

TV, Mobile:ಇತ್ತೀಚಿನ ದಿನಮಾನಗಳ ಈ ತಾಂತ್ರಿಕ ಯುಗದಲ್ಲಿ ದಿನನಿತ್ಯ ಮಕ್ಕಳಿಗೆ ಟಿವಿ ಮತ್ತು ಮೊಬೈಲ್ ತೋರಿಸಿಯೇ ಪಾಲಕರು ಊಟ ಮಾಡಿಸುತ್ತಾರೆ. ಅಲ್ಲದೆ, ಇದು ಮಕ್ಕಳಿಗೂ ಕೂಡ ಅಭ್ಯಾಸವಾಗಿಬಿಟ್ಟಿದೆ. ಮನೆಯಲ್ಲಿ ಟಿವಿ ಅಥವಾ ಮೊಬೈಲ್ ಇಲ್ಲವಾದರೆ ಅಂದು ಊಟನೇ ಇಲ್ಲ ಎಂಬಾತಾಗಿದೆ. ಮನೋರಂಜನೆ ಪಡೆಯುತ್ತ ಮಕ್ಕಳು ಊಟ ಮಾಡುತ್ತಾರೆ ಎಂದು ಅಮ್ಮ ಅಂದುಕೊಂಡಿರುತ್ತಾಳೆ. ಆದರೆ, ಈ ಶಾರ್ಟ್ಕಟ್ ನಿಂದ ಮಗುವಿಗೆ ಏನೆಲ್ಲಾ ಅಪಾಯಗಳು ಎದುರಾಗಲಿವೆ ಎಂದು ತಿಳಿದುಕೊಳ್ಳಿ.
ಮಕ್ಕಳ ಆಹಾರ ಪದ್ಧತಿ ಕುರಿತಂತೆ ಎನ್ವಿರಾರ್ಮೆಂಟಲ್ ಜನರಲ್ ಆಪ್ ಹೆಲ್ತ್ ನಿಯತಕಾಲಿಕೆ(ಮ್ಯಾಗ್ಜಿನ್)ಯು ಸಂಶೋಧನೆಯೊಂದನ್ನು ಪ್ರಕಟಿಸಿದೆ. ಇದರ ಪ್ರಕಾರ, ಟಿವಿ ಮತ್ತು ಮೊಬೈಲ್ ತೋರಿಸಿ ಊಟ ಮಾಡುವ ಮಕ್ಕಳು ಭವಿಷ್ಯದಲ್ಲಿ ಪ್ರತಿಬಾರಿ ಊಟಕ್ಕೆ ಮತ್ತು ಸಣ್ಣಪುಟ್ಟ ವಿಚಾರಕ್ಕೆ ಕೋಪ ಮಾಡಿಕೊಳ್ಳುತ್ತಾನೆ ಇರುತ್ತಾರೆ ಎಂದು ಅಧ್ಯಯನ ಹೇಳಿದೆ. ಅಲ್ಲದೆ, 10 ವರ್ಷದವರೆಗೆ ಮಕ್ಕಳು ಟಿವಿ ಮತ್ತು ಮೊಬೈಲ್ ನೋಡುತ್ತಾ ಊಟ ಮಾಡಿದರೆ ಮುಂದೆ ಬೊಜ್ಜು ಬೆಳೆಯುತ್ತದೆ. ಬೊಜ್ಜಿಗೆ ಬಲಿಯಾಗುವ ಸಂಭವ ಇದೆ. ಜತೆಗೆ ಅನೇಕ ರೋಗಗಳು ಕೂಡ ಕಾಣಿಸಕೊಳ್ಳಲಿವೆ ಎಂದು ವರದಿ ಉಲ್ಲೇಖಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಮಕ್ಕಳು ಎಲೆಟ್ರಾನಿಕ್ಸ್ ಗ್ಯಾಜೆಟ್‌ಗಳಿಂದ ದೂರವಿರಬೇಕು ಎಂಬ ವರದಿ ಬಿಡುಗಡೆ ಮಾಡಿದೆ. ಈ ವರದಿಯಲ್ಲಿ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸ್ಕ್ರೀನ್ ಸಮಯವನ್ನು ನಿರ್ಧರಿಸಲಾಗಿದೆ. ಈ ಮಕ್ಕಳ ಅತಿಯಾದ ಸ್ಕ್ರೀನ್ ಸಮಯವು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ವರದಿಯಲ್ಲಿ, WHO ಮಕ್ಕಳು ಮೊಬೈಲ್, ಟಿವಿ ಅಥವಾ ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಂದ ದೂರವಿರಲು ಸೂಚಿಸಿದೆ.
1.ಚಯಪಚಯ ಕ್ರಿಯೆ ನಿಧಾನ
2.ಮಕ್ಕಳು ಅತಿಯಾದ ತಿನ್ನುವಿಕೆ
3.ಜಂಕ್ ಪುಡ್ ತಿನ್ನಲಿ ಇಷ್ಟಪಡುತ್ತಾರೆ
4. ಬೊಜ್ಜು ಬರುತ್ತದೆ
5.ಪೌಷ್ಠಿಕಾಂಶದ ಕೊರತೆ.(ಏಜೆನ್ಸೀಸ್)