MyGovIndia ಕೂಡಾ 'ಟಿಕ್​ಟಾಕ್​' ​ನಲ್ಲಿದೆ!!!

TikTok MyGov Account 7 JUN 20
Published on

ನವದೆಹಲಿ: ಚೀನಾ ಉತ್ಪನ್ನಗಳ, ಆ್ಯಪ್​ಗಳ ಬಳಕೆಯನ್ನು ನಿಲ್ಲಿಸಿ ಅಭಿಯಾನ ಜೋರಾಗಿಯೇ ನಡೆಯುತ್ತಿದೆ. ಆದಾಗ್ಯೂ, ಟಿಕ್​ಟಾಕ್ ಜನಪ್ರಿಯವಾದ ಆ್ಯಪ್​ ಎಂಬುದಕ್ಕೆ ಯಾರ ಆಕ್ಷೇಪವೂ ಇಲ್ಲ. ಭಾರತದ ಸರ್ಕಾರದ MyGovIndia ಕೂಡ ಇದರಲ್ಲಿ ಖಾತೆ ಹೊಂದಿದ್ದು 8.8 ಲಕ್ಷಕ್ಕೂ ಹೆಚ್ಚು ಫಾಲೋಯರ್ಸ್​ ಹೊಂದಿದೆ. ಸರ್ಕಾರ ಅನೇಕ ಘೋಷಣೆಗಳನ್ನು, ವಿವಿಧ ಜಾಗೃತಿ ಅಭಿಯಾನಗಳ ವಿಡಿಯೋಗಳನ್ನು ಟಿಕ್​ಟಾಕ್​ನಲ್ಲಿ ಅಪ್ಲೋಡ್ ಮಾಡುತ್ತಿದೆ.

ಪರಿಸರ ದಿನಾಚರಣೆ, ಮೈಲೈಫ್ ಮೈಯೋಗ ಹ್ಯಾಷ್​ ಟ್ಯಾಗ್​ಗಳಿರುವ ವಿಡಿಯೋ ತೀರಾ ಇತ್ತೀಚಿನವು. MyGovIndia ಹೆಸರಿನಲ್ಲಿ ನಕಲಿ ಖಾತೆಗಳೂ ಇದ್ದು, ನೀಲಿ ಟಿಕ್ ಮಾರ್ಕ್​ ಇರುವುದು ಅಧಿಕೃತ ಖಾತೆಯಾಗಿದೆ. ಇದರಲ್ಲಿ 8.83 ಲಕ್ಷ ಫಾಲೋಯರ್ಸ್ ಇದ್ದಾರೆ. ಮೈಗೌ ಇಂಡಿಯಾದ ಅಧಿಕೃತ ಖಾತೆಯ ಬಯೋಡೇಟಾ ವಿಭಾಗದಲ್ಲಿ “Citizen engagement platform of Government of India.” ಎಂಬ ಹೇಳಿಕೆಯೂ ಇದೆ.

ಒಂದೆಡೆ ಚೀನಾ ಉತ್ಪನ್ನಗಳ ಬಳಕೆಗೆ ವಿರೋಧ ಜನರಿಂದ ವ್ಯಕ್ತವಾಗುತ್ತಿದ್ದು, ಅಭಿಯಾನ ನಡೆದಿದೆ. ಸರ್ಕಾರ ಇನ್ನೂ ಚೀನಾದ ವಿಷಯವಾಗಿ ಅಧಿಕೃತ ನಿಲುವು ತಾಳಿಲ್ಲ ಎಂಬುದು ಇಲ್ಲಿ ವ್ಯಕ್ತವಾಗಿದೆ ಎಂಬ ಟೀಕೆ ಕೇಳಿ ಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net