Foods Fried: ಸಾಮಾನ್ಯವಾಗಿ ಮನೆಯ ಅಡುಗೆ ಎಣ್ಣೆ ಇಲ್ಲದೆ ಅಡುಗೆ ಅಸಾಧ್ಯ ಎನಿಸುತ್ತದೆ. ಕಳೆದ ಕೆಲ ದಶಕಗಳಿಂದ ಎಣ್ಣೆಯಲ್ಲಿ ಕರೆದ ಆಹಾರ ತಿನ್ನುತ್ತಾ ಬಂದಿದೆ. ಆದರೆ, ಇದೀಗ ಆರೋಗ್ಯದ ಹಿತಾದೃಷ್ಠಿಯಿಂದ ರಸ್ತೆಯ ಬದಿಯಲ್ಲಿ ಸೇರಿ ಮನೆಯಲ್ಲಿ ಕೂಡ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವನೆ ಮಾಡಲು ಹಿಂಜರಿಯುತ್ತೇವೆ.
ಇದನ್ನೂ ಓದಿ:ಬಿಸಿಲಲ್ಲಿ ಸೆಖೆ ತಾಳಲಾರದೆ ICE ನೀರು ಕುಡಿದ್ರೆ ಜೀವಕ್ಕೆ ಅಪಾಯ ಖಂಡಿತ! Summer Health
ಎಣ್ಣೆಯಲ್ಲಿ ಕರಿದ ಪದಾರ್ಥ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರುತ್ತವೆ ಎಂದು ಅನೇಕ ತಜ್ಞರು ಮತ್ತು ಅಧ್ಯಯನಗಳು ವರದಿ ಮಾಡಿವೆ. ಇತ್ತೀಚಿನ ದಿನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ ಅವಿಷ್ಕಾರದಿಂದ ಹೊಸ ಬಗೆಯ ಎಣ್ಣೆ ಬಳಸದೆ ಆಹಾರ ಪದಾರ್ಥಗಳನ್ನು ಬೇಯಿಸುವ ಸಾಧನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಅದರಲ್ಲೂ ಏರ್ ಫ್ರೈಯರ್ ಸಾಧನ ಬಳಕೆಯಿಂದ ಕ್ಯಾನ್ಸರ್ ರೋಗದ ಅಪಾಯ ಕಡಿಮೆ ಎಂದು ವರದಿಗಳು ಉಲ್ಲೇಖಿಸಿವೆ.
ಕಳೆದ ಕೆಲವು ವರ್ಷಗಳಿಂದ ಏರ್ ಫ್ರೈಯರ್ ಪ್ರವೃತ್ತಿಯಲ್ಲಿದೆ. ಹಾಗೆ ಹೇಳುವುದಾದರೆ, ಕ್ಯಾನ್ಸರ್ ಅಪಾಯದ ವಿಷಯದಲ್ಲಿ ಏರ್ ಫ್ರೈಯರ್ ಅನ್ನು ಬಳಸುವುದು ಸಾಮಾನ್ಯವಾಗಿ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದರಲ್ಲಿ ಎಣ್ಣೆ ಬಳಕೆ ತುಂಬಾ ಕಡಿಮೆ. ಇದು ಅಕ್ರಿಲಾಮೈಡ್ ನಂತಹ ಹಾನಿಕಾರಕ ಸಂಯುಕ್ತಗಳ ರಚನೆಯನ್ನು ಕಡಿಮೆ ಮಾಡುತ್ತದೆ. ಇದು ಎಣ್ಣೆಯಿಂದ ಹೆಚ್ಚಿನ ತಾಪಮಾನದಲ್ಲಿ ಅಡುಗೆ ಮಾಡುವಾಗ ಉತ್ಪತ್ತಿಯಾಗುವ ಸಂಭಾವ್ಯ ಕ್ಯಾನ್ಸರ್ ಕಾರಕವಾಗಿದೆ. ಆದ್ದರಿಂದ ಏರ್ ಫ್ರೈಯರ್‌ನಲ್ಲಿ ಅಡುಗೆ ಮಾಡುವುದರಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಬಿಸಿಲಲ್ಲಿ ಸೆಖೆ ತಾಳಲಾರದೆ ICE ನೀರು ಕುಡಿದ್ರೆ ಜೀವಕ್ಕೆ ಅಪಾಯ ಖಂಡಿತ! Summer Health
ಏರ್ ಫ್ರೈಯರ್ ಪ್ರಯೋಜನಗಳು
ಏರ್ ಫ್ರೈಯರ್‌ನಲ್ಲಿ ಆಹಾರವನ್ನು ಬಹಳ ಕಡಿಮೆ ಎಣ್ಣೆಯಲ್ಲಿ ಬೇಯಿಸಲಾಗುತ್ತದೆ (ಕುಕಿಂಗ್ ಫುಡ್ ಇನ್ ಏರ್ ಫ್ರೈಯರ್). ಇದರ ಬಳಕೆ ಕೂಡ ತುಂಬಾ ಸುಲಭ. ಇದು ಸಮಯವನ್ನೂ ಉಳಿಸುತ್ತದೆ. ಕೊಲೆಸ್ಟ್ರಾಲ್, ಬೊಜ್ಜು ಮತ್ತು ರಕ್ತದೊತ್ತಡ ಹೆಚ್ಚಾಗುವ ಭಯದಿಂದ ಕರಿದ ಆಹಾರವನ್ನು ತಿನ್ನಲು ಸಾಧ್ಯವಾಗದ ಜನರು ಏರ್ ಫ್ರೈಯರ್ ಅನ್ನು ಬಳಸಬಹುದು. ನೀವು ಅದರಲ್ಲಿ ಆಲೂಗಡ್ಡೆ ಟಿಕ್ಕಿ, ಸಮೋಸಾ ಮುಂತಾದವುಗಳನ್ನು ಮಾಡಿ ತಿನ್ನಬಹುದು. ಆದಾಗ್ಯೂ, ಇದು ಎಷ್ಟರ ಮಟ್ಟಿಗೆ ಸರಿ ಎಂದು ತಿಳಿಯಲು ತಜ್ಞರನ್ನು ಸಂಪರ್ಕಿಸಬೇಕು.
ಇದನ್ನೂ ಓದಿ:ಸೌಲಭ್ಯಕ್ಕೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ: ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ
ತೈಲ ಅಪಾಯ ಕಡಿಮೆಯಾಗಿದೆ: ಏರ್ ಫ್ರೈಯರ್‌ಗಳು ಕನಿಷ್ಠ ಎಣ್ಣೆಯನ್ನು ಬಳಸುತ್ತವೆ. ಇದು ಹೆಚ್ಚಿನ ಪ್ರಮಾಣದಲ್ಲಿ ಬಿಸಿ ಎಣ್ಣೆಯಲ್ಲಿ ಅಡುಗೆ ಮಾಡುವಾಗ ರೂಪುಗೊಳ್ಳಬಹುದಾದ ಸಂಭಾವ್ಯ ಹಾನಿಕಾರಕ ಸಂಯುಕ್ತಗಳ ಪ್ರಮಾಣವನ್ನು ಬಹಳವಾಗಿ ಕಡಿಮೆ ಮಾಡುತ್ತದೆ.
ಅಕ್ರಿಲಾಮೈಡ್: ಏರ್ಫ್ರೈಯರ್ಲ್ಲಿ ಹುರಿಯುವಾಗ ಇನ್ನೂ ಸ್ವಲ್ಪ ಅಕ್ರಿಲಾಮೈಡ್ ಉತ್ಪತ್ತಿಯಾಗಬಹುದು. ಆದರೆ ಡೀಪ್ ಫ್ರೈಯಿಂಗ್‌ಗೆ ಹೋಲಿಸಿದರೆ ಮಟ್ಟಗಳು ಸಾಮಾನ್ಯವಾಗಿ ತುಂಬಾ ಕಡಿಮೆ.
ಅತಿಯಾಗಿ ಬೇಯಿಸಬೇಡಿ: ನಿಮ್ಮ ಆಹಾರವನ್ನು ಸುಡುವುದನ್ನು ತಪ್ಪಿಸಿ ಏಕೆಂದರೆ ಇದು ಹಾನಿಕಾರಕ ಸಂಯುಕ್ತಗಳ ರಚನೆಯನ್ನು ಹೆಚ್ಚಿಸುತ್ತದೆ.
ಆರೋಗ್ಯಕರ ಎಣ್ಣೆಗಳನ್ನು ಆರಿಸಿ: ಎಣ್ಣೆಗಳನ್ನು ಸೇರಿಸುವುದಾದರೆ, ಹೆಚ್ಚಿನ ಹೊಗೆ ಬಿಂದುವಿರುವ ಆರೋಗ್ಯಕರ ಎಣ್ಣೆಗಳನ್ನು ಸಣ್ಣ ಪ್ರಮಾಣದಲ್ಲಿ ಬಳಸಿ. ಸಂಭಾವ್ಯ ಅಪಾಯಗಳನ್ನು ಕಡಿಮೆ ಮಾಡಲು ವಿವಿಧ ಅಡುಗೆ ವಿಧಾನಗಳನ್ನು ಅಳವಡಿಸಿಕೊಳ್ಳಿ.
ಅನಾನುಕೂಲಗಳೇನು?
1. ಹೆಚ್ಚಿನ ಉರಿಯಲ್ಲಿ ಬೇಯಿಸುವುದರಿಂದ ಏರ್ ಫ್ರೈಯರ್‌ನಲ್ಲಿ ಇರಿಸಲಾದ ಆಹಾರದ ಪೋಷಕಾಂಶಗಳು ಕಣ್ಮರೆಯಾಗಬಹುದು.
2. ಅಕ್ಕಿ, ಜೋಳ ಮತ್ತು ಕೆಲವು ತರಕಾರಿಗಳಂತಹ ಪಿಷ್ಟಯುಕ್ತ ಆಹಾರಗಳನ್ನು ಏರ್ ಫ್ರೈಯರ್‌ನಲ್ಲಿ ದೀರ್ಘಕಾಲ ಬೇಯಿಸಿದಾಗ, ಅಕ್ರಿಲಾಮೈಡ್ ಎಂಬ ಸಂಯುಕ್ತವು ಉತ್ಪತ್ತಿಯಾಗುತ್ತದೆ. ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.(ಏಜೆನ್ಸೀಸ್)
ಸಾಲ ವಸೂಲಿಗೆ ಬಂದ ಬ್ಯಾಂಕ್ ಉದ್ಯೋಗಿಯನ್ನೇ ಮದುವೆಯಾದ ವಿವಾಹಿತ ಮಹಿಳೆ!: ನಡೆದಿದ್ದೇನು ಗೊತ್ತೆ? | Marries