿಷೇಕ್ ಬ್ಯಾನರ್ಜಿ ಹೇಳಿಕೆ ನೀಡಿದ್ದಾರೆ.
ತೃಣಮೂಲ ಕಾಂಗ್ರೆಸ್ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ ಬಿಜೆಪಿಗೆ ಹೋಗುತ್ತಾರೆ ಎಂಬ ವದಂತಿಗಳನ್ನು ವಿರುದ್ಧ ಹರಿಹಾಯ್ದರು. '' ಇಂತಹ ನಕಲಿ ಸುದ್ದಿಗಳು ಯಾರು ಹರಡುತ್ತಿದ್ದಾರೆ ನನಗೆ ತಿಳಿದಿದೆ ಎಂದ ಅಭಿಷೇಕ್, ತೃಣಮೂಲದ ಕಾಂಗ್ರೆಸ್ ಮಾಜಿ ನಾಯಕರಾದ ಮುಕುಲ್ ರಾಯ್ ಮತ್ತು ಸುವೇಂದು ಅಧಿಕಾರಿ'' ಎಂದು ಆರೋಪಿಸಿದರು.
ಮುಂದಿನ 2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಅವರು ಸ್ವಾರ್ಥ ಹಿತಾಸಕ್ತಿಯನ್ನು ಹೊಂದಿದ್ದಾರೆ. ಅವರು ದೇಶದ್ರೋಹಿಗಳು ಎಂದರು. ಶಿಕ್ಷಕರ ನೇಮಕಾತಿ ಹಗರಣದ ತನಿಖೆಯಲ್ಲಿ ಹೊಸ ಚಾರ್ಜ್‌ಶೀಟ್ ಸಲ್ಲಿಸಿದ್ದಕ್ಕಾಗಿಯೂ ಅಭಿಷೇಕ್ ಬ್ಯಾನರ್ಜಿ ಸಿಬಿಐ ವಿರುದ್ಧ ಹರಿಹಾಯ್ದರು.(ಏಜೆನ್ಸೀಸ್)