ಪತಿಯ ಬಟ್ಟೆ ಇಸ್ತ್ರಿ ಮಾಡುತ್ತಿದ್ದ ಇಶಾ…ಕೋಟ್ಯಧಿಪತಿಯಾಗಿದ್ದರೂ ಮನೆ ಕೆಲಸ ಮಾಡುತ್ತಿದ್ದರೇಕೆ?

isha 2 new
Published on

ಮುಂಬೈ: ಇಶಾ ಡಿಯೋಲ್ ಮತ್ತು ಭರತ್ ತಖ್ತಾನಿ ವಿಚ್ಛೇದನದ ಬಗ್ಗೆ ಇಡೀ ಜಗತ್ತೇ ಮಾತನಾಡುತ್ತಿದೆ. ಇಶಾ ಮತ್ತು ಭರತ್ ಬೇರೆಯಾಗಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಾಗಿನಿಂದ ಅವರ ವೈಯಕ್ತಿಕ ಜೀವನದ ಬಗ್ಗೆ ಹಲವಾರು ಶಾಕಿಂಗ್ ವಿಷಯಗಳು ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ ಬಂದ ಕೆಲವು ಮಾಧ್ಯಮ ವರದಿಗಳ ಪ್ರಕಾರ, ಭರತ್ ತಖ್ತಾನಿ ಅವರ ಜೀವನದಲ್ಲಿ ಒರ್ವ ಯುವತಿ ಇದ್ದಾಳೆ. ಆಕೆಯ ಜೊತೆ ಈತ ವಿವಾಹೇತರ ಸಂಬಂಧವನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ, ಇಶಾ ಡಿಯೋಲ್ ಕೂಡ ಈ ಸಂಬಂಧದಲ್ಲಿ ಕೆಲವು ತಪ್ಪುಗಳನ್ನು ಎಸಗಿರುವುದು ಬೆಳಕಿಗೆ ಬಂದಿದೆ.

ಪತಿಯ ಬಟ್ಟೆ ಇಸ್ತ್ರಿ ಮಾಡುತ್ತಿದ್ದ ಇಶಾ  ಈ ಎಲ್ಲಾ ಸುದ್ದಿಗಳ ನಡುವೆ ಇದೀಗ ರಹಸ್ಯವೊಂದು ಹೊರಬಿದ್ದಿದ್ದು, ನಿಮಗೂ ಅಚ್ಚರಿ ಮೂಡಿಸುತ್ತದೆ. ಡಿಯೋಲ್ ಕುಟುಂಬದ ಮಗಳು ಮತ್ತು ನಟಿಯೂ ಆಗಿರುವ ಇಶಾ ಡಿಯೋಲ್ ಮದುವೆಯ ನಂತರ ನೀವು ಊಹಿಸಲೂ ಸಾಧ್ಯವಾಗದ ಕೆಲವು ಕೆಲಸಗಳನ್ನು ಮಾಡುತ್ತಿದ್ದರು. ಕೋಟಿಗಟ್ಟಲೆ ಪ್ರಾಪರ್ಟಿಯ ಒಡತಿಯಾದ ಇಶಾ ತನ್ನ ಉದ್ಯಮಿ ಪತಿಯನ್ನು ಮದುವೆಯಾದ ನಂತರವೂ ಮನೆಕೆಲಸಗಳನ್ನು ಮಾಡುತ್ತಿದ್ದರು. ಇದನ್ನು ಸ್ವತಃ ಇಶಾ ಡಿಯೋಲ್ ಅವರ ಪುಸ್ತಕದ ಮೂಲಕ ಬಹಿರಂಗಪಡಿಸಿದ್ದಾರೆ. ಇಂತಹ ಹಲವು ವೈಯಕ್ತಿಕ ವಿಷಯಗಳನ್ನು ನಟಿ ತಮ್ಮ ಪುಸ್ತಕದಲ್ಲಿ ಬರೆದಿದ್ದು, ಇದೀಗ ಜನರ ಗಮನ ಸೆಳೆಯುತ್ತಿದೆ. ಗಂಡನ ಬಟ್ಟೆಗೆ ಇಸ್ತ್ರಿ ಹಾಕುತ್ತಿದ್ದದು ಮತ್ತು ಗಂಡ ಆಕೆಯ ಮೇಲೆ ಅವಲಂಬಿತನಾಗಿರುತ್ತಿದ್ದದ್ದು ಇವುಗಳಲ್ಲಿ ಒಂದು.

ಪುಸ್ತಕದಿಂದ ಬಹಿರಂಗ  ಇಶಾ ಡಿಯೋಲ್ ತಮ್ಮ ಪುಸ್ತಕ 'Amma Mia : Stories, Advice and Recipes f: Stories, Advice and Recipes from One Mother to Another' ದಲ್ಲಿ ತಮ್ಮ ಎರಡನೇ ಮಗಳು ಹುಟ್ಟಿದ ನಂತರ ತನ್ನ ಪತಿ ತನ್ನೊಂದಿಗೆ ಹೇಗೆ ಕಿರಿಕಿರಿ ಮಾಡಲು ಪ್ರಾರಂಭಿಸಿದರು ಎಂಬುದನ್ನು ಹೇಳಿದ್ದಾರೆ. ವಾಸ್ತವವಾಗಿ, ನಟಿ ತನ್ನ ಗಂಡನನ್ನು ಮಕ್ಕಳ ಮುಂದೆ ನಿರ್ಲಕ್ಷಿಸಲು ಪ್ರಾರಂಭಿಸಿದರು ಮತ್ತು ಅವರ ಅಗತ್ಯಗಳನ್ನು ನೋಡಿಕೊಳ್ಳುವಲ್ಲಿ ವಿಫಲವಾದರು. ಭರತ್ ತಖ್ತಾನಿ ಕಡೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ನೀಡುತ್ತಾ, ಇಶಾ ಡಿಯೋಲ್ ತನ್ನ ಪತಿಯ ಅಗತ್ಯಗಳು ಕಡಿಮೆಯಾದರೂ, ಆಗಾಗ್ಗೆ ಅವರ ವಿಷಯಗಳನ್ನು ಮರೆತುಬಿಡುವುದನ್ನು ಈ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ. ಈ ಸಮಯದಲ್ಲಿ, ಭರತ್ ತಖ್ತಾನಿ ತನ್ನ ಬಳಿ ಹೊಸ ಟೂತ್ ಬ್ರಶ್ ಕೇಳಿದ ಘಟನೆಯನ್ನು ಉಲ್ಲೇಖಿಸಿದ್ದಾರೆ. ಆದರೆ ಈ ಆಲೋಚನೆ ಅವರ ಮನಸ್ಸಿನಿಂದ ಹೇಗೆ ಹೊರಹೊಮ್ಮಿತು ಎಂದು ತಿಳಿದಿಲ್ಲ.

ಇದಲ್ಲದೆ, ಒಮ್ಮೆ ಭರತ್ ತಖ್ತಾನಿ ಅವರ ಶರ್ಟ್ ಐರನ್ ಮಾಡುವುದದನ್ನು ಮರೆತಿದ್ದೆ ಮತ್ತು ಕಚೇರಿಗೆ ಹೋಗುವಾಗ ಅವರಿಗೆ ನೀಡಿದ ಊಟದ ಬಾಕ್ಸ್ ಅನ್ನು ಸಹ ಪರಿಶೀಲಿಸಲಿಲ್ಲ ಎಂದು ನಟಿ ಹೇಳಿದ್ದಾರೆ. ಇಶಾ ಎಷ್ಟೇ ಶ್ರೀಮಂತರಾಗಿದ್ದರೂ ಗಂಡನ ಸಣ್ಣಪುಟ್ಟ ಕೆಲಸಗಳನ್ನು ಸಾಮಾನ್ಯ ಗೃಹಿಣಿಯಂತೆ ನೋಡಿಕೊಳ್ಳುತ್ತಿದ್ದರು ಎಂಬುದು ಇದನ್ನೆಲ್ಲ ಓದಿದ ಮೇಲೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಅವರ ಬಟ್ಟೆಗಳನ್ನು ತನ್ನ ಕೈಯಾರೆ ಐರನ್ ಮಾಡುವುದು, ಅವರಿಗೆ ಆಹಾರ ನೀಡುವುದು ಅವರ ಪ್ರೀತಿಯನ್ನು ವ್ಯಕ್ತಪಡಿಸುವ ಮಾರ್ಗಗಳಾಗಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net